ಸರ್ಕಾರಕ್ಕೆ ಎರಡೇ ತಿಂಗಳು ಆಯಸ್ಸು ಶ್ರೀಗಳ ಭವಿಷ್ಯ

ಹಾಸನ.ಅ.೧೨-ಸಮ್ಮಿಶ್ರ ಸರ್ಕಾರದ ದೋಸ್ತಿ ಪಕ್ಷಗಳಲ್ಲಿ ಉಂಟಾಗಿರುವ ಬೆಳವಣಿಗೆಗಳಿಂದಾಗಿ ಸರ್ಕಾರ ಕೇವಲ ಇನ್ನೆರಡು ತಿಂಗಳು ಉಳಿಯಲಿದೆ ಎಂದು ಕೋಡಿ ಮಠದ  ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ಶ್ರೀಗಳ ಈ ಭವಿಷ್ಯದಿಂದಾಗಿ ದೋಸ್ತಿ ಪಕ್ಷಗಳಲ್ಲಿ ತಳಮಳ ಉಂಟಾಗಿದೆ.

ಹಾಸನ ಜಿಲ್ಲೆ ಅರಸಿಕೆರೆ ತಾಲೂಕಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವರ್ಷಾಂತ್ಯದವರೆಗೂ ಮಳೆಯಾಗಲಿದೆ. ದ್ವೇಷ – ಅಸೂಯೆ ಹೆಚ್ಚಳವಾಗುತ್ತದೆ. ೨ ತಿಂಗಳು ಕಾದು ನೋಡಿ ಎಂದು ಶ್ರೀಗಳು ಹೇಳಿದರು. ಸರ್ಕಾರ ಬೀಳಿಸಲು ಕೆಲ ದಿನಗಳ ಹಿಂದೆ ನಡೆದಿದ್ದ ಅಪರೇಷನ್ ಕಮಲ,ನಂತರ ಜಾರಕಿಹೋಳಿ ಬ್ರದರ್‍ಸ್ ಲಕ್ಷ್ಮೀ ಹೆಬ್ಬಾಳ್ಖರ್ ನಡುವಿನ ಬಿನ್ನಾಭಿಪ್ರಾಯ ಸರ್ಕಾರಕ್ಕೆ ಕಂಟಕವಾಗಿತ್ತು.

ಇದೀಗ ಕೊಡಿಹಳ್ಳಿ ಶ್ರೀಗಳು ನುಡಿದಿರುವ ಭವಿಷ್ಯ ಸಮ್ಮಿಶ್ರ ಸರ್ಕಾರದ ನಾಯಕರಲ್ಲಿ ತಳಮಳ ಮೂಡಿಸಿದೆ.

ಇನ್ನು ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾಗಿದ್ದ ಬಿಎಸ್‌ಪಿಯ ಶಾಸಕ ಎನ್.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜ್ಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

Leave a Comment