ಸರಕಾರಿ ಕಛೇರಿಯಲ್ಲಿ ಬಯೋಮೆಟ್ರಿಕ್ ಗೊಂದಲ

ವನಿತಾ.ಎನ್.ದಾಸರಹಳ್ಳಿ

ಬೆಂಗಳೂರು, ಮಾ ೧೭- ಸರಕಾರಿ ಕಚೇರಿಗಳಲ್ಲಿ ನೌಕರರು ಸಮಯಕ್ಕೆ ಸರಿಯಾಗಿ ಬರವುದನ್ನು ಪರಿಗಣಿಸಲು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿತರಲಾಗಿತ್ತು, ಆದರೆ ಕೊರೋನಾ ಸೊಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಸಿಬ್ಬಂದಿಗೆ ಬಯೋಮೆಟ್ರಿಕ್ ಮೂಲಕ ಸೋಂಕು ಹರಡಬಹುದು ಎಂಬ ಕಾರಣಕ್ಕೆ ಹಾಜರಾತಿಗೆ ಬಳಸುವ ಬಯೋಮೆಟ್ರಿಕ್ ವ್ಯವಸ್ಥೆಯ ರದ್ದು ಪಡಿಸಲಾಗಿದ್ದು, ಇದು ಕಚೇರಿಗಳಿಗೆ ತಡವಾಗಿ ಬರುವವರಿಗೆ, ಸಂಜೆ ೫.೩೦ಕ್ಕೂ ಮುಂಚೆ ಹೋಗುವವರಿಗೆ ವರದಾನವಾಗಿದೆ.

ಕೊರೊನಾ ವೈರಸ್ ತಗುಲಿದೆ ಎಂಬ ಕಾರಣಕ್ಕೆ ಸರಕಾರಿ ಕಛೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ರದ್ದುಗೊಳಿಸಿದ ಪರಿಣಾಮ ಕೆಲ ಸರಕಾರಿ ನೌಕರರಲ್ಲಿ ಗೊಂದಲ ಉಂಟಾಗಿದೆ. ಇಲ್ಲಿ ಹೆಚ್ಚು ಹೊತ್ತು ಕೆಲಸ ಮಾಡಿದವರಿಗೂ, ಕೆಲಸ ಮಾಡದೆ ಹೊರಡುವವರಿಗೂ ಯಾವ ರೀತಿ ಹಾಜರಾತಿ ಗಣನೆಗೆ ತೆಗೆದುಕೊಳ್ಳತ್ತಾರೆ ಎಂಬುದು ಅನೇಕರನ್ನು ಕಾಡುತ್ತಿದೆ.

biometric1

ಸರಕಾರಿ ಕೆಲಸದಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ ಕೆಲ ಹಿರಿಯ ಸರಕಾರಿ ನೌಕರರು ಈ ಬಯೋಮೆಟ್ರಿಕ್‌ಗೆ ಡೊಂಟ್ ಕೇರ್, ಎಂದರೆ ಈಗ ತಾನೇ ಸರಕಾರಿ ಸೇವೆ ಸೇರಿದ ಯುವಜನತೆ ತಪ್ಪದೇ ಬಯೋಮೆಟ್ರಿಕ್ ಪದ್ಧತಿ ಅನುಸರಿಸುವುದನ್ನು ರೂಡಿಸಿಕೊಂಡಿದ್ದಾರೆ. ಹೌದು ಸರಕಾರಿ ಕಚೇರಿಯಲ್ಲಿ ಕೊರೋನಾ ವೈರಾಣು ತಗುಲಬಹುದು ಎಂಬ ಕಾರಣಕ್ಕೆ ಮುನ್ನೆಚ್ಚರಿಕೆ ವಹಿಸಿರುವ ರಾಜ್ಯ ಸರ್ಕಾರ, ಸರ್ಕಾರಿ ನೌಕರರ ಬಯೋಮೆಟ್ರಿಕ್ ಹಾಜರಾತಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದ್ದು, ಹಾಜರಾತಿಯಿಂದ ವಿನಾಯಿತಿ ನೀಡಲಾಗಿದೆ. ಈ ವಿನಾಯಿತಿ ಕೆಲ ನೌಕರರಿಗೂ ಅನುಕೂಲವಾದರೆ, ಮತ್ತೆ ಕೆಲವರಿಗೆ ಬಯೋಮೆಟ್ರಿಕ್ ಹಾಜರಾತಿ ಇಲ್ಲದೇ ಅನಾನುಕೂಲವೂ ಆಗಿದೆ.

ವಿಧಾನಸೌಧ, ವಿಕಾಸಸೌಧ, ಲೋಕಾಯುಕ್ತ, ಎಂ.ಎಸ್ ಬಿಲ್ಡಿಂಗ್ ಸೇರಿದಂತೆ ನಗರದ ಬಹುತೇಕ ಸರಕಾರಿ ಕಚೇರಿಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಪದ್ಧತಿ ಚಾಲ್ತಿಗೆ ಬಂದಿತ್ತು. ಇದ್ದರಿಂದ ನೌಕರರು ಯಾವಾಗ ಕಚೇರಿ ಬಂದು, ಯಾವಾಗ ಹೊರಡುತ್ತಾರೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕಿತ್ತು. ಬಯೋಮೆಟ್ರಿಕ್ ಬಂದ ನಂತರ ನೌಕರರು ತಡವಾಗಿ ಬರುವುದು, ಬೇಗ ಹೋಗುವುದನ್ನು ಪತ್ತೆಮಾಡಿ ಕ್ರಮ ಕೈಗೊಳ್ಳದಿತ್ತು. ಆದರೆ ಇಲ್ಲಿ ಬಯೋಮೆಟ್ರಿಕ್ ಹಾಜರಾತಿ ಇದ್ದರೂ ಪ್ರತಿ ವಿಭಾಗಗಳ ಮೇಲಾಧಿಕಾರಿಗಳು ಹಾಜರಾತಿ ಪುಸ್ತಕವನ್ನು ಇರಿಸಿದ್ದರು. ಈಗ ಮುಂದಿನ ಮಾ ೩೧ರವರೆಗೂ ಇದನ್ನೇ ಮುಂದುವರೆಸಲಾಗುವುದು. ಈ ಪುಸಕ್ತದಲ್ಲಿ ನೌಕರರು ಕಚೇರಿ ಕೆಲಸದ ನಿಮಿತ್ತ ಎಲ್ಲೇ ಹೋದರು ನಮೂದಿಸಿ ಹೋಗಬೇಕಿತ್ತು. ಹಾಗಾಗಿ ಪ್ರತಿಯೊಂದು ಕೆಲಸಕ್ಕೂ ಮೇಲಾಧಿಕಾರಿಗಳ ಗಮನಕ್ಕೆ ತಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದ ನಂತರವೇ ನೌಕರರು ಇತರೆಡೆ ತೆರಳವುದು ವಾಡಿಕೆ. ಆದರೆ ಹಾಜರಾತಿ ಪುಸ್ತಕಕ್ಕೆ ಸರಿಯಾದ ಸಮಯಕ್ಕೆ ಬಂದು ಸಹಿ ಮಾಡುತ್ತಾರೆ ಎಂಬುದನ್ನು ನಂಬುವುದು ಹೇಗೆ, ಹಾಗಾಗಿ ಬಯೋಮೆಟ್ರಿಕ್ ರದ್ದತಿಯಿಂದ ಅಂತಹ ಸಮಸ್ಯೆ ಕಂಡುಬರದಿದ್ದರೂ, ಕೆಲ ಸೋಮಾರಿ ನೌಕರರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ.
ಮಾ ೩೧ವರೆಗೂ ಹಾಜರಾತಿ ವಿನಾಯತಿ
ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ನೌಕರರು ಬಯೋಮೆಟ್ರಿಕ್ ನಲ್ಲಿ ಹಾಜರಾತಿ ನಮೂದಿಸುತ್ತಿರುವ ಹಿನ್ನಲೆಯಲ್ಲಿ ಎಲ್ಲಾ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯದ ದೃಷ್ಠಿಯಿಂದ ಮಾ ೩೧ರವರೆಗೆ ಬಯೋಮೆಟ್ರಿಕ್ ಹಾಜರಾತಿ ನಮೂದಿಸುವಲ್ಲಿ ವಿನಾಯಿತಿ ನೀಡಲಾಗಿದೆ. ಅಧಿಕಾರಿ, ಸಿಬ್ಬಂದಿಗಳು ಹಾಜರಾತಿ ಪುಸ್ತಕದಲ್ಲಿ ಹಾಜರಾತಿಯನ್ನು ನಿರ್ವಹಿಸುವಂತೆ ಹಾಗೂ ಆಯಾ ಇಲಾಖೆಯ ನೋಡಲ್ ಅಧಿಕಾರಿಗಳು ಈ ಕುರಿತು ಅಧಿಕಾರಿ, ಸಿಬ್ಬಂದಿಗಳ ಹಾಜರಾತಿಯನ್ನು ಪರಿಶೀಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಮನೀಶ್ ಮೌನ್ಸಿಲ್ ಆದೇಶ ಹೊರಡಿಸಿದ್ದಾರೆ.

ಇದೇ ಮೊದಲ ಬಾರಿ ರದ್ದು
ಸರಕಾರಿ ಕೆಲಸದ ನನ್ನ ೧೨ ವರ್ಷದ ಸರ್ವಿಸ್‌ನಲ್ಲಿ ಇದೇ ಮೊದಲ ಬಾರಿಗೆ ಬಯೋಮೆಟ್ರಿಕನ್ನು ರದ್ದು ಮಾಡಲಾಗಿದೆ. ಕೊರೋನಾ ವೈರಾಣು ಹರಡುವುದನ್ನು ತಡೆಯಲು ಹಾಗೂ ನೌಕರರ ಆರೋಗ್ಯದ ದೃಷ್ಟಿಯಿಂದ ಸರಕಾರ ಈ ಕ್ರಮ ಕೈಗೊಂಡಿದೆ. ನಾವು ನಿನ್ನೆ ಸಂಜೆವರೆಗೂ ಬಯೋಮೆಟ್ರಿಕ್ ಹಾಜರಾತಿಯನ್ನು ಮಾಡಿದ್ದೇವೆ. ಇಂದು ಕೂಡ ಕೆಲವರ ಬಯೋಮೆಟ್ರಿಕ್ ಮಾಡುತ್ತಿದ್ದಾರೆ. ಅಧಿವೇಶನ ನಡೆಯುತ್ತಿದ್ದ ಕಾರಣ ಇಷ್ಟು ದಿನ ಸರಕಾರಿ ನೌಕರರು ಪ್ರತಿದಿನ ಬೇಗ ಬಂದು, ಸಂಜೆ ತಡವಾಗಿಯೇ ಮನೆಗೆ ತೆರಳುತ್ತಿದ್ದರು. ಹಾಗಾಗಿ ಬಯೋಮೆಟ್ರಿಕ್ ರದ್ದಿತಿಯಿಂದ ಹೆಚ್ಚಿನ ನೌಕರರು ತಮ್ಮ ಕೆಲಸದಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೊಂಚ ನಿರಾಳರಾಗಬಹುದು.

p1

ಸಿದ್ದರಾಜು. ಬಿ.ಎಸ್.
ಸಹಾಯಕರು
ಪಶುಸಂಗೋಪಾನ ಮತ್ತು ಮೀನುಗಾರಿಕೆ ಇಲಾಖೆ

Leave a Comment