ಸರಕಾರಿ ನೌಕರರ ಸಂಘದ ಚುನಾವಣೆ ಅಧ್ಯಕ್ಷ ಆಕಾಂಕ್ಷಿಗಳಿಗೆ ಸೋಲು.

ಎನ್.ವೀರಭದ್ರಗೌಡ
* ಹಾಲಿ ಅಧ್ಷಕ್ಷ ಮಲ್ಲೇಶ್ ಗುಂಪಿಗೆ ಸೋಲು
* ನಿಂಗಪ್ಪ ಗುಂಪಿಗೆ ಗೆಲುವು
* ಅಧ್ಯಕ್ಷರಾಗಲು ಉಲ್ಲಾಸದಲ್ಲಿ ಹೊಸಬರು.
* ಸೀರೆ, ಶರ್ಟು ಹಂಚಿದವರಿಗೆ ಗೆಲುವು
* ಹಣ, ಮದ್ಯದ ಪಾರ್ಟಿ ಕೊಟ್ಟವರಿಗೆ ಸೋಲು

ಬಳ್ಳಾರಿ, ಜೂ.14: ಕರ್ನಾಟಕ ಸರಕಾರಿ ನೌಕರರ ಸಂಘದ ಬಳ್ಳಾರಿ ಜಿಲ್ಲಾ ಘಟಕದ ಸದಸ್ಯತ್ವಕ್ಕೆ ನಿನ್ನೆ ನಡೆಎದ ಚುನಾವಣೆಯಲ್ಲಿ ಹಾಳಿ ಅಧ್ಯಕ್ಷ ಹಾಗು ಮತ್ತೊಮ್ಮೆ ಅಧ್ಯಕ್ಷರಾಗಬೇಕೆಂದು ಕಣದಲ್ಲಿದ್ದ ಡಾ.ಎಂ.ಟಿ.ಮಲ್ಲೇಶ್ ಮತ್ತು ಕಳೆದ ಬಾರಿ ಅಧ್ಯಕ್ಷರಾಗಲು ಪ್ರಯತ್ನಿಸಿ ಈ ಬಾರಿ ಅಧ್ಯಕ್ಷರಾಗಲು. ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದ ಡಾ.ರಾಜಶೇಖರ ಗಾಣಿಗೇರ ಅವರುಗಳೇ ಸೋಲು ಕಂಡಿದ್ದಾರೆ. ಇದರಿಂದ ಅಧ್ಯಕ್ಷರಾಗಲು ಹೊಸಬರು ಉಲ್ಲಾಸಗೊಂಡಿದ್ದಾರೆ. ಇನ್ನು ತೀವ್ರ ಪೈಪೋಟಿಯಿಂದ ಕೂಡಿದ್ದ ಪ್ರಾಥಮಿಕ ಶಾಲಾ ಕ್ಷೇತ್ರದ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮಲ್ಲೇಶ್ ಅವರ ಗುಂಪು ಸೋಲು ಕಂಡಿದ್ದು, ನಿಂಗಪ್ಪ ಅವರ ಗುಂಪು ಭರ್ಜರಿ ಜಯಗಳಿಸಿದೆ. ಎನ್.ಪಿ.ಎಸ್ ನೌಕರರ ಪ್ರಯತ್ನ ಫಲ ನೀಡಿಲ್ಲ.

ಜಿಲ್ಲಾ ಸಂಘದ ಒಟ್ಟು 62 ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ 28 ಜನರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 34 ಸದಸ್ಯ ಸ್ಥಾನಗಳಿಗೆ 86 ಜನ ಸ್ಪರ್ಧಾ ಕಣದಲ್ಲಿದ್ದರು. ನಿನ್ನೆ ನಗರದ ಮುನಿಷಿಪಲ್ ಹೈಸ್ಕೂಲ್‍ನಲ್ಲಿ ರಚಿಸಿದ್ದ 26 ಮತಗಟ್ಟೆಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಿತು. ನಂತರ ಮತಗಳ ಎಣಿಕೆ ಮಾಡಲಾಯಿತು. ಎಲ್ಲಾ 34 ಸ್ಥಾನಗಳ ಫಲಿತಾಂಶ ಪ್ರಕಟವಾದಾಘ ರಾತ್ರಿ ಒಂಭತ್ತು ಗಂಟೆಯಾಗಿತ್ತು.

ಪ್ರಾಥಮಕಿ ಶಾಲಾ ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಿ,ನಿಂಗಪ್ಪ, ಮತ್ತವರ ತಂಡದ ಬಿ.ರಾಘವೇಂದ್ರ, ಆರ್. ವಾಸುದೇವ, ಡಿ.ಕೆ.ಚೆನ್ನಬಸಪ್ಪ ಅವರುಗಳು ಆಯ್ಕೆಯಾದರು. ಇವರ ತಂಡಕ್ಕೆ ತೀವ್ರ ಪೈಪೆÇೀಟಿ ನೀಡಿದ್ದ ಹಾಳಿ ಅಧ್ಯಕ್ಷ ಡಾ.ಎಂ.ಟಿ.ಮಲ್ಲೇಶ್, ಮತ್ತವರ ತಂಡದ ಪೆÇಂಪನಗೌಡ, ದೊಡ್ಡಬಸಪ್ಪ ಮೆಹತಾಬ್ ಅವರು ಹಾಗು ಈ ಬಾರಿ ಮತ್ತೊಂದು ಗುಂಪಾಗಿ ಕಣದಲ್ಲಿದ್ದ ಎನ್‍ಪಿಎಸ್ ನೌಕರರ ಅಕ್ಕಿ ಧಮೇಂದ್ರ, ತಿಪ್ಪಾರೆಡ್ಡಿ, ಕೆಂಚಪ್ಪ, ಎರ್ರಿಸ್ವಾಮಿ ಅವರ ತಂಡವೂ ಸೋಲು ಕಂಡಿತು.

ಇನ್ನು ಆರೋಗ್ಯ ಇಲಾಖೆಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜ್ಯೋತಿ ಲಕ್ಷ್ಮಿ, ನಾಗರಾಜ್, ಶ್ರೀನಿವಾಸ ರೆಡ್ಡಿ ಅವರ ಗುಂಪು ಜಯಭೇರಿ ಬಾರಿಸಿದ್ದರೆ ಇವರಿಗೆ ತೀವ್ರ ಸ್ಪರ್ಧೆ ಒಡ್ಡಿದ್ದ ಪ್ರಾನ್ಸಿಸ್, ವಿರೂಪಾಕ್ಷಿ, ರಮೇಶ್ ಅವರ ಗುಂಪು ಸೋಳು ಕಂಡಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇಲಾಕೆಯೊಂದರ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹಿಳೆಯರಿಗೆ ಸೀರೆ ಮತ್ತು ಪುರುಷರಿಗೆ ಶರ್ಟು ಪ್ಯಾಟ್ ಬಟ್ಟೆ ನೀಡಿದ ವ್ಯಕ್ತಿ ಜಯ ಸಾಧಿಸಿದ್ದರೆ. ಒಂದು ಓಟಿಗೆ 5 ರಿಂದ10 ಸಾವಿರ ರೂಪಾಯಿ ನೀಡಿದ್ದ ವ್ಯಕ್ತಿ ಕೇವಲ ಮೂರು ಮತಗಳ ಅಂತರದಿಂದ ಸೋಲು ಕಂಡಿದ್ದಾರೆ.

 ಆಯ್ಕೆಯಾದವರ ವಿವರ ಹೀಗಿದೆ:
ಪಶು ಸಂಗೋಪನಾ ಇಲಾಖೆಯ ತಿಮ್ಮಯ್ಯ.ಯು, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ರಾಕೇಶ್, ವಾಣಿಜ್ಯ ತೆರಿಗೆ ಇಲಾಖೆಯ ಈ.ಗುರುಸ್ವಾಮಿ, ಎಸ್.ಡೋಮನಿಕ್, ಲೋಕೋಪಯೋಗಿ ಮತ್ತು ಜಿಲ್ಲಾ ಪಂಚಾಯತ್ ಇಂಜಿನಿಯರಿಮಗ್ ಇಲಾಖೆಯ ಆಸೀಫೆ, ಎ.ಶ್ರೀನಿವಾಸ, ಜಿಲ್ಲಾ ಪಂಚಾಯತ್ ಇಲಾಖೆಯ ಎಂ.ಬಸವರಾಜ್ ಹಿರೇಮಠ, ಅಬಕಾರಿ ಇಲಾಖೆಯ ಡಿ. ಗುರುರಾಜ್, ಅರಣ್ಯ ಇಲಾಖೆಯ ಸಿ.ನಾಗರಾಜ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಾಗರಾಜ,ಕೆ.ಶ್ರೀನಿವಾಸಲು,ಜ್ಯೋತಿಲಕ್ಷ್ಮಿ, ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಆಸ್ಪತ್ರೆಯ ಹನುಮಂತರಾಯ,ಮರೆಪ್ಪ. ಆಯುಷ್ ಇ.ಎಸ್.ಐ.ಹಾಗು ತಾರಾನಾಥದ ಶರಣಬಸಪ್ಪ ಎಸ್.ಜಿನೇಗ, ತೋಟಗಾರಿಕೆ ಇಲಾಖೆಯ ಡಿ.ಪ್ರವೀಣ್ ಕುಮಾರ್, ಪ್ರಾಥಮಿಕ ಶಾಲ ಕ್ಷೇತ್ರಗಿಂದ ಸಿ.ನಿಂಗಪ್ಪ,ಬಿ.ರಾಘವೇಂದ್ರ, ಆರ್.ವಾಸುದೇವ, ಡಿ.ಕೆ.ಚೆನ್ನಬಸಪ್ಪ, ಪ್ರೌಢ ಶಾಲೆಯ ಹರಿಪ್ರಸಾದ್.ಡಿ,ಕೆ.ಮೊನಮ್ಮದ್ ರಿಚ್ವಾನ್ ಉಲ್ಲಾ, ಸರಕಾರಿ ಕಿರಿಯ ಕಾಲೇಜ್‍ಗಳು ಜನಕರಾಜ ಪತ್ತಾರ್, ಪದವಿ ಕಾಲೇಜುಗಳು ಶ್ರೀಧರ್.ಎಸ್, ತಾಂತ್ರಿಕ ಶಿಕ್ಷಣ ಇಲಾಖೆ( ಪಾಲಿಟೆಕ್ನಿಕ್/ಜೆ.ಟಿ.ಎಸ್.) ಯ ಅಬ್ದುಲ್ ರೆಹಮಾನ್, ಭೂಮಾಪನ,ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ರಮೇಶ, ಎನ್.ಸಿ.ಸಿ. ಮತ್ತು ಕಾರಾಗೃಹ ಇಲಾಖೆಯ ವೆಂಕಟೇಶ, ಖಜಾನೆ ಇಲಾಖೆಯ ಪಿ.ಅಲ್ಲಾಬಕಷ್, ಕಾರ್ಮಿಕ ಕಾರ್ಖಾನೆಗಳು ಮತ್ತು ಬಾಯ್ಲರ್‍ಗಳ ಇಲಾಖೆಯ ಧರ್ಮರೆಡ್ಡಿ.ಕೆ, ನ್ಯಾಯಾಂಗ ಇಲಾಖೆಯ ಮಲ್ಲಿಕಾರ್ಜುನ ಗೌಡ ಹೊಸಮನೆ,ಜಿ.ಭಾಸ್ಕರ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಂ.ಸಿ.ಶಂಕರ ಮೂರ್ತಿ, ಡಯಟ್ ಶಿಕ್ಷಣ ಸಂಸ್ಥೆ ಲಿಪಿಕ ನೌಕರರು ಶಿಕ್ಷಣ ಇಲಾಖೆಯ ಮಹೇಶ್.ಕೆ.ಜಿ, ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯ ಔಷಧ ನಿಯಂತ್ರಣ ಇಲಾಖೆಯ ಶ್ರೀನಿವಾಸ ರೆಡ್ಡಿ.ಎನ್.ಅವರು ಆಯ್ಕೆಯಾಗಿದ್ದಾರೆ.

ಇನ್ನು ಮುಂದೆ ತಾಲೂಕು ಅಧ್ಯಕ್ಷರ ಚುನಾವಣೆ ನಡೆದು, ಅವರು ಜಿಲ್ಲಾ ಘಟಕದ ಸದಸ್ಯರಾಗುತ್ತಾರೆ. ಇದರಿಂದ ಜಿಲ್ಲಾ ಘಟಕದ ಸದಸ್ಯರ ಸಂಖ್ಯೆ 72 ಆಗಲಿದ್ದು. ಇವರು ಜಿಲ್ಲಾ ಘಟಕದ ಅಧ್ಯಕ್ಷರನ್ನು, ಖಜಾಂಚಿಯನ್ನು ಮತ್ತು ರಾಜ್ಯ ಸಂಘದ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತಾರೆ. ಜಿಲ್ಲಾ ಘಟಕದ ಅಧ್ಯಕ್ಷರಾಗಲು ಐದು ಜನರು ಸಿದ್ದರಾಗಿದ್ದಾರಂತೆ. ಯಾರು ಯಾವ ರೀತಿಯಲ್ಲಿ ಸದಸ್ಯರನ್ನು ಮನವೊಲಿಸಿ ಅಧ್ಯಕ್ಷರಾಗಲು ಕಾರ್ಯತಂತ್ರ ರೂಪಿಸಿತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Leave a Comment