ಸರಣಿ ಗೆಲುವು ತೃಪ್ತಿ ತಂದಿದೆ: ಕೊಹ್ಲಿ

ಬೆಂಗಳೂರು, ಜ ೨೦- ಆಸೀಸ್ ವಿರುದ್ಧ ಸರಣಿ ಗೆದ್ದಿರುವುದು ಸಂಪೂರ್ಣ ತೃಪ್ತಿ ತಂದಿದೆ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಪಂದ್ಯ ಆರಂಭದಲ್ಲಿಯೇ ನಾವು ಅನುಭವಿ ಆರಂಭಿನ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು ಕಳೆದುಕೊಂಡವು. ಅವರ ಸ್ಥಾನದಲ್ಲಿ ಕೆ.ಎಲ್ ರಾಹುಲ್ ಆರಂಭಿಗನಾಗಿ ಆಡಿದರು. ಉತ್ತಮ ಆರಂಭದ ಹೊರತಾಗಿಯೂ ರಾಹುಲ್ ವಿಕೆಟ್ ಒಪ್ಪಿಸಿದರು. ಏಕೆಂದರೆ, ಆ ವೇಳೆ ಚೆಂಡು ತಿರುಗುತ್ತಿತ್ತು. ನಾನು ಕ್ರೀಸ್ ಗೆ ಹೋದ ಬಳಿಕ ರೋಹಿತ್ ಶರ್ಮಾ ಬಳಿ ಮಾತನಾಡಿಕೊಂಡು ಎಚ್ಚರಿಕೆಯ ಹೆಜ್ಜೆ ಇಟ್ಟೆವು. ಆಸ್ಟ್ರೇಲಿಯಾ ವಿಕೆಟ್ ಗಾಗಿ ಹಾತೊರೆಯುತ್ತಿದ್ದು, ನಾವು ದೊಡ್ಡ ಜತೆಯಾಟವಾಡುವ ಅಗತ್ಯವಿದೆ ಎಂದು ಮಾತನಾಡಿಕೊಂಡೆವು ಎಂದು ಹೇಳಿದರು.

ಕಳೆದ ವರ್ಷ ಸ್ಟೀವನ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿಯಲ್ಲಿ ಅವರು ಆರಂಭದಲ್ಲಿ 2-0 ಹಿನ್ನಡೆ ಅನುಭವಿಸಿದ್ದರು. ನಂತರ ಸತತ ಮೂರೂ ಪಂದ್ಯಗಳನ್ನು ಗೆದ್ದು ಸರಣಿ ಗೆದ್ದು ಬೀಗಿದ್ದರು. ಆದರೆ, ಈ ಬಾರಿ ವಾರ್ನರ್ ಹಾಗೂ ಸ್ಮಿತ್ ಅವರೊಂದಿಗೆ ಬಂದಿದ್ದು, ಮೊದಲನೇ ಪಂದ್ಯ 10 ವಿಕೆಟ್ ಗಳಿಂದ ಭಾರತವನ್ನು ಹೀನಾಯವಾಗಿ ಮಣಿಸಿತ್ತು. ಆದಾಗ್ಯೂ, ಪುಟಿದೆದ್ದ ಭಾರತ ೨-೧ ಅಂತರದಲ್ಲಿ ಸರಣಿ ಜಯಿಸಿತು. ಈ ಬಗ್ಗೆ ಮಾತನಾಡಿದ ಕೊಹ್ಲಿ, ಈ ಸರಣಿಯ ಜಯ ಸಂಪೂರ್ಣ ತೃಪ್ತಿ ತಂದಿದೆ. ಏಕೆಂದರೆ, ಕಳೆದ ಬಾರಿ ಇದ್ದ ತಂಡಕ್ಕಿಂತ ಈಗಿನ ತಂಡ ಬಲಿಷ್ಠವಾಗಿತ್ತು. ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಶೇನ್ ಅವರಂಥ ಬಲಿಷ್ಠ ಬ್ಯಾಟಿಂಗ್ ಪಡೆ ಜತೆಗೆ ಬೌಲಿಂಗ್ ವಿಭಾಗವೂ ಅತ್ಯುತ್ತಮವಾಗಿತ್ತು. ೨೦೨೦ರ ವರ್ಷಕ್ಕೆ ನಮಗೆ ಅತ್ಯುತ್ತಮ ಆರಂಭ ಸಿಕ್ಕಿದೆ ಎಂದರು.

ವಿಕೆಟ್ ಕೀಪರ್‌ಆಗಿ ಕೆಎಲ್‌ಆರ್ ಮುಂದುವರಿಕೆ
ಪಂದ್ಯದ ಗೆಲುವಿಗೆ ಮಹತ್ವದ ಪಾತ್ರವಹಿಸಿದ ಕೆಎಲ್ ರಾಹುಲ್ ಆಟವನ್ನು ಕೊಂಡಾಡಿದ ಕೊಹ್ಲಿ, ಕೇವಲ ಬ್ಯಾಟ್ಸ್ ಮನ್ ಆಗಿ ಮಾತ್ರವಲ್ಲದೇ ರಾಹುಲ್ ವಿಕೆಟ್ ಕೀಪರ್ ಆಗಿಯೂ ನಿರ್ಣಾಯಕ ಪಾತ್ರ ನಿರ್ವಹಿಸಿದ್ದಾರೆ. ಹೀಗಾಗಿ ಮುಂದಿನ ಕೆಲ ಸರಣಿಗಳಿಗೂ ಕೆಎಲ್ ರಾಹುಲ್ ರನ್ನೇ ವಿಕೆಟ್ ಕೀಪರ್ ಆಗಿ ಮುಂದುವರೆಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇದ್ದರಿಂದ ರಿಷಬ್ ಪಂತ್ ಜಾಗಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಾಗಿದೆ.

kl_rahul_keeping

 

ಡೆತ್ ಬೌಲಿಂಗ್- ಫಿಂಚ್ ಮೆಚ್ಚುಗೆ

ಮೂರನೇ ಏಕದಿನ ಪಂದ್ಯದಲ್ಲಿ ಸೋತು ಏಕದಿನ ಸರಣಿಯನ್ನು ಕಳೆದುಕೊಂಡ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಭಾರತ ತಂಡದ ಡೆತ್ ಬೌಲಿಂಗ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೊನೆಯ ೧೦ ಓವರ್ ಗಳಲ್ಲಿ ಆಸ್ಟ್ರೇಲಿಯಾ ಐದು ವಿಕೆಟ್ ಕಳೆದುಕೊಂಡಿತ್ತು. ಕೊನೆಯ ಮೂರು ಓವರ್ ಗಳಲ್ಲಿ ಭಾರತೀಯ ಬೌಲರ್ ಗಳು ನೀಡಿದ್ದು ಕೇವಲ ೧೩ ರನ್ ಮಾತ್ರ. ಈ ಬಗ್ಗೆ ಮಾತನಾಡಿ, ನಮ್ಮ ಬ್ಯಾಟ್ಸ್ ಮನ್ ಗಳು ಕೊನೆಯ ಓವರ್ ಗಳಲ್ಲಿ ನಿಯಮಿತವಾಗಿ ರನ್ ಗಳಸುವಲ್ಲಿ ವಿಫಲವಾದರು ಎಂದು ಹೇಳಿದರು.

finch

ರಾಜ್ ಕೋಟ್ ಹಾಗೂ ಬೆಂಗಳೂರಿನ ಪಂದ್ಯಗಳಲ್ಲಿ ಡೆತ್ ಓವರ್ ಗಳಲ್ಲಿ ಮೊಹಮ್ಮದ್ ಶಮಿ, ಜಸ್ಪ್ರಿತ್ ಬುಮ್ರಾ ಹಾಗೂ ನವದೀಪ್ ಸೈನಿ ಅವರ ಬೌಲಿಂಗ್ ಮೆಟ್ಟಿನಿಲ್ಲುವಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳು ವಿಫಲರಾಗಿದ್ದರು. ವಿಶೇಷವಾಗಿ ಇವರು ಯಾರ್ಕರ್ ಪ್ರಯೋಗ ಮಾಡುವ ಮೂಲಕ ರನ್ ಗಳಿಗೆ ಕಡಿವಾಣ ಹಾಕುತ್ತಿದ್ದರು. ಶಮಿ ಯಾರ್ಕರ್ ದಾಳಿ ನಡೆಸಿದ್ದರು. ಇವರಿಗೆ ಮತ್ತೊಂದು ತುದಿಯಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ನವದೀಪ್ ಸೈನಿ ಕೂಡ ಸಾಥ್ ನೀಡುತ್ತಿದ್ದರು. ಯಾವ ಹಂತದಲ್ಲಿ ನಾವು ಸುಧಾರಣೆಯಾಗಬೇಕು ಎಂಬ ಬಗ್ಗೆ ಅರಿವಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಟೀಮ್ ಇಂಡಿಯಾದ ಡೆತ್ ಓವರ್ ಮಾತ್ರ ಅತ್ಯುತ್ತಮವಾಗಿ,” ಎಂದು ಫಿಂಚ್ ಶ್ಲಾಘಿಸಿದ್ದಾರೆ.

Leave a Comment