ಸರಳ ವಿವಾಹವಾಗಿ ವೈಭವದಿಂದ ಜೀವನ ಸಾಗಿಸಿ

ಹರಪನಹಳ್ಳಿ.ಫೆ.11- ರೂಪ ಮತ್ತು ಶ್ರೀಮಂತಿಕೆ ಮಾರು ಹೋಗಿ ಕನ್ನದಾನ ಮಾಡಬೇಡಿ, ಶ್ರೀಮಂತರು ಬಹುತೇಕರು ವ್ಯಸನಿಗಳಾಗಿದ್ದಾರೆ. ಮದುವೆ ಎನ್ನುವ ಮೂರು ಅಕ್ಷರ ಮ-ಮಮಕಾರ, ದು-ದುಡಿಮೆ, ವೆ-ವ್ಯವಹಾರ ಎಂದು ವಾಕ್ಯನಿಸಬಹುದು. ಕುಟುಂಬದ ಮಮಕಾರದಿಂದ ದುಡಿಮೆ ಮಾಡಿ ಕುಟುಂಬದ ವ್ಯವಹಾರ ಮಾಡಿಕೊಳ್ಳದೇ ಮದುವೆ ನಿಜವರ್ಥ ಎಂದು ಬಾಳೇಹೊಸೂರು ದಿಂಗಾಲೇಶ್ವರ ಮಠದ ಪೀಠಾಧ್ಯಕ್ಷ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದರು.ತಾಲೂಕಿನ ಕಂಚಿಕೇರಿ ಗ್ರಾಮದ ಕೋಡಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಲಿಂ.ಬಿದ್ರಿ ರೇವಣಸಿದ್ದಪ್ಪ ಸ್ಮರಣಾರ್ಥ 19ನೇ ವರ್ಷದ ಸಾಮೂಹಿಕ ವಿವಾಹ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಇಂದು ಮದುವೆ ಎಂದರೆ ಮಜಾ ಎನ್ನುವಂತಾಗಿದೆ. ನಂತರ ದುಃಖ ಶುರುವಾಗಿ ವ್ಯಸನದಿಂದ ಬದುಕು ಅಂತ್ಯಗೊಳ್ಳುತ್ತದೆ. ಇದ್ದಾಗ ಕಾಡುವ, ಸತ್ತ ಮೇಲೆ ಹೊಗಳುವ ಪದ್ದತಿಯನ್ನು ಕೈಬಿಡಬೇಕು. ರಾಜಕಾರಣಿಗಳು ಸ್ಪಷ್ಟವಾಗಿ ನುಡಿಯುವ ಸ್ವಾಭಾವ ಮೈಗೂಡಿಸಿಕೊಂಡಲ್ಲಿ ಸಮಾಜಕ್ಕೆ ಸತ್ಯದ ದರ್ಶನವಾಗುತ್ತದೆ. ಧಾರ್ಮಿಕ ಕ್ಷೇತ್ರಗಳು ಜನಸೇವೆಗೆ ಮೀಸಲಾಗಬೇಕೆಯೇ ಹೊರತು ಮೂಢನಂಬಿಕೆಗೆ ಸೀಮಿತವಾಗಬಾರದು. ಸರಳ ವಿವಾಹವಾಗಿ ವೈಭವದಿಂದ ಜೀವನ ಸಾಗಿಸಿ ಎಂದು ಹೇಳಿದರು.
ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿ, ವಿವಾಹವಾದ ದಂಪತಿಗಳು ತಂದೆ-ತಾಯಿಯವರು ನಿರ್ಲಕ್ಷ್ಯ ಮಾಡಬೇಡಿ, ಹೆತ್ತವರನ್ನು ಮುಪ್ಪಿನ ಕಾಲದಲ್ಲಿ ಸಾಕುವುದು ಮಕ್ಕಳ ಜವಾಬ್ಬಾರಿ. ವಯಸ್ಸಿಗೆ ಬಂದ ಮಕ್ಕಳು ದೂರವಾದರೆ ತಂದೆ-ತಾಯಿ ಅವರಿಗೆ ತುಂಬಾ ನೋವು ಆಗುತ್ತದೆ. ಹೆತ್ತವರನ್ನು ಸಾಯುವವರೆಗೂ ಜೋಪಾನವಾಗಿ ಕಾಪಾಡಿಕೊಳ್ಳಬೇಕು. ಇದು ಮಕ್ಕಳಿಗೆ ಪ್ರೇರಣಿಯಾಗಿ ತಮ್ಮನ್ನು ಮಕ್ಕಳು ಕೊನೆಗಾಲದಲ್ಲಿ ನೋಡಿಕೊಳ್ಳುತ್ತಾರೆ ನವ ದಂಪತಿಗಳಿಗೆ ಮಕ್ಕಳಿಗೆ ವಿನಯ, ಸಂಸ್ಕಾರ ಕೊಡಿ ಎಂದು ಸಲಹೆ ನೀಡಿದರು. ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ್ ಮಾತನಾಡಿ, ಅನಾದಿ ಕಾಲದಿಂದಲೂ ಸಾಮೂಹಿಕ ವಿವಾಹ ನಡೆಸುತ್ತಿರು. ಮಹಾತ್ಮ ಗಾಂಧಿ ಕೂಡ ಸಾಮೂಹಿಕ ವಿವಾಹವಾಗಿದ್ದು, ದುಂದು ವೆಚ್ವಕ್ಕೆ ಕಡಿವಾಣ ಹಾಕಬೇಕಿದೆ. ಮದುವೆಯಾಗಿ ಯಾರು ಸಾಲಗಾರರಾಗಬಾರದು. ನಾವು ಹೇಗೆ ಮದುವೆಯಾಗಿದ್ದೀವಿ ಎನ್ನುವುದಕ್ಕಿಂತ ಮಿತ ಸಂತಾನದಿಂದ ಸಂತೋಷಯುತ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.11 ಜೋಡಿಗಳು ದಾಂಪತ್ಯ ಕ್ಕೆ ಕಾಲಿರಿಸಿದರು. ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಸಂಘಟಕ ಡಾ.ಬಿದ್ರಿ ಕೊಟ್ರೇಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಸದಸ್ಯ ಡಿ.ಸಿದ್ದಪ್ಪ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಆದಪ್ಪ, ಜಿ.ಪಂ ಮಾಜಿ ಸದಸ್ಯ ಎಂ.ವಿರೂಪಾಕ್ಷಗೌಡ, ಗ್ರಾ.ಪಂ ಅದ್ಯಕ್ಷ ಕೆ.ಪಿ.ಬಸವರಾಜ್, ವೈದ್ಯರಾದ ಡಾ.ಹಿರೇಮಠ, ಎಸ್.ಜೆ.ಶ್ರೀಧರ್, ಚಂಪಾಲಾಲ್ ಡೆಲೇರಿಯಾ, ಡಾ.ಬಿ.ಜಿ.ಶಂಕರ್ ಪಾಟೀಲ್, ಶಶಿಧರ್ ಪೂಜಾರ್, ಅನುರಾಧ ಕೊಟ್ರೇಶ್, ಸುನೀಲ್ ಕುಮಾರ್ ಬಿದ್ರಿ, ಪಿ.ಶಿವಕುಮಾರನಾಯ್ಕ ಇತರರಿದ್ದರು.

ಪೋಟೋ: 10-ಎಚ್‍ಪಿಎಲ್-6: ಹರಪನಹಳ್ಳಿ: ಸಾಮೂಹಿಕ ವಿವಾಹ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಮಾತನಾಡಿದರು.

Leave a Comment