ಸರಳ ಸಜ್ಜನಿಕೆಯ ವ್ಯಕ್ತಿ ದೇಜಗೌ – ಸಿಎಸ್ ಪಿ

ಪಾಂಡವಪುರ:ಆ:13- ಸರಳ ಸಜ್ಜನಿಕೆಯ ವ್ಯಕ್ತಿತ್ವದ ದೇಜಗೌ ತಮ್ಮ ಹೋರಾಟದ ಮೂಲಕ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನಮಾನ ತಂದುಕೊಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು ಸಂಸದ ಸಿ.ಎಸ್.ಪುಟ್ಟರಾಜು ಎಂದು ಹೇಳಿದರು.
ಪಟ್ಟಣದ ವಿಜಯ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ದೇಜಗೌ ಜಯಂತಿ ಮತ್ತು ಸಂಸ್ಮರಣೆ ಸಮತಿ, ವಿದ್ಯಾಪ್ರಚಾರ ಸಂಘ ಮತ್ತು ಶ್ರೀರಂಗಪಟ್ಟಣದ ಜನಮನ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಶನಿವಾರ ನಡೆದ `ಅಕ್ಷರ ಸೂರ್ಯ ದೇಜಗೌ-100’ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ, ನಾಡಿನ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ದೇಜಗೌ ಕನ್ನಡದ ವಿಚಾರಕ್ಕೆ ಬಂದಾಗ ಯಾವುದೇ ಹೋರಾಟಕ್ಕಾದರು ಸಿದ್ದರಾಗಿಬಿಡುತ್ತಿದ್ದರು. ಕನ್ನಡ ಅಧ್ಯಾಯನ ಸಂಸ್ಥೆಯ ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ, ಕುಲಸಚಿವರಾಗಿ ಹಾಗೂ ಮೈಸೂರು ವಿವಿಯ ಕುಲಪತಿಗಳಾಗಿ ಎರಡು ಬಾರಿ ಆಡಳಿತ ನಡೆಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ 24 ಮಂದಿ ಕುಲಪತಿಗಳಲ್ಲಿ ದೇಜಗೌ ಅವರು ಕೂಡ ಪ್ರಮುಖರಾಗಿದ್ದಾರೆ. ಕನ್ನಡ ಸಾಂಸ್ಕೃತಿಕ ಲೋಕದ ಗಧ್ಯ ಸಂಗಮದ ಆಧ್ಯಪ್ರವರ್ತಕರು ದೇಜಗೌ ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲವನ್ನು ಹೆದುರಿಸುವಂತಹ ಶಿಕ್ಷಣವನ್ನು ಕಲಿತುಕೊಳ್ಳಬೇಕಾಗಿದೆ. ಮಕ್ಕಳು ತಗರತಿಯ ಪಠ್ಯದಿಂದಾಚೆಗೂ ನಿಲ್ಲಬೇಕು. ಸಾಹಿತ್ಯ, ಸಂಗೀತ, ಕ್ರೀಡೆಗಳಲ್ಲು ಭಾಗವಹಿಸುವ ಮೂಲಕ ಉದಯೋನ್ಮಕ ಪ್ರತಿಭೆಗಳಾಗಿ ಹೊರಹೊಮ್ಮಬೇಕು ಎಂದು ತಿಳಿಸಿದರು.
ಜಾನಪದ ವಿದ್ವಾಂಸ ಡಾ.ಚಕ್ಕರೆ ಶಿವಶಂಕರ್ ಮಾತನಾಡಿ, ಕನ್ನಡ ಜಾನಪದ ವಿಷಯದಲ್ಲಿ ಸಾಕಷ್ಟು ಗಟ್ಟಿತನದಿಂದ ಕೆಲಸ ಮಾಡುವ ಮೂಲಕ ತನ್ನದೆಯಾದ ಕೊಡುಗೆ ನೀಡಿದ್ದಾರೆ. ಇವರ ಜಾನಪದ ಅಧ್ಯಾಯನ ಕೃತಿಗಳು ಸಾಕಷ್ಟು ಪ್ರಖ್ಯಾತಿಪಡೆದಿವೆ. ಇವರೇ ಜಾನಪದ ತರಗತಿಗಳನ್ನು ಪ್ರಾರಂಭಿಸಿ ಜಾನಪದ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಜಾನಪದ ವಿಷಯಕ್ಕೆ ಸೇರಿಸುವ ಕೆಲಸ ಮಾಡಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಜಾನಪದ ವಸ್ತು ಸಂಗ್ರಹಣಾಲಯವನ್ನು ತೆರೆದಿದ್ದಾರೆ. ವಸ್ತು ಸಂಗ್ರಹಣಾಲಯ ಏಷ್ಯಾಖಂಡದಲ್ಲೇ ದೊಡ್ಡ ವಸ್ತು ಸಂಗ್ರಹಣಾಲಯವೆಂದೆ ಪ್ರಸಿದ್ದಿಪಡೆದಿದೆ ಎಂದು ತಿಳಿಸಿದರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆವಹಿಸಿ ಮಾತನಾಡಿದರು, ವಿದ್ಯಾಪ್ರಚಾರದ ಸಂಘದ ಗೌ.ಕಾರ್ಯದರ್ಶಿ ಕೆ.ವಿ.ಬಸವರಾಜು, ಪ್ರಾಂಶುಪಾಲರಾದ ಪ್ರೊ.ಕೆ.ಶಾಂತಕುಮಾರ್, ಜಿ.ಉಮೇಶ್, ಉಪ ಪ್ರಾಂಶುಪಾಲ ಸಿ.ಎನ್.ವೆಂಕಟೇಶ್, ಪ್ರಾಂಶುಪಾಲ ಸೋಮಶೇಖರ್, ರ್ನಿದೇಶಕ ಸೋಮೇಗೌಡ, ಜನಮನ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಿ.ಪುಟ್ಟಸ್ವಾಮಿ ಚಿಕ್ಕಹಾರೋಹಳ್ಳಿ, ಡಿ.ಪಿ.ಸ್ವಾಮಿ, ರಾಘವೇಂದ್ರ, ಚಲುವೇಗೌಡ ಸೇರಿದಂತೆ ಹಲವರು ಹಾಜರಿದ್ದರು.

Leave a Comment