ಸರದಾರ ಶರಣಗೌಡ ಜನ್ಮದಿನ ನಾಳೆ

(ನಮ್ಮ ಪ್ರತಿನಿಧಿಯಿಂದ)

ಕಲಬುರಗಿ ಫೆ 23: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸರದಾರ ಶರಣಗೌಡ ಇನಾಮಾದಾರ ದುಮ್ಮದ್ರಿ

ಅವರ 105 ನೆಯ ಜನ್ಮದಿನವನ್ನು ನಾಳೆ (ಫೆ .24) ಸಂಜೆ‌ 6 ಗಂಟೆಗೆ ಕಲಬುರಗಿ ನಗರದ ಹಿಂದಿ ಪ್ರಚಾರ ಸಭೆಯಲ್ಲಿ ಆಯೋಜಿಲಾಗಿದೆ.

ಕಲ್ಯಾಣ ಕರ್ನಾಟಕ ಸ್ವತಂತ್ರ್ಯ ಹೋರಾಟಗಾರರ ಅಭಿಮಾನಿಗಳ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು,ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸುವರು ಎಂದು ‌ಬಳಗದ ಅಧ್ಯಕ್ಷ ಗಿರೀಶಗೌಡ ಇನಾಮದಾರ ದುಮ್ಮದ್ರಿ ಇಂದು ಸುದ್ದಿ ಗೋಷ್ಠಿ ಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಡಾ.ರೇವಣಸಿದ್ಧ ಶಿವಾಚಾರ್ಯರು,ಡಾ.ರುದ್ರಮುನಿ ಶಿವಾಚಾರ್ಯರು ವಹಿಸುವ

ರು.ಅಧ್ಯಕ್ಷತೆಯನ್ನು  ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ವಹಿಸುವರು.

ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸುವರು.ಡಾ.ಶಿವಲೀಲಾ ಶಾಂತಲಿಂಗ ಮಠಪತಿ ಮತ್ತು

ಅಮೃತ ದೊಡ್ಡಮನಿ ಕಾಚಾಪುರ ಅವರು ಸರದಾರ ಶರಣಗೌಡ ಇನಾಮದಾರ ದುಮ್ಮದ್ರಿ ಅವರ ಕುರಿತು  ಉಪನ್ಯಾಸ ನೀಡುವರು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜುಗೌಡ ನಾಗನಹಳ್ಳಿ,ಮಂಜುನಾಥ ಕಾಳೆ,ಶಿವಯ್ಯ ಮಠಪತಿ,ಶರಣು ಚಪ್ಪರಬಂಡಿ,ಯೋಗೇಶ ತೆಂಗಳಿ ಉಪಸ್ಥಿತರಿದ್ದರು.

Leave a Comment