ಸರಳತೆ ಮೆರೆದ ಶಾಸಕ ಕಾಮತ್

ಭಗಿನಿ ಸಮಾಜದಲ್ಲಿ ಹುಟ್ಟುಹಬ್ಬ ಆಚರಣೆ

ಮಂಗಳೂರು, ಡಿ.೭- ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ತಮ್ಮ ಹುಟ್ಟುಹಬ್ಬವನ್ನು ಭಗಿನಿ ಸಮಾಜ ಆಶ್ರಮದಲ್ಲಿ ಆಚರಿಸಿಕೊಳ್ಳುವ ಮೂಲಕ ಸರಳತೆ ಮೆರೆದಿದ್ದಾರೆ. ಆಡಂಬರ, ಗೌಜಿ ಗದ್ದಲಗಳಿಲ್ಲದೆ ತಮ್ಮ ೪೨ನೇ ಹುಟ್ಟು ಹಬ್ಬದ ಪ್ರಯುಕ್ತ ನಗರದ ಜೆಪ್ಪು ಮಾರ್ಕೆಟ್ ಸಮೀಪದ ಭಗಿನಿ ಸಮಾಜಕ್ಕೆ ಭೇಟಿ ನೀಡಿದ ವೇದವ್ಯಾಸ್ ಕಾಮತ್ ಪುಟ್ಟ ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮವನ್ನಾಚರಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಸಹ ಶಾಸಕರಿಗೆ ಕೇಕ್ ತಿನ್ನಿಸಿ ಖುಷಿಪಟ್ಟರು.

Leave a Comment