ಸಮೃದ್ಧಿ ಮುಂಗಾರಿಗೆ : ಶ್ರೀ ಲಕ್ಷ್ಮಮ್ಮ ದೇವಿಗೆ ವಿಶೇಷ ಪೂಜಾ, ಹೋಮ

ರಾಯಚೂರು.ಜೂ.14- ಮುಂಗಾರು ಉತ್ತಮ ಮಳೆಗೆ ಮುನ್ನೂರುಕಾಪು ಸಮಾಜ ಇಂದು ವಿಶೇಷ ಪೂಜಾ ಮತ್ತು ಹೋಮ ಕಾರ್ಯಕ್ರಮ ನೆರವೇರಿಸಿತು.
ನಗರದ ಮಕ್ತಾಲಪೇಟೆಯ ಮಾತಾ ಲಕ್ಷ್ಮಮ್ಮ ದೇವಿಯ ಮಂದಿರದಲ್ಲಿ ಈ ಪೂಜಾ ಕಾರ್ಯಕ್ರಮ ನಡೆಸಲಾಯಿತು. ಹೋಮ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎ.ಪಾಪಾರೆಡ್ಡಿ ದಂಪತಿಗಳು ಹಾಗೂ ಸಮಾಜದ ಜಿಲ್ಲಾಧ್ಯಕ್ಷ ಬೆಲ್ಲಂ ನರಸರೆಡ್ಡಿ ದಂಪತಿಗಳು ನಿರ್ವಹಿಸಿದರು. ಕಳೆದ ವರ್ಷದ ಭೀಕರ ಬರದಿಂದ ತೀವ್ರ ತತ್ತರಿಸಿದ ಕೃಷಿಕರಿಗೆ ಮುಂದಿನ ಮುಂಗಾರು ಸುಗಮವಾಗಿ ನಡೆಯಲೆಂಬ ಹಾರೈಕೆಯೊಂದಿಗೆ ಹೋಮ ಕಾರ್ಯಕ್ರಮ ನಿರ್ವಹಿಸಲಾಯಿತು.
ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ಯ ಇಂದು ಈ ವಿಶೇಷ ಹೋಮ ಕಾರ್ಯಕ್ರಮ ನಡೆಸಲಾಯಿತು. ಮುಂಜಾನೆ 8 ಗಂಟೆಗೆ ಮಾತಾ ಲಕ್ಷ್ಮಮ್ಮ ದೇವಿಗೆ ವಿಶೇಷ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂತರ ಮಳೆಗಾಗಿ ಹೋಮ ಕಾರ್ಯಕ್ರಮ ನಡೆಯಿತು. ಮಹಾ ಮಂಗಳಾರತಿ ಮುಖಾಂತರ ಮಾತಾ ಲಕ್ಷ್ಮಮ್ಮ ದೇವಿಗೆ ಉತ್ತಮ ಮಳೆಗಾಗಿ ಪ್ರಾರ್ಥಿಸಿದರು.
ಜೂ.16 ರಿಂದ ಮೂರು ದಿನಗಳ ಕಾಲ ಮುನ್ನೂರುಕಾಪು ಸಮಾಜದಿಂದ ಆಯೋಜಿತ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪೂರಕವಾಗಿ ಇಂದು ಎಲ್ಲಾ ವಿಘ್ನ ನಿವಾರಣೆ ಮತ್ತು ಸಮೃದ್ಧಿ ಮುಂಗಾರು ಹಂಗಾಮಿಗೆ ಹಾರೈಸಿ, ಪೂಜಾ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಸಮಾಜದ ಎಂ.ನಾಗೀರೆಡ್ಡಿ, ರಾಳ್ಳ ತಿಮ್ಮಾರೆಡ್ಡಿ, ಬಿ.ಆಂಜಿನೇಯ್ಯ, ಜಿ.ಬಸವರಾಜ ರೆಡ್ಡಿ, ಎಸ್. ವೆಂಕಟರೆಡ್ಡಿ, ಜಿ.ಶೇಖರ ರೆಡ್ಡಿ, ಪುಂಡ್ಲಾ ನರಸರೆಡ್ಡಿ, ನಿಂಬೇಕಾಯಿ ಶೇಖರ ರೆಡ್ಡಿ, ಕೆ.ನರಸಿಂಹಲು, ಪಿ..ನರಸರೆಡ್ಡಿ, ಬಂಗಿ ನರಸರೆಡ್ಡಿ, ದೊಡ್ಡ ಮಲ್ಲೇಶಪ್ಪ, ಗುಡ್ಸಿ ಪ್ರತಾಪ ರೆಡ್ಡಿ, ಬಾಯಿಕಾಡ ಶೇಖರ ರೆಡ್ಡಿ, ನಾಯಿನ ಸುದರ್ಶನ ರೆಡ್ಡಿ, ಮಹೇಂದ್ರ ರೆಡ್ಡಿ, ವೆಂಕಟರೆಡ್ಡಿ, ನಾರಾಯಣ ರೆಡ್ಡಿ ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment