ಸರ್ಕಾರಗಳು ರೈತರ ಸಮಸ್ಯೆಗೆ ಸ್ಪಂದಿಸಲಿ

ದಾವಣಗೆರೆ, ಸೆ. 14- ರೈತರ ಸಮಸ್ಯೆಗಳಿಗೆ ಮತ್ತು ಹೋರಾಟಕ್ಕೆ ಸರ್ಕಾರಗಳು ಸ್ಪಂದಿಸಬೇಕೆಂದು ರೈತ ಹುತಾತ್ಮರ ಸ್ಮರಣಾರ್ಥ ಸಮಿತಿಯ ಅಧ್ಯಕ್ಷ ಎನ್.ಜಿ.ಪುಟ್ಟಸ್ವಾಮಿ ಒತ್ತಾಯಿಸಿದ್ದಾರೆ.
ಆನಗೋಡಿನಲ್ಲಿ ನಡೆದ ರೈತ ಹುತಾತ್ಮರಾದ ಓಬೇನಹಳ್ಳಿ ಕಲ್ಲಿಂಗಪ್ಪ ಹಾಗೂ ಸಿದ್ದನೂರು ನಾಗರಾಜಚಾರ್ ಅವರ 26ನೇ ಹುತಾತ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚಿಗೆ ರೈತ ಹೋರಾಟಗಳು ಯಶಸ್ಸು ಕಾಣದೆ ರೈತರು ಹತಾಶ ಸ್ಥಿತಿಯಲ್ಲಿದ್ದಾರೆ. ರೈತಪರ ಇರಬೇಕಾದ ಕೃಷಿ ಮಾರುಕಟ್ಟೆ ಸಮಿತಿಗಳು ಶೋಷಣೆಯ ಕೇಂದ್ರಗಳಾಗಿವೆ. ಕೂಡಲೇ ಸರ್ಕಾರಗಳು ರೈತರ ನೆರವಿಗೆ ದಾವಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜಿ.ಪಂ ಸದಸ್ಯ ಬಸವಂತಪ್ಪ, ಹೊನ್ನೂರು ಮುನಿಯಪ್ಪ, ಎಲ್.ಹೆಚ್.ಅರುಣ್ ಕುಮಾರ್, ಗ್ರಾ.ಪಂ ಅಧ್ಯಕ್ಷ ರವಿ, ಮುರುಗೇಂದ್ರಪ್ಪ, ರಾಜಶೇಖರ್, ಷಣ್ಮುಖಯ್ಯ, ಕಾಂ.ಆವರಗೆರೆ ಚಂದ್ರು, ಬಲ್ಲೂರು ರವಿಕುಮಾರ್, ಮಲ್ಲಾಪುರ ದೇವರಾಜ್, ಕೆ.ಪಿ.ಕಲ್ಲಿಂಗಪ್ಪ ಮತ್ತಿತರರು ಇದ್ದರು.

Leave a Comment