ಸರ್ಕಾರಿ ಆಸ್ಪತ್ರೆಯಲ್ಲಿ ಹಾವು ಪ್ರತ್ಯಕ್ಷ : ಗಾಬರಿ

ಮೈಸೂರು, ಜು. 17- ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಹಾವು ಪ್ರತ್ಯಕ್ಷವಾಗಿದ್ದು, ಸಿಬ್ಬಂದಿ ಹಾಗೂ ರೋಗಿಗಳು ಗಾಬರಿಗೊಂಡ ಪ್ರಸಂಗ ನಡೆಯಿತು.
ಮೈಸೂರಿನ ಕೆ.ಆರ್.ಎಸ್. ರಸ್ತೆಯಲ್ಲಿರುವ ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ 60 ಮಂದಿ ರೋಗಿಗಳು ದಾಖಲಾಗಿದ್ದ ಕೋಣೆಯಲ್ಲಿ 5 ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡು ಗಾಬರಿ ಮೂಡಿಸಿತು.
ರೋಗಿಯೊಬ್ಬರ ಔಷಧಿಗಳನ್ನು ಇಡುವ ಕಬೋಡ್ ಒಳಗೆ ಅಡಗಿಕೊಂಡಿದ್ದ ಹಾವು.
ಕೆಲಕಾಲ ಆತಂಕ ಸೃಷ್ಟಿಸಿತು.
ತಕ್ಷಣ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರಮೇಶ್ ಅವರು ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದರು.

Leave a Comment