ಸರಳವಾಗಿ ಸಪ್ತಪದಿ ತುಳಿದ ಅರ್ಜುನ್‌, ಅನು

ಬೆಂಗಳೂರು, ಮೇ ೧೦- ಲಾಕ್‌ಡೌನ್‌ ಹೊತ್ತಿನಲ್ಲಿ ಸ್ಯಾಂಡಲ್‌ವುಡ್‌ ನಿರ್ದೇಶಕ ಎ.ಪಿ ಅರ್ಜುನ್‌,  ಅನ್ನಪೂರ್ಣ ಅವರೊಂದಿಗೆ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಾಮಸಂದ್ರದ ಮಹಾಲಕ್ಷ್ಮಿ ಎನ್‍ಕ್ಲೇವ್ ನಲ್ಲಿ ಅದ್ಧೂರಿ, ಅಂಬಾರಿ, ರಾಟೆ, ಐರಾವತ ಚಿತ್ರಗಳನ್ನು ನಿರ್ದೇಶಿಸಿರುವ ಅರ್ಜುನ್ ಮತ್ತು ಹಾಸನ ಮೂಲದ  ಅನ್ನಪೂರ್ಣ ಸಪ್ತಪದಿ ತುಳಿದ್ದಾರೆ.
ಮದುವೆಗೆ ನಟ ಧ್ರುವ ಸರ್ಜಾ ಮತ್ತು ಕಿಸ್ ಸಿನಿಮಾ ಖ್ಯಾತಿಯ ವಿರಾಟ್ ಸೇರಿದಂತೆ ಕೆಲ ಕಲಾವಿದರು ಮಾತ್ರ ಭಾಗಿಯಾಗಿದ್ದು, ನವ ಜೋಡಿಗೆ ಶುಭಾ ಹಾರೈಸಿದ್ದಾರೆ.

ಲಾಕ್ ಡೌನ್ ಕಾರಣದಿಂದಾಗಿ ಅರ್ಜುನ್ ಅವರ ಮನೆಯಲ್ಲಿಯೇ ಮದುವೆ ಮಂಟಪವನ್ನು ಸಿದ್ಧಪಡಿಸಲಾಗಿತ್ತು. ಮನೆಯ ಮುಂದೆ ಶಾಮಿಯಾನ, ಚಪ್ಪರ ಹಾಕಿ, ಹೂವುಗಳಿಂದ ಅಲಂಕರಿಸಲಾಗಿತ್ತು. ಹೆಚ್ಚು ಜನರಿಗೆ ಆಹ್ವಾನ ನೀಡದೆಯೇ ಅರ್ಜುನ್, ಲಾಕ್ ಡೌನ್ ನಿಯಮಗಳನ್ನು ಪಾಲಿಸಿದರು.

ಅರ್ಜುನ್ ಅವರ ‘ಕಿಸ್’ ಚಿತ್ರ ಕಳೆದ ವರ್ಷ ಬಿಡುಗಡೆಯಾಗಿತ್ತು. ಮುಂದಿನ ಸಿನಿಮಾವನ್ನು ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ನಿರ್ದೇಶಿಸಲಿದ್ದಾರೆ. ಮಂಡ್ಯ ಮೂಲದವರಾದ ಅರ್ಜುನ್, ‘ತಂಗಿಗಾಗಿ’ ಚಿತ್ರಕ್ಕೆ ಹಾಡು ಬರೆಯುವ ಮೂಲಕ ಚಿತ್ರ ಸಾಹಿತಿಯಾಗಿ ಪ್ರವೇಶಿಸಿದ್ದರು. ಜತೆಗೆ ಸಹ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದರು. ‘ಅಂಬಾರಿ’ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು

Leave a Comment