ಸರಣಿ ಅಪಘಾತ : ಮೂರು ಮಂದಿ ಸಾವು

ಮಂಡ್ಯ. ಆ.12- ಅಮವಾಸ್ಯೆಯ ಅಸುಪಾಸು‌ ಮಂಡ್ಯದಲ್ಲಿ ಮರಣ ಮೃದಂಗ ಜೋರಾಗೇ ಸದ್ದು ಮಾಡಿದ್ದು, ನೆನ್ನೆ ಅಮವಾಸ್ಯೆಯಾದ್ದರಿಂದ ,ನೆನ್ನೆಇಂದೀಚೆಗೆ 5ಜನ ಅಪಘಾತದಲ್ಲೇ ಸಾವನ್ನಪ್ಪಿದ್ದಾರೆ, ನೆನ್ನೆ ರಾತ್ರಿ ಮಳವಳ್ಳಿ ತಾಲೂಕಿನ ಬೆಳಕವಾಡಿ ಬಳಿ ಸಂಭವಿಸಿದೆ.
ವಾಸುಹಳ್ಳಿ ಗ್ರಾಮದ ನಾಗೇಂದ್ರ (25) ಎಂಬ ಯುವಕ‌ನೇ ಮೃತ ಪಟ್ಟ ದುರ್ದೈವಿಯಾಗಿದ್ದು ಈತ ತನ್ನ ಎಂದಿನ ಕೆಲಸ ಮುಗಿಸಿ ಸ್ವಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದಾಗ, ಚಲಿಸುತ್ತಿದ್ದ ಬೈಕ್‌ ನಿಂದ ಆಯತಪ್ಪಿ ಕೆಳಗೆ ಬಿದ್ದು ಸಾವನ್ನಪಿದಾನೇ.
ಇದೇ ತಡರಾತ್ರಿ ಮದ್ದೂರು ತಾಲೂಕಿನ ಟಿಎಪಿಸಿಎಂಎಸ್ ಗೋದಾಮಿನ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ, ಉಮೇಶ್ (50) ಎಂಬುವರು ಸಾವನ್ನಪ್ಪಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ, ಕಾರಿನಲ್ಲಿದ್ದ ಮತ್ತಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ, ಇವರೆಲ್ಲರೂ ಬೆಂಗಳೂರು ಮೂಲದವರಾಗಿದ್ದು, ಮಹದೇಶ್ವರ ಬೆಟ್ಟಕ್ಕೆ ತೆರಳಿ ಬೆಂಗಳೂರಿಗೆ ವಾಪಾಸ್ಸಾಗುತ್ತಿದ ವೇಳೆ ನಿದ್ದೆಗಣ್ಣಿನಲ್ಲಿದ್ದ ಕಾರು ಚಾಲಕ ಡಿವೈಡರ್ ಗೆ ಡಿಕ್ಕಿಹೊಡೆದ ಪರಿಣಾಮ ಕಾರು ಪಲ್ಟಿಯಾಗಿ‌ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇನ್ನೊಂದೆಡೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿ ಚಾಲಕ ಶಿವಕುಮಾರ್ (35) ಸಾವನ್ನಪ್ಪಿದ ಘಟನೆ ಮದ್ದೂರು ತಾಲೂಕಿನ ಬೆಸಗರಹಳ್ಳಿ ಬಳಿ ನಡೆದಿದೆ, ಟಾಟಾ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದು ಟ್ರಾಕ್ಟರ್ ಪಲ್ಟಿಯಾಗಿದ್ದು, ಅಪಘಾತದಲ್ಲಿ ಕಬ್ಬಿನ‌ ಕಂತ್ತೆಗಳ ಕೆಳಗೆ ಸಿಕ್ಕಿಕೊಂಡಿದ್ದ ಚಾಲಕ ಶಿವಕುಮಾರ್ ರನ್ನು ಹೊರ ತೆಗೆಯುವುದರೊಳಗೆ ಸಾವನ್ನಪ್ಪಿದ್ದಾನೆ.

Leave a Comment