ಸರಳ ರೀತಿಯಲ್ಲಿ ವಿರೂಪಾಕ್ಷ ಪಂಪಾಂಬಿಕೆ ಕಲ್ಯಾಣೋತ್ಸವ

ಬಳ್ಳಾರಿ, ಏ.7: ಐತಿಹಾಸಿಕ ಹಂಪಿಯಲ್ಲಿ ನಿನ್ನೆ ರಾತ್ರಿ ಪ್ರತಿ ವರ್ಷ ದಂತೆ ವಿರೂಪಾಕ್ಷ ದೇವಸ್ಥಾನದಲ್ಲಿ ನಿಯಮಿತ ಜನರ ಮಧ್ಯೆ ಅರ್ಚಕರು ಪಂಪಾಂಬಿಕೆ–ವಿರೂಪಾಕ್ಷೇಶ್ವರನ ಕಲ್ಯಾಣೋತ್ಸವ ಕೈಗೊಂಡರು.
ಕೊರೋನಾ ಹಿನ್ನಲೆಯಲ್ಲಿಬಕಲ್ಯಾಣೋತ್ಸವ ಸರಳ ರೀತಿಯಲ್ಲಿ ಆಚರಿಸಲಾಯಿತು.

ದೇವಸ್ಥಾನದ ಅರ್ಚಕರು ಪಂಪಾಂಬಿಕೆ ಹಾಗೂ ವಿರೂಪಾಕ್ಷೇಶ್ವರನಿಗೆ ವಿಶೇಷ ರೀತಿಯಲ್ಲಿ ಅಲಂಕರಿಸಿ, ಪೂಜೆ ನೆರವೇರಿಸಿದರು. ದೇಗುಲದ ಅರ್ಚಕರು ಬಿಟ್ಟರೆ ಮತ್ಯಾರೂ ಇರಲಿಲ್ಲ.

ನಾಳೆ ಜೋಡಿ ರಥೋತ್ಸವ ಇದ್ದು, ದೇವಸ್ಥಾನದ ಅಂಗಳದಲ್ಲಿ ಅರ್ಚಕರು ಸಾಂಕೇತಿಕವಾಗಿ ಮಡಿ ತೇರು ಎಳೆಯುವರು. ಪ್ರತಿ ವರ್ಷ ಸಹಸ್ರಾರು ಜನರ ಸಮ್ಮುಖದಲ್ಲಿ ನಡೆಯುತ್ತಿದ್ದ ಕಲ್ಯಾಣೋತ್ಸವ ಮತ್ತು ರಥೋತ್ಸವವನ್ನು ಈ ಬಾರಿ ಕೊರೋನಾ ಸೋಂಕು ಹರಡುವ ಭೀತಿಯಿಂದ ರದ್ದುಗೊಳಿಸಲಾಗಿದ್ದು, ಸಾಂಕೇತಿಕ ಆಚರಣೆಗೆ ಸೀಮಿತವಾಗಿದೆ.

Leave a Comment