ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ಕೊಟ್ಟಿದೆ. ನೌಕರರ ಡಿಎ (ಡಿಯರ್ನೆಸ್ ಅಲೋವೆನ್ಸ್) ಯನ್ನು ಶೇ.5 ರಷ್ಟು ಹೆಚ್ಚಳ ಮಾಡಲು ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರೊಂದಿಗೆ ನೌಕರರ ಡಿಎ ಶೇ.12 ರಿಂದ ಶೇ.17 ಕ್ಕೆ ಏರಿಕೆಯಾಗಿದೆ.

50 ಲಕ್ಷ ಸರ್ಕಾರಿ ನೌಕರರಿಗೆ ಈ ಸೌಲಭ್ಯ ದೊರೆಯಲಿದೆ. ಉಳಿದಂತೆ 62 ಲಕ್ಷ ಪಿಂಚಣಿದಾರರು ಕೂಡ ಇದರ ಲಾಭ ಪಡೆಯಲಿದ್ದಾರೆ. ಡಿಎ ಹೆಚ್ಚಳ ಮಾಡಿರೋದ್ರಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ 16,000 ಕೋಟಿ ರೂಪಾಯಿ ಹೊರೆಯಾಗಲಿದೆ.

ಪರಿಷ್ಕೃತ ಡಿಎ ಸೌಲಭ್ಯ ಜುಲೈ 1ರಿಂದ್ಲೇ ಅನ್ವಯವಾಗಲಿದೆ. ಡಿಯರ್ನೆಸ್ ಅಲೋವೆನ್ಸ್ ಅನ್ನು ಸರ್ಕಾರ ತನ್ನ ನೌಕರರ ಊಟ-ವಸತಿಗಾಗಿ ನೀಡುತ್ತದೆ.

Leave a Comment