ಸರಕಾರಿ ನೌಕರರ ಸಂಘದ ಚುನಾವಣೆ 26 ಬೂತ್‍ಗಳಲ್ಲಿ ಬಿರುಸಿನ ಮತದಾನ

ಬಳ್ಳಾರಿ, ಜೂ.13: ನಗರದ ಮುನಿಷಿಪಲ್ ಹೈಸ್ಕೂಲ್‍ನಲ್ಲಿ ಸ್ಥಾಪಿಸಿರುವ 26 ಮತಗಟ್ಟೆಗಳಲ್ಲಿ ಇಂದು ಬೆಳಿಗ್ಗೆ 11 ಗಂಟೆಯಿಂದ ಜಿಲ್ಲಾ ಸರ್ಕಾರಿ ನೌಕರರ ಸಂಘದ 34 ಸದಸ್ಯ ಸ್ಥಾನಗಳಿಗೆ ಮತದಾನ ನಡೆಯಿತು.

ಈಗಾಗಲೇ ವಿವಿಧ ಇಲಾಖೆಗಳಿಂದ 28 ಜನ ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಉಳಿದ 34 ಸದಸ್ಯ ಸ್ಥಾನಗಳಿಗೆ ಬಿರುಸಿನ ಮತದಾನ ನಡೆಯಿತು. ಇದೇ ರೀತಿ ಜಿಲ್ಲೆಯ ವಿವಿಧ ತಾಲೂಕು ಘಟಕಗಳ ಸದಸ್ಯ ಸ್ಥಾನಕ್ಕೂ ಮತದಾನ ಆಯಾ ತಾಲೂಕು ಕೇಂದ್ರಗಳಲ್ಲಿ ನಡೆಯಿತು.

ಬಳ್ಳಾರಿ ಜಿಲ್ಲಾ ಸಮಿತಿಯ 34 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ ಹಾಲಿ ಅಧ್ಯಕ್ಷ ಎಂ.ಟಿ.ಮಲ್ಲೇಶ್ ಸೇರಿದಂತೆ 86 ಜನ ಅಂತಿಮ ಕಣದಲ್ಲಿದ್ದಾರೆ. ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲೇಶ ಮತದಾನ ಮಾಡಿದರು.

ಮತಗಟ್ಟೆಗಳ ಮುಂದೆ ಸ್ಪರ್ಧೆ ಬಯಸಿರುವ ಅಭ್ಯರ್ಥಿಗಳು ಷಾಮಿಯಾನದ ಟೆಂಟ್‍ಗಳನ್ನು ಹಾಕಿ ತಮಗೆ ಮತ ನೀಡುವಂತೆ ಕೋರುವ ದೃಶ್ಯ ಸಮಾನ್ಯವಾಗಿತ್ತು. ಶಿಕ್ಷಣ ಮತ್ತು ಆರೋಗ್ಯ ಇಲಾಖೆಯ ಸದಸ್ಯರ ಆಯ್ಕೆಯ ಮತಗಟ್ಟೆಗಳ ಮುಂದೆ ಮಾತ್ರ ಮತದಾನ ಮಾಡುವವರು ಸಾಲಾಗಿ ನಿಂತಿದ್ದರು. ಉಳಿದಂತೆ ಕಡಿಮೆ ಸಂಖ್ಯೆ ಇರುವ ಇಲಾಕೆಗಳ ಸದಸ್ಯರ ಆಯ್ಕೆಯ ಮತಗಟ್ಟೆಗಳಿಗೆ ಆಗೊಬ್ಬರು ಈಗೊಬ್ಬರು ಬಂದು ಮತ ಚಲಾಯಿಸಿ ತೆರಳುತ್ತಿದ್ದರು. ಇನ್ನು ಕೆಲ ಇಲಾಖೆಗಳ ಸದಸ್ಯರ ಆಯ್ಕೆಗೆ ಸಂಬಂಧಿಸಿದ ಮತ ಚಲಾವಣೆ ಮಧ್ಯಾಹ್ನ ಒಂದು ಗಂಟೆ ಒಳಗೆ ಮುಗಿದು ಹೋಗಿತ್ತು. ಮತಗಟ್ಟೆಗಳ ಮುಂದೆ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು.

ಆರೋಗ್ಯ ಇಲಾಖೆಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ, ಜ್ಯೋತಿ ಲಕ್ಷ್ಮಿ, ನಾಗರಾಜ್, ಶ್ರೀನಿವಾಸ ರೆಡ್ಡಿ ಒಂಧು ಗುಂಪಿನಿಂದ ಹಾಘು ಮತ್ತೊಂದು ಗುಂಪಿನಿಂದ ಪ್ರಾನ್ಸಿಸ್, ವಿರೂಪಾಕ್ಷಿ, ರಮೇಶ್ ಮತ್ತೊಂದು ಗುಂಪಿನಿಂದ ಸ್ಪರ್ಧೆಯಲ್ಲಿದ್ದಾರೆ.

ಇನ್ನು ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ನಾಲ್ಕು ಕ್ಷೇತ್ರಗಳಿಗೆ ಹಾಲಿ ಜಿಲ್ಲಾಧ್ಯಕ್ಷ ಎಂ.ಟಿ.ಮಲ್ಲೇಶ್, ತಮ್ಮ ತಂಡದ ಪೊಂಪನಗೌಡ, ದೊಡ್ಡಬಸಪ್ಪ ಮೆಹತಾಬ್ ಅವರೊಂದಿಗೆ ಮತ್ತೊಮ್ಮೆ ಚುನಾವಣೆ ಕಣದಲ್ಲಿ ತೀವ್ರ ಸ್ಪರ್ಧೆಯನ್ನು ಎದಿರಿಸುತ್ತಿದ್ದಾರೆ. ಅವರಿಗೆ ಎದುರಾಳಿಗಳಾಗಿ ಸಿ.ನಿಂಗಪ್ಪ ಅವರು ಚೆನ್ನಬಸಪ್ಪ, ಬಿ.ರಾಘವೇಂದ್ರ, ವಾಸುದೇವ ಅವರೊಂದಿಗೆ ಮತ್ತು ಎನ್‍ಪಿಎಸ್ ನೌಕರರ ತಂಡವಾಗಿ ಮಸೀದಿಪುರದ ಪೊಂಪಾಪತಿಗೌಡ ಅವರ ಬೆಂಬಲದೊಂದಿಗೆ ಅಕ್ಕಿ ಧಮೇಂದ್ರ, ತಿಪ್ಪಾರೆಡ್ಡಿ, ಕೆಂಚಪ್ಪ, ಎರ್ರಿಸ್ವಾಮಿ ಅವರ ತಂಡವೂ ತಮ್ಮದೇ ಆದ ರೀತಿಯಲ್ಲಿ ಪೈ ಪೋಟಿ ನೀಡಿದೆ

ಮತದಾನದ ಸಂಜೆ ನಾಲ್ಕು ಗಂಟೆವರೆಗೆ ನಡೆಯಿತು. ನಂತರ ಮತಗಳ ಎಣಿಕೆ ಆಂರಭಗೊಂಡಿದೆ. ರಾತ್ರಿ 9 ಗಂಠೆ ವೇಳೆಗೆ ಬಹುತೇಕ ಎಲ್ಲಾ ಸ್ಥಾನಗಳ ಫಲಿತಾಂಶ ಹೊರ ಬೀಳಲಿದೆ ಎಂದು ಚುನಾವಣಾಧಿಕಾರಿ ಟಿ.ರಾಜಾರೆಡ್ಡಿ ತಿಳಿಸಿದ್ದಾರೆ.

ಇಂದು ಚುನಾವಣೆ ನಡೆದ ಇಲಾಖೆ ಹಾಗೂ ಸ್ಥಾನಗಳ ಸಂಖ್ಯೆ ಹೀಗಿದೆ:
ಪಶು ಸಂಗೋಪನೆ 1, ಅಂಕಿ ಅಂಶಗಳ ಇಲಾಖೆ 1, ವಾಣಿಜ್ಯ ತೆರಿಗೆ ಇಲಾಖೆ 2, ಲೋಕೋಪಯೋಗಿ ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ 2, ಜಿಲ್ಲಾ?ಪಂಚಾಯ್ತಿ 1, ಅಬಕಾರಿ ಇಲಾಖೆ 1, ಅರಣ್ಯ ಇಲಾಖೆ 1, ಆರೋಗ್ಯ ಇಲಾಖೆ 3, ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾಸ್ಪತ್ರೆ? 2, ಆಯುಷ್ ಮತ್ತು ಇಎಸ್‍ಐ 1, ತೋಟಗಾರಿಕೆ ಇಲಾಖೆ 1, ಪ್ರಾಥಮಿಕ ಶಾಲೆ 4, ಪ್ರೌಢಶಾಲೆ 2, ಪದವಿಪೂರ್ವ ಕಾಲೇಜು 1, ಪದವಿ ಕಾಲೇಜು 1, ಪಾಲಿಟೆಕ್ನಿಕ್ 1, ಭೂಮಾಪನ ಇಲಾಖೆ 1, ಎನ್‍ಸಿಸಿ ಮತ್ತು ಕಾರಾಗೃಹ 1, ಖಜಾನೆ ಇಲಾಖೆ1, ಕಾರ್ಮಿಕ ಇಲಾಖೆ 1, ನ್ಯಾಯಾಂಗ ಇಲಾಖೆ 2, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮೀಣಾಭಿವೃದ್ಧಿ 1, ಶಿಕ್ಷಣ ಇಲಾಖೆಯ ಲಿಪಿಕ ನೌಕರರು 1, ಪ್ರಾದೇಶಿಕ ಔಷಧ ನಿಯಂತ್ರಣ ಇಲಾಖೆ 1 ಸ್ಥಾನಕ್ಕೆ ಮತದಾನ ನಡೆಯಿತು.

Leave a Comment