ಸರ್ಕಾರಿ ಶಾಲೆ ಚಿಣ್ಣರೊಂದಿಗೆ ಮಕ್ಕಳ ದಿನಾಚರಣೆ

ನವೆಂಬರ್ ತಿಂಗಳು ಬಂತೆಂದರೆ ಸಾಕು ಮಕ್ಕಳಿಗೆ ಎಲ್ಲಿಲ್ಲದ ಸಂತೋಷ, ಸಂಭ್ರಮ ಮನೆ ಮಾಡುತ್ತದೆ. ಏಕೆಂದರೆ ೧೪ ರಂದು ಮಕ್ಕಳ ದಿನಾಚರಣೆ. ಚಿಣ್ಣರು ವಿವಿಧ ವೇಷ ಭೂಷಣಗಳನ್ನು ತೊಟ್ಡು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಅದಕ್ಕಾಗಿ ಮಕ್ಕಳ ಪಾಲಿಗೆ ಇದು ಅತ್ಯಂತ ಮಹತ್ವದ ದಿನ. ಆದರೆ ಇದಕ್ಕೊಂದು ವೇದಿಕೆ ಬೇಕಲ್ಲವೆ.ಈ ಅವಕಾಶವನ್ನು ಕರ್ನಾಟಕದ ಮನೆ ಮಾತಾಗಿರು ನಂಬರ್ ಜೀ ಕನ್ನಡ ವಾಹಿನಿ ಅವಕಾಶ ಕಲ್ಪಿಸಿತ್ತು. ಅದು ಹೇಗೆ ಅಂತೀರಾ “ಬಣ್ಣಿಸು” ಬಯಸಿದ ಚಿತ್ರ ಬರೆಯೋಣದೊಂದಿಗೆ ವಿನೂತನವವಾಗಿ ಆಚರಿಸಿತು. ಜೀ ಕನ್ನಡದ ಅತ್ಯಂತ ಜನಪ್ರಿಯ ಪ್ರತಿಭೆಗಳ ಜತೆ ಪರಿಸರ ಉಳಿಸಿ ಧ್ಯೇಯದೊಂದಿಗೆ ಆಚರಿಸಿದ್ದು ಈ ಬಾರಿಯ ಮಕ್ಕಳ ದಿನಾಚರಣೆಯ ಮತ್ತೊಂದು ಹೈಲೈಟ್.

 

s2
ಈ ಮಹತ್ವದ ದಿನವನ್ನು ಸರ್ಕಾರಿ ಶಾಲಾ ಮಕ್ಕಳೊಂದಿಗೆ ಜೀ ವಾಹಿನಿಯ ಪ್ರತಿಭೆಗಳು ಮಂಡ್ಯ ಮತ್ತು ಗದಗ ನಗರಗಳಿಗೆ ತೆರಳಿ ಆಚರಿಸಿತು. ಬಣ್ಣಿಸು ಮುಖೇನ ಉತ್ತರ ಮತ್ತು ದಕ್ಷಿಣ ಕರ್ನಾಟಕವನ್ನು ಬೆಸೆಯುವ ಮೂಲಕ ಭವಿಷ್ಯದ ಪೀಳಿಗೆಗೆ ಮುನ್ನುಡಿ ಬರೆಯಿತು.
ಅಂದಹಾಗೆ ಬಣ್ಣಿಸು ಬಯಸಿದ ಚಿತ್ರ ಬರೆಯೋಣ ಎಂದರೆ ನಮ್ಮ ಕಲ್ಪನೆಗಳನ್ನು ಚಿತ್ರರೂಪಕ್ಕೆ ತರುವುದು ಎಂಬ ಅರ್ಥ. ಇದು ಯುವ ಪೀಳಿಗೆಗೆ ಸ್ಫೂರ್ತಿ ನೀಡಿ ಅವರೊಳಗಿನ ಪ್ರತಿಭೆ ಹೊರ ತರುಲು ಈ ಕಾರ್ಯಕ್ರಮ ವೇದಿಕೆಯಾಯಿತು. ಭೂಮಿಯನ್ನು ರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಯ ಪರಿಸರ ರಕ್ಷಿಸಿ ಎಂಬ ಘೋಷ ವಾಕ್ಯದೊಂದಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿತ್ತು. ಜೀ ಕನ್ನಡ ವಾಹಿನಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯವುದರಲ್ಲಿ ಎತ್ತಿದ ಕೈ. ಹೀಗಾಗಿ ಯುವ ಪೀಳಿಗೆಗೆ ಸ್ಪೂರ್ತಿ ತುಂಬುವಲ್ಲಿ ಸಫಲವಾಯಿತು. ಒಂದರಿಂದ ಐದನೆ ತರಗತಿಯ ಮಂಡ್ಯ ಮತ್ತು ಗದಗ ಜಿಲ್ಲೆಗಳಿಂದ ೩೦೦ಕ್ಕೂ ಹೆಚ್ಚು ಮಕ್ಕಳು ಜೀ ಬ್ರಾಂಡ್‌ನ ಡ್ರಾಯಿಂಗ್ ಹಾಳೆ ಮತ್ತು ಬಣ್ಷದ ಪೆನ್ಸಿಲ್ ಗಳೊಂದಿಗೆ ಬಣ್ಷದ ಕಿಟ್ ಹಿಡಿದು ಆಗಮಿಸಿದ್ದು ಗಮನಸೆಳೆಯಿತು.
ಈ ಎರಡೂ ಜಿಲ್ಲೆಗಳ ಮಕ್ಕಳು ೫ ಪ್ರತಿಷ್ಠಿತ ತೀರ್ಪುಗಾರರಿಂದ ತರಬೇತಿ ಪಡೆದು ಸ್ಪರ್ಧೆ ಪೂರ್ಣಗೊಳಿಸಲು ಒಂದು ತಾಸು ಕಾಲಾವಕಾಶ ನೀಡಲಾಗಿತ್ತು. ಕಾಮಿನಿ ಕಿಲಾಡಿಗಳು ಸೀಸನ್ ಎರಡರ ಮಡೇನೂರು ಮನು, ಕಾಮಿಡಿ ಕಿಲಾಡಿಗಳು ಸೀಸನ್ ಎರಡರ ಮಂಥನ ಮತ್ತು ಸರೆಗಮ ಲಿಟ್ಲ್ ಚಾಂಪ್ಸ್ ಸೀಸನ್ ೧೪ ರ ಸೃಜನ್ ಪಟೇಲ್ ತೀರ್ಪು ಗಾರರಾಗಿದ್ದರು. ಇದು ಮಂಡ್ಯದ ಭಾಗವಾದರೆ ಗದಗದಲ್ಲಿ ಸರೆಗಮಪ ಸೀಸನ್ ೧೧ ರ ಶೀರಾಮ್ ಕಸರ್ ಮತ್ತು ಸರೆಗಮಪ ಲಿಟ್ಲ್ ಚಾಂಪ್ಸ್ ಸೀಸನ್ ೧೬ ರ ಸಂಗೀತಾ ತೀರ್ಪು ಗಾರರಾಗಿದ್ದರು.

s3
ಅತ್ಯಂತ ಉತ್ಸಾಹ,ಲವಲವಿಕೆಯ ಸೃಜನಾತ್ಮಕ ಸ್ಪರ್ಧೆಯಲ್ಲಿ ಎರಡೂ ನಗರಗಳಿಂದ ಮೂವರು ವಿಜೇತರನ್ನು ಆಯ್ಕೆ ಮಾಡಲಾಯಿತು. ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ಸ್ಮರಣಿಕೆ ನೀಡುವ ಮೂಲಕ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಉತ್ತೇಜನ ದೊರೆಯಿತು. ಇದರಿಂದಾಗಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸದ್ದಿಲ್ಲದೆ ಪ್ರತಿಭಾವಂತ ಕಲಾವಿದರೊಂದಿಗೆ ಬೆರೆಯುವ ಅವಕಾಶ ಪ್ರಾಪ್ತವಾಯಿತು. ತಮ್ಮಬೆಳವಣಿಗೆಯ ಮೂಲಕ ವೈಯಕ್ತಿಕ ಹೋರಾಟಗಳು ಅತ್ಯುತ್ತಮ ಯಶಸ್ಸಿಗೆ ಕಾರಣವಾಯಿತು. ಅಷ್ಟೇ ಅಲ್ಲ ಎಲ್ಲ ವಿದ್ಯಾರ್ಥಿಗಳಿಗೆ ಸ್ಪೂರ್ತಿ ದಿನವಾಗುವ ಅದ್ಬುತ ಗುರಿಯ ಪ್ರಯಾಣ ಮುಂದುರಿಸಲು ಅವಕಾಶವಾಯಿತು.
ಕೆಳ ಮಧ್ಯಮ ಹಿನ್ನಲೆಯಿಂದ ಬಂದ ನಾನು ನನ್ನ ಪ್ರತಿಭೆಯನ್ನು ಗುರುತಿಸಲು ಯಾವುದೇ ಮಾನದಂಡ ಅಥವಾ ಪ್ರೋತ್ಸಾಹ ವಿರಲಿಲ್ಲ. ಮನೆಯಲ್ಲಿ ಹೆಚ್ಚಾಗಿ ಕಾಡುತ್ತಿದ್ದ ನನ್ನನ್ನು ಅಜ್ಜಿ ಮತ್ಯ ಶಿಕ್ಷಕಿ ಜೀ ಕನ್ನಡದ ಸರೆಗಮ ಆಡಿಷನ್ ಕಳುಹಿಸಲು ನಿರ್ಧಾರಿಸುದರು ಎಂದನು ಸೀಸನ್ ೧೪ ರ ಪಟೇಲ್ ಹೇಳಿದ್ದು ಹೀಗೆ.
ಕಾಮಿಡಿ ಕಿಲಾಡಿಗಳು ಸೀಸನ್ ಎರಡರ ಮಡಿನೂರು ಹೇಳುವುದು ಹೀಗೆ. ನಾನು ಬೆಳೆಯುವಾಗ ೧೦ ರೂ ಇಟ್ಟುಕೊಳ್ಳುವುದು ನನಗೆ ನಿಜಕ್ಕಯ ಕಷ್ಟವಾಗಿತ್ತು. ಮನೆಯಲ್ಲಿ ಕಠಿಣ ಹಣಜಾಸಿನ ಪರಿಸ್ಥಿತಿ ಎದುರಿಸಿದಾಗ ನಾನು ಏನಾದರೂ ಮಾಡಲೇಬೇಕೆಂದು ದೃಢವಾಗಿ ತೀರ್ಮಾನಿಸಿದೆ ಎನ್ನುತ್ತಾನೆ.
ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಯಾವಾಗಲೂ ಪಕ್ಷಪಾತವಿದೆ ಆದರೆ ಪ್ರತಿಯೊಬ್ಬ ಪೋಷಕರು ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡುವುದರಿಂದ ಅದರಲ್ಲಿ ವಿಶ್ವಾಸವಿಡಬೇಕು ಎಂದು ಐದನೇ ತರಗತಿಯಲ್ಲಿ ಓದುತ್ತಿರುವ ಚೈತನ್ಯಾಳ ಪೋಷಕರು ಹೇಳುತ್ತಾರೆ.
ಜೀ ಕನ್ನಡ ವೀಕೆಂಡ್ ವಿತ್ ರಮೇಶ್ ನಡೆಸುಕೊಡುತ್ತಿದ್ದ ಅದ್ಭುತ ರಿಯಾಲಿಟಿ ಷೋ ಎಂದು ನಾನು ಭಾವಿಸುತ್ತೇನೆ. ಪ್ರತಿಯೊಬ್ಬ ಚಿಕ್ಕ ಮಗವೂ ಇದನ್ನು ಅನುಸರಿಸಿ ಸಾಮಾನ್ಯ ಮನುಷ್ಯನ ಹೋರಾಟಗಳನ್ನು ಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದು ಮಂಡ್ಯದ ಶಿಕ್ಷಕಿ ತಿಳಿಸುತ್ತಾರೆ.
ಒಟ್ಟಾರೆ ಜೀ ಕನ್ನಡವಾಹಿನಿ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಉತ್ತೇಜನ ನೀಡುತ್ತಾ ಬಂದಿದ್ದು ಈ ಬಾರಿ ಮಂಡ್ಯ ಮತ್ತು ಗದಗ ಜಿಲ್ಲೆಗಳ ಸರ್ಕಾರಿ ಶಾಲೆಗಳ ಮಕ್ಕಳಲ್ಲಿರುವ ಪ್ರತಿಭೆ ಹೊರತಂದಿದ್ದು ವಿಶೇಷ.

Leave a Comment