ಸರ್ಕಾರಿ ಶಾಲಾ ಛಾವಣಿ ಕುಸಿತ : ಓರ್ವ ಸಾವು – ಮತ್ತೋರ್ವನಿಗೆ ಗಾಯ

* ಐದನಾಳ ಗ್ರಾಮದಲ್ಲಿ ದುರ್ಘಟನೆ : ಕಾರ್ಮಿಕನ ಕುಟುಂಬಕ್ಕೆ ವೇದನೆ
ಲಿಂಗಸೂಗೂರು.ಫೆ.13- ತಾಲೂಕಿನ ಐದನಾಳ ಗ್ರಾಮದಲ್ಲಿ ಹಳೆ ಶಾಲಾ ಕಟ್ಟಡವೊಂದು ಕುಸಿದು, ಓರ್ವ ಕಾರ್ಮಿಕ ಮೃತಪಟ್ಟು ಮತ್ತೋರ್ವ ತೀವ್ರ ಗಾಯಗೊಂಡ ಘಟನೆ ನಡೆದಿದೆ.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೆ ಕಟ್ಟಡ ಛಾವಣಿ ಕೆಡುವುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸಂಗಪ್ಪ ಹುಲಿಗೆಪ್ಪ (25) ಈತನು ಸ್ಥಳದಲ್ಲಿಯೇ ಮೃತಪಟ್ಟರೇ, ವೀರಭದ್ರಪ್ಪ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಮೌಲಪ್ಪ ಎನ್ನುವ ಕಾರ್ಮಿಕ ಅಪಘಾತದಿಂದ ಪಾರಾಗಿದ್ದಾನೆ. ಶಾಲಾ ಕಟ್ಟಡ ಹಳೆಯದ್ದಾಗಿದ್ದರಿಂದ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಒಟ್ಟು ಮೂವರು ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿದ್ದರು.
ಮೌಲಪ್ಪ ಎನ್ನುವ ಕಟ್ಟಡ ಕಾರ್ಮಿಕನು ಶಾಲೆಯ ಕೋಣೆಯಿಂದ ಹೊರಗ‌ಡೆ ತೆರಳಿದ್ದನು. ಆದರೆ, ಸಂಗಪ್ಪ ಮತ್ತು ವೀರಭದ್ರಪ್ಪ ಎನ್ನುವವರು ಶಾಲಾ ಕಟ್ಟಡ ಛಾವಣಿ ಕೆಡುವ ಕಾಮಗಾರಿಯಲ್ಲಿ ತೊಡಗಿದ್ದರು. ಏಕಾಏಕಿ ಹಳೆ ಛಾವಣಿ ಕುಸಿದು ಬಿದ್ದಿದ್ದರಿಂದ ಸಂಗಪ್ಪ ಹುಲಿಗೆಪ್ಪ ಎನ್ನುವ ಕಾರ್ಮಿಕನು ಸ್ಥಳದಲ್ಲಿಯೇ ಮೃತಪಟ್ಟರಿಗೆ ವೀರಭದ್ರಪ್ಪ ಎಂಬುವವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಈತನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿ, ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಛಾವಣಿ ಕುಸಿತ ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕಾರ್ಮಿಕರ ಸಂಬಂಧಿಗಳು ಸ್ಥಳಕ್ಕೆ ಧಾವಿಸಿದ್ದರು. ಛಾವಣಿ ಕೆಳಗಿರುವ ಸಂಗಪ್ಪರ ಶವವನ್ನು ಹೊರ ತೆಗೆಯಲಾಗಿದೆ. ಸಂಬಂಧಿಕರು ಈ ಘಟನೆಗೆ ಸಂಬಂಧಿಸಿ, ತೀವ್ರ ಆಕ್ರೋಶ – ದುಃಖ ಭರಿತರಾಗಿದ್ದರು.

Leave a Comment