ಸರ್ಕಾರದ ಷರತ್ತು, ಸುತ್ತೋಲೆ ಉಲ್ಲಂಘನೆ

 ಅಕ್ರಮ ಪಂಪ್‌ಸೆಟ್ ವಿದ್ಯುತ್ ಕಡಿತಕ್ಕೆ ಒತ್ತಾಯ
ರಾಯಚೂರು.ಮಾ.13- ಸರ್ಕಾರದ ಷರತ್ತು ಮತ್ತು ಸುತ್ತೋಲೆಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ಕೃಷ್ಣಾನದಿ ನೀರನ್ನು ಕಾನೂನು ಬಾಹೀರವಾಗಿ ಉಪಯೋಗಿಸುತ್ತಿರುವ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸುವಂತೆ ಸಾಬಣ್ಣ ಒತ್ತಾಯಿಸಿದರು.
ಅವರಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ನಾರಾಯಣಪೂರ ಬಲದಂಡೆ ಕಾಲುವೆ ಸಂಖ್ಯೆ 4ರ ಚಿಕ್ಕಹೊನ್ನಕುಣಿ ಕಾರ್ಯಾಲಯವರೆಗೆ ಕೃಷ್ಣಾನದಿಯಿಂದ ನೀರಾವರಿಗಾಗಿ ನೀರು ಹರಿಸಲು ಪರವಾನಿಗೆ ಷರತ್ತಾಗಿರುವ ಫೆಬ್ರವರಿಯಿಂದ ಜೂನ್‌ವರೆಗೆ ನೀರನ್ನು ಬಳಸಬಾರದೆಂದು ಸರ್ಕಾರ ಸುತ್ತೋಲೆ ಹಾಗೂ ಷರತ್ತು ವಿಧಿಸಿದೆ. ಕಾನೂನು ಬಾಹೀರ ನದಿ ನೀರು ಬಳಸದಂತೆ ಜಿಲ್ಲಾಡಳಿತ, ಜೆಸ್ಕಾಂ, ಕೆಬಿಜೆಎನ್‌ಎಲ್ ಇನ್ನಿತರ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೂ, ಮೇಲ್ಕಂಡ ಅಧಿಕಾರಿಗಳು ಮಾತ್ರ ಷರತ್ತು ಹಾಗೂ ಸುತ್ತೋಲೆ ಸ್ಪಷ್ಟಗಾಳಿಗೆ ದೂರವ ಮೂಲಕ ಗೂಗಲ್ ಗ್ರಾಮದ 8 ಜನರ ಜಮೀನಿಗೆ ಪರವಾನಿಗೆ ಇಲ್ಲದೇ 200 ಎಕರೆ ಜಮೀನಿಗೆ ಕಾನೂನು ಬಾಹೀರ ನೀರು ಹರಿಸಲಾಗುತ್ತಿದೆ.
ಕೃಷ್ಣಾನದಿ ಒಡಲಿನಲ್ಲಿ ನೀರಿನ ಕೊರತೆ ತೀವ್ರಗೊಂಡಿದ್ದರೂ, ಟ್ರ್ಯಾಕ್ಟರ್, ಜನರೇಟರ್ ಹಾಗೂ ಅಶ್ವಶಕ್ತಿ ಜನರೇಟರ್ ಮೂಲಕ ಕೃಷ್ಣಾನದಿ ನೀರನ್ನು ದಿನದ 24 ಗಂಟೆ ಕಾನೂನು ಬಾಹೀರ ಬಳಕೆ ಮುಂದುವರೆದಿದೆ.
ಬೇಸಿಗೆ ಆರಂಭದಲ್ಲಿಯೇ ಜನತೆ, ಜಾನುವಾರು, ಪ್ರಾಣಿ-ಪಕ್ಷಿಗಳು ಕುಡಿವ ನೀರಿನ ತೀವ್ರ ತೊಂದರೆ ಎದುರಿಸುವಂತಾಗಲೂ ಸರ್ಕಾರದ ಸುತ್ತೋಲೆ ಹಾಗೂ ಷರತ್ತು ಪಾಲಿಸದೆ, ಕೃಷ್ಣಾನದಿ ನೀರನ್ನು ಅಕ್ರಮವಾಗಿ ಬಳಕೆ ಮಾಡುತ್ತಿರುವವರ ವಿರುದ್ಧ ಮೇಲಾಡಳಿತ ಶಿಸ್ತು ಕ್ರಮ ವಹಿಸಿ ಕಾನೂನು ಬಾಹೀರ ಅಳವಡಿಕೆ ಮಾಡಲಾಗಿರುವ ಪಂಪ್ ಸೆಟ್‌ಗಳ ಅಕ್ರಮ ವಿದ್ಯುತ್ ಕೂಡಲೇ ಕಡಿತಗೊಳಿಸುವಂತೆ ಆಗ್ರಹಿಸಿದರು.
ತಿರುಪತಿ ಯಾಟಗಲ್, ವೀರೇಶ ಗೂಗಲ್, ರಮೇಶ ಉಪಸ್ಥಿತರಿದ್ದರು.

Leave a Comment