ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ

ಧಾರವಾಡ,ಜೂ11- ಕರ್ನಾಟಕ ಸರಕಾರ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಬೇಟಿ ನೀಡಿ, ಪರಿಶೀಲಿಸಿದರು.
ಆಲೂರು ವೆಂಕಟರಾವ್ ವೃತ್ತದ ಮಹಿಳಾ ಶಿಕ್ಷಕಿಯರ  ತರಬೇತಿ ಶಾಲೆ ಆವರಣದಲ್ಲಿರುವ ಸರಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಆರಂಬಿಸಲಾಗಿರುವ ಆಂಗ್ಲ ಮಾದ್ಯಮ ಶಾಲೆಗೆ ಬೇಟಿ ನೀಡಿ, ಒಂದನೇ ವರ್ಗಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರ ಪಾಠ, ಪಠ್ಯ ಹಾಗೂ ದಿನಚರಿ ಕುರಿತು ಮಾತನಾಡಿಸಿದರು. ಈ ಸಂದರ್ಭದಲ್ಲಿ ಶಾಲಾ ಪ್ರಧಾನ ಗುರುಮಾತೆ ಶ್ರೀಮತಿ ಎಸ್.ಎಂ.ಖಾನ ಹಾಗೂ ಸಹ ಶಿಕ್ಷಕಿಯರಾದ ಬಿ.ಎಸ್.ಯರಗಟ್ಟಿ ಮತ್ತು ಕ್ಯೂ.ಎ.ತರಗಾರ ಮಾಹಿತಿ ನೀಡಿದರು.
ನಂತರ ಕಮಾಲಪೂರದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆ ನಂ-04ರಲ್ಲಿ ಆರಂಭವಾಗಿರುವ ಆಂಗ್ಲ ಮಾಧ್ಯಮ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ ಮತ್ತು  ಪಾಲಕರಿಂದ ಆಂಗ್ಲ ಮಾಧ್ಯಮ ಶಾಲೆಯ ಕುರಿತು ಮಾಹಿತಿ ಪಡೆದರು. ಪ್ರಧಾನ ಗುರುಮಾತೆ ಎಸ್.ಡಿ.ಇಳಕಲ್ಲ ಹಾಗೂ ಸಹ ಶಿಕ್ಷಕಿ ಆರ್.ಎಸ್.ಸಕ್ಕರನಾಯ್ಕರ ವಿದ್ಯಾರ್ಥಿಗಳ ಪ್ರವೇಶ, ದಾಖಲಾತಿ ಕುರಿತು ವಿವರ ನೀಡಿದರು.
ಪರಿಶೀಲನೆ ನಂತರ, ಜಿಲ್ಲಾಧಿಕಾರಿಗಳು ಆಂಗ್ಲ ಮಾಧ್ಯಮಕ್ಕೆ ಒಂದನೆ ವರ್ಗಕ್ಕೆ ಪ್ರವೇಶ ಪಡೆದ ಮಕ್ಕಳಿಗೆ ಪಠ್ಯ ಪುಸ್ತಕ ಬರುವವರೆಗೆ ಬೇರೆ ಪುಸ್ತಕಗಳನ್ನು ಬಳಸಿ ಸಾಮಾನ್ಯ ಮಾಹಿತಿ ನೀಡಿ ಮತ್ತು ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆಯುವ ಮಕ್ಕಳ ಪಠ್ಯ ಪುಸ್ತಕವು ಕನ್ನಡ ಮತ್ತು ಆಂಗ್ಲ ಭಾಷೆ ಸೇರಿ ದ್ವಿಭಾಷೆಯಲ್ಲಿ ಇರುತ್ತದೆ. ಇದು ಪಾಲಕರು ಸಹ ಮಕ್ಕಳಿಗೆ ಓದಲು, ಬರೆಯಲು ನೆರವಾಗುತ್ತದೆ. ಈ ಕುರಿತು ಪಾಲಕರಿಗೆ  ತಿಳುವಳಿಕೆ ನೀಡಬೇಕು ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು.
ನಂತರ ಎಸ್.ಡಿ.ಎಂ.ಸಿ. ಸದಸ್ಯರನ್ನು ಹಾಗೂ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಜಿಲ್ಲೆಯಲ್ಲಿ ಒಟ್ಟು 28 ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ. ಪ್ರತಿ ವಿಧಾನಸಭೆಗೆ ನಾಲ್ಕು ಶಾಲೆಗಳಿಗೆ ಮಂಜೂರಾತಿ ನೀಡಲಾಗಿದೆ. ಶಾಲಾ ಮೂಲಸೌಕರ್ಯ ಪರಿಗಣಿಸಿ 1ನೇ ವರ್ಗಕ್ಕೆ ಕನಿಷ್ಠ 15 ರಿಂದ ಗರಿಷ್ಠ 52 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ಇದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ ಆಗುತ್ತಿವೆ. ಒಟ್ಟು 840 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಪಡೆಯಲು ಪ್ರಸಕ್ತ ಸಾಲಿಗೆ ಅವಕಾಶವಿದೆ. ಒಟ್ಟು 48 ಜನ ಇಂಗ್ಲಿಷ್ ಸಹಶಿಕ್ಷಕ, ಶಿಕ್ಷಕಿಯರನ್ನು ಡೈಯಟ್‍ದಲ್ಲಿ ತರಬೇತಿ ಕೊಡುವ ಮೂಲಕ ಇಂಗ್ಲಿಷ್ ಮಾದ್ಯಮ ಶಾಲೆಗಳಿಗೆ ಶಿಕ್ಷಕರನ್ನು ಸಿದ್ಧಗೊಳಿಸಲಾಗಿದೆ ಎಂದು ಅವರು ಹೇಳಿದರು.
1ನೇ ವರ್ಗಕ್ಕೆ ವಿದ್ಯಾರ್ಥಿಗಳ ಕಲಿಕೆಗಾಗಿ ಸರಳ ವಿಷಯವಿರುವ ಕನ್ನಡ ಅಥವಾ ಉರ್ದು(ಉರ್ದು  ಶಾಲೆಗಳಲ್ಲಿ ಆರಂಭವಾಗಿರುವ ಇಂಗ್ಲಿಷ ಮಾದ್ಯಮ ವಿದ್ಯಾರ್ಥಿಗಳಿಗಾಗಿ), ಪರಿಸರ ಅಧ್ಯಯನ, ಸರಳ ಗಣಿತ ಮತ್ತು ಇಂಗ್ಲಿಷ ಪಠ್ಯಪುಸ್ತಕಗಳನ್ನು ನೀಡಲಾಗುತ್ತಿದೆ. ಒಟ್ಟು 4 ಪಠ್ಯಗಳಿದ್ದು, ಭೋದಿಸಲು ಸಮರ್ಥ ಶಿಕ್ಷಕರನ್ನು ನೇಮಿಸಲಾಗಿದೆ.
ನೂತನ ಆಂಗ್ಲ ಮಾಧ್ಯಮ ಶಾಲೆಗಳನ್ನು ಈಗಿರುವ ಪ್ರಾಥಮಿಕ ಶಾಲೆಗಳಲ್ಲಿಯೇ ಆರಂಭಿಸಲಾಗಿದೆ. ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ. ಆಂಗ್ಲ ಭಾಷೆಯನ್ನು ಕಲಿಯಲು ಆಸಕ್ತಿಯಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರಕಾರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದೆ. ಎಲ್ಲ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಬೂಟು, ಸಾಕ್ಸ್ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೆರಿ ಮಾತನಾಡಿ, ಸರಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸಾರ್ವಜನಿಕರಿಂದ  ಉತ್ತಮ ಸ್ಪಂದನೆ ಸಿಗುತ್ತಿದ್ದು, ಪಾಲಕರು ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸುತ್ತಿದ್ದಾರೆ ಎಂದು ಹೇಳಿದರು.
ಮತ್ತು ಧಾರವಾಡ ಜಿಲ್ಲೆಯಲ್ಲಿ 8  ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಸಹ ಆರಂಭಿಸಲಾಗಿದೆ. ಕರ್ನಾಟಕ ಪಬ್ಲಿಕ ಶಾಲೆಗಳಲ್ಲಿ ಎಲ್.ಕೆ.ಜಿ ಯಿಂದ ಪಿಯುಸಿ ವರೆಗೆ ಒಂದೆ ಆವರಣದಲ್ಲಿ ತರಗತಿಗಳು ನಡೆಯುತ್ತವೆ. ಇಲ್ಲಿನ ಎಲ್ಲ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸಾಮಾನ್ಯ ವೆಳಾಪಟ್ಟಿ ಮಾಡಲಾಗಿದೆ. ಎಲ್ಲ ಹಂತದ ಶಿಕ್ಷಕರ ಅನುಭವ, ಜ್ಞಾನವು ಎಲ್ಲ ವರ್ಗದ ಮಕ್ಕಳಿಗೂ ದೊರಕಬೇಕೆಂದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ.ಖಾಜಿ, ಉಪನಿದೇರ್ಶಕ ಕಚೇರಿ ಅಧಿಕಾರಿ  ಶಿವಲಿಲಾ ಕಳಸನ್ನವರ ಉಪಸ್ಥಿತರಿದ್ದರು.
2019-20ನೇ ಸಾಲಿಗೆ ಜಿಲ್ಲೆಯಲ್ಲಿ ಆರಂಭಿಸಲಾದ ಆಂಗ್ಲ ಮಾಧ್ಯಮ ಶಾಲೆಗಳ ವಿವರ:
ಧಾರವಾಡದ ಕಮಾಲಾಪುರದಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕರಡಿಗುಡ್ಡದ ಗ್ರಾಮದ ಕರ್ನಾಟಕ ಪಬ್ಲಿಕ ಸ್ಕೂಲ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಲೋಕೂರ ( ಆರ್. ಎಂ. ಎಸ್. ಎ) , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುಬಗಟ್ಟಿ, ಸರಕಾರಿ ಹಿರಿಯ ಮಾದರಿ  ಪ್ರಾಥಮಿಕ ಶಾಲೆ ನವಲೂರ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಟಿಸಿಡಬ್ಲ್ಯೂ ಧಾರವಾಡ ಮತ್ತು ಹುಬ್ಬಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಂದನಗರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನವನಗರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಗಶಟ್ಟಿಕೊಪ್ಪ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈರಿದೇವರಕೊಪ್ಪ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಗೋಪನಕೊಪ್ಪ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಣಕಲ್ಲ, ಸರಕಾರಿ ಉರ್ದು ಬಾಲಕೀಯರ ಪ್ರಾಥಮಿಕ ಶಾಲೆ ನಂ 3 ಕಸಬಾಪೇಟ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇಕಾರನಗರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 10 ಬಿಡನಾಳ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಎಸ್.ಎಂ ಕೃಷ್ಣಾನಗರ, ಕಲಘಟಗಿ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ ಬಮ್ಮಿಗಟ್ಟಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀರವಳ್ಳಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೆಲವಂತರ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರುವಿನಕೊಪ್ಪ, ಕುಂದಗೊಳ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ ರಾಯನಾಳ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುರಡಿಕೇರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದಗೋಳ, ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಗುಡಗೇರಿ, ನವಲಗುಂದ ತಾಲೂಕಿನ ಸರಕಾರಿ ಉರ್ದು ಪ್ರಾಥಮಿಕ ಶಾಲೆ ನವಲಗುಂದ, ಕರ್ನಾಟಕ ಪಬ್ಲಿಕ್ ಸ್ಕೂಲ ಶೆಲವಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ 2 ಅಣ್ಣಿಗೇರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮರಗೋಳ.
ಕರ್ನಾಟಕ ಪಬ್ಲಿಕ್ ಶಾಲೆಗಳ ವಿವರ: ಧಾರವಾಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಸರಕಾರಿ ಪ್ರೌಡಶಾಲೆ-ಸರಕಾರಿ ಪದವಿ ಪೂರ್ವ ಕಾಲೇಜು ಕರಡಿಗುಡ್ಡ. ಹುಬ್ಬಳ್ಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಸರಕಾರಿ ಪ್ರೌಡಶಾಲೆ-ಸರಕಾರಿ ಪದವಿ ಪೂರ್ವ ಕಾಲೇಜು ರಾಯನಾಳ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಸರಕಾರಿ ಪ್ರೌಡಶಾಲೆ-ಸರಕಾರಿ ಪದವಿ ಪೂರ್ವ ಕಾಲೇಜು ಗೋಪನಕೊಪ್ಪ, ಸರಕಾರಿ ಪ್ರಾಥಮಿಕ ಶಾಲೆ-ಪ್ರೌಡಶಾಲೆ-ಸರಕಾರಿ ಪದವಿ ಪೂರ್ವ ಕಾಲೇಜು ನವನಗರ. ಹುಬ್ಬಳ್ಳಿ ಶಹರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಸರಕಾರಿ ಪ್ರೌಢಶಾಲೆ ಬಿಡನಾಳ.
ಕಲಘಟಗಿಯ ಸರಕಾರಿ ಹಿರಿಯ ಪ್ರಾಥಮಿಶಾಲೆ-ಸರಕಾರಿ ಪ್ರೌಡಶಾಲೆ-ಸರಕಾರಿ ಪದವಿ ಪೂರ್ವ ಕಾಲೇಜು ಬಮ್ಮಿಗಟ್ಟಿ. ಕುಂದಗೋಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಸರಕಾರಿ ಪ್ರೌಡಶಾಲೆ-ಸರಕಾರಿ ಪದವಿ ಪೂರ್ವ ಕಾಲೇಜು ಗುಡಗೇರಿ. ನವಲಗುಂದದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ-ಸರಕಾರಿ ಪ್ರೌಡಶಾಲೆ-ಸರಕಾರಿ ಪದವಿ ಪೂರ್ವ ಕಾಲೇಜು ಶಲವಡಿ.

Leave a Comment