ಸರ್ಕಾರಿ ಕೆಲಸದ ಆಮಿಷ; ವಂಚಕರ ಬಂಧನಕ್ಕೆ ಆಗ್ರಹ

ದಾವಣಗೆರೆ.ಜೂ.13; ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಹಣದೋಚಿದವರ ಬಗ್ಗೆ ಪೋಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಹಣ ಕಳೆದುಕೊಂಡವರಿಗೆ ಈ ಕೂಡಲೇ ನ್ಯಾಯ ಒದಗಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‍ವಾದ (ರಿ) ವಿಭಾಗೀಯ ಸಂಚಾಲಕ ಎ.ಡಿ.ಯಶವಂತಪ್ಪ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಮೂಲತಃ ಮೈಸೂರು ಜಿಲ್ಲೆಯವರಾದ ಬಿ.ಎಂ ಮಹೇಶ್, ವಿಜಿಕುಮಾರ್, ನಟರಾಜ್ ಎಂಬುವವರು ಹೊನ್ನಾಳಿ ತಾಲ್ಲೂಕಿನ ಸುಮಾರು 10 ಬಡ ಯುವಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾರೆ. ಕೆಲಸದ ಆಸೆಗಾಗಿ ಇದ್ದ ಬದ್ದ ಜಮೀನನ್ನು ಮಾರಿ ಯುವಕರು ಹಣ ನೀಡಿದ್ದಾರೆ. ಅಷ್ಟೇಅಲ್ಲದೇ ವಂಚಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿಕರು ಎಂದು ಹೇಳಿಕೊಂಡು ಸುಮಾರು 50ರಿಂದ 60ಲಕ್ಷ ಪಡೆದುಕೊಂಡಿದ್ದಾರೆ. ಈ ಬಗ್ಗೆ ಕಳೆದ ಮೇ 5 ರಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಹ ನೀಡಿದ್ದೇವೆ ಆದರೆ ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಕೆಲಸ ಕೊಡಿಸುವುದಾಗಿ ಹೇಳಿದ ಬಗ್ಗೆ ಎಲ್ಲಾ ದಾಖಲಾತಿಗಳು ನಮ್ಮ ಬಳಿ ಇವೆ. ಆದ್ದರಿಂದ ಈ ಕೂಡಲೇ ವಂಚಕರನ್ನು ಬಂಧಿ ಬಡಯುವಕರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ

Leave a Comment