ಸರ್ಕಾರದ ಯೋಜನೆ ಸಾರ್ವಜನಿಕರಿಗೆ ತಲುಪಿಸಬೇಕು

ಹರಿಹರ.ನ.22; ತಾಲ್ಲೂಕು ಕಚೇರಿಗೆ ಹೋಬಳಿ ಮಟ್ಟದ ನೂತನ ರಾಜಸ್ವ ನಿರೀಕ್ಷಕರಾಗಿ ಎಚ್ ಎಲ್ ಆನಂದ್ ಅಧಿಕಾರವಹಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು ಕರ್ನಾಟಕ ಸರ್ಕಾರವು ಅಸಹಾಯಕ, ಅಶಕ್ತ ವ್ಯಕ್ತಿಗಳಿಗಾಗಿ ಹಾಗೂ ನಿರ್ಗತಿಕ ವಿಧವೆಯರಿಗೆ ಮತ್ತು ಅಂಗವಿಕಲರಿಗೆ ಅನೇಕ ಸಾಮಾಜಿಕ ಭದ್ರತೆ ಮತ್ತು ರೈತರಿಗೆ ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ಬಂದಿರುತ್ತದೆ ನಮ್ಮ ತಹಸೀಲ್ದಾರ್ ನಿರ್ದೇಶನದಂತೆ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬ ಮಾಡದೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತೇನೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳು ಇದ್ದಲ್ಲಿ ನಮ್ಮ ಮಟ್ಟದಲ್ಲಿ ಆಗುವ ಕೆಲಸವನ್ನು ತ್ವರಿತ ಸಮಯದಲ್ಲೇ ಮಾಡಿಕೊಡುತ್ತೇವೆ ಎಂದು ಹೇಳಿದರು. ಈ ಹಿಂದೆ ಹರಿಹರ ತಾಲ್ಲೂಕಿನ ಕಸಬಾ ಮಟ್ಟದಲ್ಲಿ ಕರ್ತವ್ಯವನ್ನು ನಿರ್ವಹಿಸಿ ಬಳ್ಳಾರಿ ಜಿಲ್ಲೆಯ ಇತರೆ ನಗರ ಗ್ರಾಮಾಂತರ ಪ್ರದೇಶಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿ ಮುಂಬಡ್ತಿ ಹೊಂದಿ ಹರಿಹರ ತಾಲ್ಲೂಕಿನ ಹೋಬಳಿ ಮಟ್ಟದ ರಾಜಸ್ವ ನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದೇನೆ ಈ ಹಿಂದೆ ಇದ್ದಂತಹ ರಾಜಸ್ವ ನಿರೀಕ್ಷಕರಿಗೆ ಸಲಹೆ ಸಹಕಾರಗಳನ್ನು ನೀಡುತ್ತಾ ಬಂದಿರುತ್ತೀರಿ ಅದೇ ರೀತಿ ನನಗೂ ಸಹ ನಿಮ್ಮ ಸಹಕಾರ ಅಗತ್ಯವಾಗಿರುತ್ತದೆ ಎಂದರು ಸಾರ್ವಜನಿಕರು ಇಲಾಖೆಯೊಂದಿಗೆ ಕೈ ಜೋಡಿಸಬೇಕೆಂದು ಹೇಳಿದರು. ಸಂದರ್ಭದಲ್ಲಿ ಗ್ರಾಮ ಲೆಕ್ಕ ಅಧಿಕಾರಿಗಳಾದ ಬೋರಯ್ಯ ಎಂಎಂ ಲೋಹಿತ್, ಹರೀಶ್, ದೇವರಾಜ್, ಹನಗವಾಡಿ ಮಲ್ಲಿಕಾರ್ಜುನ್, ಶ್ರೀಧರ್, ಜಬೀವುಲ್ಲಾ ದೇವರಾಜ್ ಸಾರಥಿ, ಪುಷ್ಪ ದೊಡ್ಡಮನಿ, ಗ್ರಾಮ ಸಹಾಯಕ ಗುರುರಾಜ್, ಪತ್ರಕರ್ತ ಪಂಚಾಕ್ಷರಿ ಇತರರಿದ್ದರು.

Leave a Comment