ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ರ್‍ಯಾಂಪ್‌ವಾಕ್

 

ಇತ್ತೀಚೆಗೆ ರಾಜ್ಯದಲ್ಲಿ ಅನೇಕ ಸರಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಮಕ್ಕಳ ಕೊರತೆ, ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಅನೇಕ ಕಾರಣಗಳಿಂದ ಸರಕಾರಿ ಶಾಲೆಗಳ ಸೊರಗುತ್ತಿವೆ.

ಇದನ್ನು ಮನಗಂಡ ಪೆಗಾ ಸಿಸ್ಟಮ್ಸ್ ಇಂಕ್ ಎಂಬ ಸಾಫ್ಟ್‌ವೇರ್ ಸಂಸ್ಥೆ ಸರಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಪಣತೊಟ್ಟಿದೆ. ಅದಕ್ಕಾಗಿ ರ್‍ಯಾಂಪ್‌ವಾಕ್ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ನಿಧಿ ಸಂಗ್ರಹಿಸಿ ಕೊಡಲು ಮುಂದಾಗಿದೆ.

ಪೆಗಾ ಸಿಸ್ಟಮ್ಸ್ ಇಂಕ್ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶ್ರಮಿಸುತ್ತಿರುವ ಮುಂಚೂಣಿಯ ಎನ್‌ಜಿಒ ಆಗಿದೆ. ಟೀಚ್ ಆರ್ ಚೇಂಜ್ ಆಯೋಜಿಸಿದ ನಿಧಿ ಸಂಗ್ರಹ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಗಮನ ಸೆಳೆದಿದೆ.

school1

ಇತ್ತೀಚೆಗೆ ನಗರದಲ್ಲಿ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕಡಿಮೆ ಆದಾಯದ ಸಮುದಾಯಗಳ ಮಕ್ಕಳಲ್ಲಿ ಇಂಗ್ಲಿಷ್ ಭಾಷೆ ಮತ್ತು ಡಿಜಿಟಲ್ ಸಾಕ್ಷರತೆ ತರಬೇತಿಗಾಗಿ ಈ ನಿಧಿ ಸಂಗ್ರಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರ ಭಾಗವಾಗಿ ರಿಟ್ಜ್-ಕಾರ್ಲ್‌ಟನ್‌ನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ನಟ ನಿಖಿಲ್ ಕುಮಾರಸ್ವಾಮಿ ಅವರು ಭಾಗವಹಿಸಿ ಸರಕಾರಿ ಮಕ್ಕಳ ಶಿಕ್ಷಣಕ್ಕೆ ಬೆಂಬಲಿಸಿದರು.

ನಟಿಯರಾದ ನಿಧಿ ಅಗರ್‌ವಾಲ್, ಲಕ್ಷ್ಮಿ ಮಂಚು ಮತ್ತು ೨೫ ಸೋಷಿಯಲೈಟ್‌ಗಳು ವಿನ್ಯಾಸಕಾರರಾದ ರಾಜ್ಯಲಕ್ಷ್ಮಿ ಗುಬ್ಬಾ ಅವರ ಸಂಗ್ರಹಕ್ಕಾಗಿ ರ್‍ಯಾಂಪ್ ವಾಕ್ ಮಾಡಿ ಗಮನ ಸೆಳೆದು ಅರಿವು ಮೂಡಿಸಿದರು. ಈ ಸಂಗ್ರಹ ನವರತನ್ ಬ್ರಾಂಡ್ ಆಭರಣಗಳನ್ನು ಪ್ರದರ್ಶಿಸಿತ್ತು. ಈ ಶೋನಲ್ಲಿ ರೂಪದರ್ಶಿಯರು ಸೀರೆನಲ್ಲಿ ಮಿಂಚುವ ಮೂಲಕ ನೆರೆದವರ ಆಕರ್ಷಿಸಿದರು.

ಯಾವುದೇ ಆರ್ಥಿಕ ಹಿನ್ನೆಲೆಯಿಂದ ಬಂದರೂ ಕೂಡ ಪ್ರತಿ ವಿದ್ಯಾರ್ಥಿಗೂ ಗುಣಮಟ್ಟದ ಭಾಷಾ ಶಿಕ್ಷಣವನ್ನು ಸಾದರಪಡಿಸುವ ಗುರಿಯನ್ನು ಬೆಂಬಲಿಸುವ ಮತ್ತು ಆಸಕ್ತಿ ಮೂಡಿಸುವ ಪ್ರಯತ್ನ ಈ ನಿಧಿ ಸಂಗ್ರಹ ಕಾರ್ಯಕ್ರಮವಾಗಿದೆ ಎಂದು ಪೆಗಾ ಸಿಸ್ಟಮ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಸುಮನ್ ರೆಡ್ಡಿ ತಿಳಿಸಿದರು.

ಭಾರತದಲ್ಲಿ ವಿಶ್ವಮಟ್ಟದ ಪ್ರತಿಭೆಯನ್ನು ಸೃಷ್ಟಿಸಲು ಗುಣಮಟ್ಟದ ಶಿಕ್ಷಣ ಬೆನ್ನೆಲುಬಾಗಿದೆ. ಬೆಂಗಳೂರು ಈ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಸ್ವಾಭಾವಿಕ ಕೇಂದ್ರವಾಗಿದೆ. ಹಾಗಾಗಿ ಮಕ್ಕಳ ಭವಿಷ್ಯ ಕಟ್ಟಿಕೊಡಲು ನಾವು ಸದಾ ಸಿದ್ದರಿದ್ದೇವೆ ಎಂದು ಟೀಚ್ ಫಾರ್ ಚೇಂಜ್‌ನ ಸ್ಥಾಪಕ ಚೈತನ್ಯ ಎಂಆರ್‌ಎಸ್‌ಕೆ ಹೇಳಿದ್ದಾರೆ.

ಹೆಚ್ಚಿನ ವಿವರಗಳಿಗೆ ತಿತಿತಿ.ಠಿegಚಿ.ಛಿom ರಲ್ಲಿ ಸಂದರ್ಶಿಸಿ.

Leave a Comment