ಸಮಾಜ ಸೇವೆಯತ್ತ ಇತಿ ಒಲವು

ಈಗಾಗಲೇ ಕನ್ನಡ ಕಲಿತು, ಕನ್ನಡ ಮಾತನಾಡುತ್ತ ರಾಜಸ್ಥಾನದ ಮೂಲದ ಇತಿ ಆಚಾರ್ಯ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿರುವ ನಟಿ. ಸಾಮಾಜಿಕ ಕಾಳಜಿ ಹೊಂದಿರುವ ಈ ಕವಚ ಸುಂದರಿ ಕಡಿಮೆ ಅವಧಿಯಲ್ಲಿ ಕನ್ನಡ ಕಲಿತು ಈಗಾಗಲೇ ಕನ್ನಡಿಗರ ಮನಗೆದ್ದಿದ್ದಾರೆ. ಇದರೊಂದಿಗೆ ಸಮಾಜಸೇವೆ ಮಾಡುವ ಗುರಿಹೊಂದಿದ್ದಾರೆ.

ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ನಟಿ ಬೆಂಗಳೂರು ಫ್ಯಾಷನ್ ವೀಕ್ ಆಯೋಜಿಸಿದ್ದ ಜೈಲಿನ ಕೈದಿಗಳು ತಯಾರಿಸಿದ ‘ಪೆರೋಲ್’ ವಿನ್ಯಾಸದ ಬಟ್ಟೆಗಳ ಫ್ಯಾಷನ್ ಶೋನಲ್ಲಿ ೨೦೧೬ರ ಮಿಸ್ ಸೌತ್ ಇಂಡಿಯಾ ಹಾಗೂ ನಟಿ ಇತಿ ಶೋ ಸ್ಟಾಪರ್ ಆಗಿ ಆಯ್ಕೆಯಾಗಿ ಗಮನ ಸೆಳೆದರು. ಅಷ್ಟೆ ಅಲ್ಲ ಟೈಮ್ಸ್ ಹಾಸ್ಪಿಟಲಿ ಐಕಾನ್‌ನಲ್ಲಿಯೂ ಆಕರ್ಷಿಸಿದ್ದಾರೆ.

ಕವಚ ಚಿತ್ರದಲ್ಲಿ ಉತ್ತಮ ನಟನೆ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಈ ಚೆಲುವೆ ಇದೀಗ ಸಮಾಜ ಸೇವೆ ಮಾಡುವ ತವಕ ಹೊಂದಿದ್ದಾರೆ. ರಾಜಸ್ಥಾನದಲ್ಲಿ ಹುಟ್ಟಿ, ಪಂಜಾಬ್‌ನಲ್ಲಿಯೂ ಕೆಲಕಾಲ ವಾಸಮಾಡಿ ನಂತರ ಬೆಂಗಳೂರಿಗೆ ಬಂದು ಫ್ಯಾಷನ್ ಡಿಸೈನ್ ಕೋರ್ಸ್ ಮುಗಿಸಿದ ಇವರಿಗೆ ಕಾಲೇಜು ದಿನಗಳಲ್ಲಿಯೇ ಮಾಡೆಲಿಂಗ್‌ನತ್ತ ಆಸಕ್ತಿ ಬೆಳೆದಿತ್ತು. ಜಾಹೀರಾತು ಆಡಿಷನ್ ಒಂದರಲ್ಲಿ ಪಾಲ್ಗೊಳ್ಳಲು ಬಂದಿದ್ದ ಇತಿ, ಕನ್ನಡದ ನಿರ್ದೇಶಕರೊಬ್ಬರ ಕಣ್ಣಿಗೆ ಬಿದ್ದು ಅಭಿನಯದತ್ತ ಮುಖಮಾಡಿದರು. ಕಳೆದ ನಾಲ್ಕೈದು ವರ್ಷಗಳಿಂದ ನಟನೆಯಲ್ಲಿ ತೊಡಗಿಕೊಂಡಿರುವ ಇವರು, ತೆಲುಗು, ಮಲಯಾಳಂ, ಹಿಂದಿ, ತಮಿಳು ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇಷ್ಟೆಲ್ಲ ಆಗಿಯೂ ‘ಸ್ಯಾಂಡಲ್‌ವುಡ್ ನನ್ನ ಫೆವರೆಟ್’ ಎನ್ನುತ್ತಾರೆ ಅವರು. ಅಲ್ಲದೇ ತಮ್ಮ ಸಮಾಜಸೇವೆ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

*ನಟನೆಯೊಂದಿಗೆ ಸಮಾಜಸೇವೆ ಮೇಲೆ ಯಾಕೆ ಆಸಕ್ತಿ ಬಂತು?
ಮೊದಲಿನಿಂದಲೂ ನನಗೆ ದೌಜನ್ಯಗೊಳ್ಳಗಾದ ಮಹಿಳೆಯರ ಪರ ಧ್ವನಿ ಎತ್ತಬೇಕೆಂಬ ಹೆಬ್ಬಯಿಕೆ ಇದೆ. ಮೊನ್ನೆ ಸಿಲಿಕಾನ್ ಸಿಟಿಯಲ್ಲಿ ನಾನು ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಎಂದಿನಂತೆ ಸಂಚಾರ ದಟ್ಟಣೆ ಉಂಟಾಗಿತ್ತು. ಆಗ ಸ್ಕೂಟಿನಲ್ಲಿ ಬಂದ ಮಹಿಳೆಗೆ ಟ್ಯಾಕ್ಸಿ ಚಾಲಕನೊಬ್ಬ ಡಿಕ್ಕಿ ಹೊಡೆದು ಆಕೆ ಮೇಲೆಯೇ ಜಗಳಕ್ಕೆ ಹೋದ ಕೊಂಚ ಕೂಡ ಮನಾವೀಯತೆ ತೋರದೇ ಆಕೆ ವಿರುದ್ಧ ಗಲಾಟೆ ಮಾಡಲು ಶುರುಮಾಡುಬಿಟ್ಟ ಬಾಕಿ ಜನ ತಮಾಷೆ ನೋಡುತ್ತ ನಿಂತಿದ್ದರು, ಆದರೆ ವಿದೇಶಗಳಲ್ಲಿ ಇಂತಹ ಪರಿಸ್ಥಿತಿ ಬರುವುದಿಲ್ಲ ಏಕೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ ಇತಿ. ಇನ್ನು ಮಕ್ಕಳ ಮೇಲಿನ ಶೋಷಣೆ ಬಗ್ಗೆ ಹೇಳುವ ಸ್ಕೀಮ್ ಎಂಬ ಕಿರುಚಿತ್ರದಲ್ಲೂ ಇತಿ ಬಣ್ಣ ಹಚ್ಚಿ ಜಾಗೃತಿ ಮೂಡಿಸಿರುವುದು ವಿಶೇಷ. ಈ ಕಿರುಚಿತ್ರ ಜೈಪುರ ಅಂತಾರಾಷ್ಟ್ರೀಯ ಮಕ್ಕಳ ಸಿನಿಮೋತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರ ಎಂಬ ಪ್ರಶಸ್ತಿಗೂ ಪಾತ್ರವಾಗಿತ್ತು.

* ಜೈಲಿನ ಕೈದಿಗಳು ತಯಾರಿಸಿದ ಪೆರೋಲ್ ವಿನ್ಯಾಸದ ಬಗ್ಗೆ ಹೇಳಿ?
ಕೈದಿಗಳಿಗೂ ಒಂದು ಜೀವನ ಇದೆ. ಅವರು ಕೂಡ ನಮ್ಮೆಲ್ಲಾರಂತೆ ಜೀವನ ನಡೆಸಲು ಸಹಕರಿಸಿಬೇಕಿದೆ. ತಪ್ಪು ಮಾಡಿ ಒಂದು ಬಾರಿ ಜೈಲಿಗೆ ಹೋಗಿ ಬಂದ ಮೇಲೆ ಅವರು ಕೂಡ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಶಕ್ತರು ಎಂಬುದನ್ನು ಇದು ತೋರಿಸಿದೆ.ಬೆಂಗಳೂರು ವಸ್ತ್ರ ವಿನ್ಯಾಸಗಾರ ಅಭಿಷೇಕ್ ದತ್ತಾ ಅವರ ‘ಪೆರೋಲ್ ’ ವಸ್ತ್ರಗಳ ಫ್ಯಾಷನ್ ಶೋನಲ್ಲಿ ನಾನು ಶೋ ಸ್ಟಾಪರ್ ಆಗಿ ಕಾಣಿಸಿಕೊಂಡಾಗ ಉತ್ತಮ ಪ್ರತಿಕ್ರಿಯೆ ಉಂಟಾಗಿತ್ತು.ಕೈದಿಗಳು ತಯಾರಿಸಿದ ಪೆರೋಲ್ ಬಟ್ಟೆಗಳು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಶೈಲಿಯ ಮಿಶ್ರಣವಾಗಿದೆ. ಇದನ್ನು ಫಾರ್ಮಲ್ ಬಟ್ಟೆಗಳು, ಪ್ರಿಂಟ್ ಬಟ್ಟೆಗಳು, ಡೆನಿಮ್ ಸಾಂಪ್ರದಾಯಿಕ ಬಟ್ಟೆಗಳು ಹಾಗೂ ಫ್ಯೂಷನ್ ಬಟ್ಟೆಗಳು ಎಂದು ವಿಂಗಡಿಸಲಾಗಿದೆ. ನೀಲಿ ಲೆನಿನ್ ಶಾರ್ಟ್ಸ್ ಹಾಗೂ ಶಿಬೋರಿ ಜಾಕೆಟ್ ನಲ್ಲಿ ಮಿಂಚಿದಾಗ ಸ್ಟೈಲ್ ಎಂದರೆ ಮಾತನಾಡದೆ ನೀವು ಯಾರೆಂದು ಬಿಂಬಿಸುವುದಾಗಿದೆ. ಇದಕ್ಕೆ ಅಭಿಷೇಕ್ ಅವರ ‘ಪೆರೋಲ್ ’ ಅತ್ಯುತ್ತಮ ಉದಾಹರಣೆಯಾಗಿದೆ. ಈ ಮೂಲಕ ಕೈದಿಗಳಿಗೆ ಅವರ ಕ್ರಿಯಾತ್ಮಕತೆ ಹಾಗೂ ಸ್ಟೈಲ್ ಅನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತಿದೆ. ಈ ವಸ್ತ್ರ ಧರಿಸಲು ಅವಕಾಶ ಸಿಕ್ಕರುವುದು ಸಂತಸ ತಂದಿದೆ ಎಂದಿದ್ದಾರೆ.

*ನಿಮ್ಮ ಸತ್ಯವತಿ ಚಿತ್ರದ ಬಗ್ಗೆ ಹೇಳಿ?
೨೦೧೫ರಲ್ಲಿ ನನ್ನ ಪ್ರಥಮ ಹಿಂದಿ ಚಿತ್ರ ಸತ್ಯವತಿ. ಈ ಚಿತ್ರ ಮಹಿಳೆಯರ ಮೇಲಿನ ಅತ್ಯಾಚಾರ ಕುರಿತು ಕಥೆ ಸಾಗುತ್ತದೆ. ಅದು ವಾಷಿಂಗ್ಟನ್ ಡಿಸಿ ಕೇಂದ್ರ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದ ಫಿಲ್ಮ್ ಸೊಸೈಟಿಯಲ್ಲಿ ಪ್ರದರ್ಶನಗೊಂಡಿತ್ತು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಮೊದಲ ಆದ್ಯತೆಗಳಲ್ಲಿ ಒಂದು ಎಂದು ಹೇಳುತ್ತಾರೆ ಇತಿ.

*ಶಿವಣ್ಣ ಬಗ್ಗೆ ಏನು ಹೇಳ್ತೀರಾ?
ಕವಚ ಚಿತ್ರದಲ್ಲಿ ಮೊದಲ ದಿನವೇ ಶಿವರಾಜ್‌ಕುಮಾರ್ ಅವರ ಜತೆ ನಟಿಸಬೇಕಾಗಿದ್ದರಿಂದ ಭಯವಾಗಿಬಿಟ್ಟಿತ್ತು. ಅವರು ಸೂಪರ್‌ಸ್ಟಾರ್. ನಟನೆಯಲ್ಲಿ ಇನ್ನು ಹೆಜ್ಜೆ ಇಡುತ್ತಿದ್ದೇನೆ. ಅವರ ಎದುರು ನಾನು ಏನೇನೂ ಅಲ್ಲ. ಹೇಗೆ ವರ್ತಿಸುತ್ತಾರೋ ಏನೋ ಎಂದು ಮನಸಲ್ಲಿಯೇ ಚಡಪಡಿಸುತ್ತಿದ್ದೆ. ಆದರೆ ನನ್ನ ಭಯವನ್ನೆಲ್ಲ ದೂರಗೊಳಿಸುವಂತೆ ಶಿವರಾಜ್‌ಕುಮಾರ್ ತುಂಬ ಅಕ್ಕರೆಯಿಂದ ಮಾತನಾಡಿಸಿದರು. ನಟನೆಯ ಹಲವು ಟಿಪ್ಸ್ ಕೊಟ್ಟರು. ಮತ್ತೊಂದು ದೃಶ್ಯದಲ್ಲಿ ನಾನು ಡಾನ್ಸ್ ಸ್ಟೆಪ್ ಬರದೆ ಒದ್ದಾಡುತ್ತಿದ್ದಾಗ ಹೆಣ್ಣಿನ ಡಾನ್ಸ್ ಸ್ಟೆಪ್ ಕೂಡ ಅವರೇ ಹೇಳಿಕೊಟ್ಟರು. ಅವರು ಸೂಪರ್‌ಸ್ಟಾರ್ ಮಾತ್ರವಲ್ಲ, ಉತ್ತಮ ಮನಸ್ಸುಳ್ಳ ದೊಡ್ಡ ವ್ಯಕ್ತಿ ಕೂಡ ಎಂದು ಹೆಮ್ಮೆಯಿಂದ ಹೇಳುತ್ತಾರೆ ಇತಿ.

*ಚಂದನವನದಲ್ಲಿ ಇಷ್ಟವಾಗುವ ನಟ ಯಾರು?
ಮೊದಲಿಗೆ ಶಿವಣ್ಣ ಮಾತ್ರ, ಅನಂತರ ರಾಕಿಂಗ್ ಸ್ಟಾರ್ ಯಶ್ ಮೇಲೆ ಕ್ರಷ್ ಆಗಿದೆ. ಕೆಜಿಎಫ್ ಬಿಡುಗಡೆ ನಂತರ ಯಶ್ ಇನ್ನಷ್ಟು ಇಷ್ಟವಾಗಿದ್ದಾರೆ. ಅಷ್ಟೆ ಅಲ್ಲ ನಾನು ಕುಟುಂಬದವರು ಕೂಡ ಯಶ್‌ಗೆ ಅಭಿಯಾನಿಗಳಾಗಿದ್ದಾರೆ. ವಿಶ್ವದ್ಯಾದಂತ ಕೆಜಿಎಫ್ ಮಾಡಿದ್ದ ಸದ್ದು ಕಂಡ ನನ್ನ ಕುಟುಂಬ ಇದೀಗ ನನ್ನ ಮಗಳು ಸ್ಯಾಂಡಲ್‌ವುಡ್ ನಟಿ ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಕೆಜಿಎಫ್ ರೀತಿಯ ಬಹುಭಾಷೆ, ಗುಣಮಟ್ಟದ ಸಿನಿಮಾಗಳಲ್ಲಿ ನಟಿಸಬೇಕು ಎನ್ನುವುದು ಅವರ ಕನಸೂ ಹೌದು. ಇದರ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳಲ್ಲೂ ನಟಿಸುವಾಸೆ ಇದೆ.

*ಕನ್ನಡ ಕಲಿತ್ತಿದ್ದು ಹೇಗೆ, ಪ್ರೇಕ್ಷಕರಿಗೆ ಏನು ಹೇಳಕ್ಕೆ ಇಷ್ಟಪಡುತ್ತೀರಾ?
ಮೊದಮೊದಲು ೨-೩ ಪ್ರಾಜೆಕ್ಟ್‌ಗಳಲ್ಲಿ ನಟಿಸುವಾಗ ಕನ್ನಡ ಗೊತ್ತಿಲ್ಲದೇ ತುಂಬಾ ಪರದಾಡಿದ್ದೆ, ಆನಂತರ ಕನ್ನಡ ಕಲಿಯಬೇಕು ಎಂಬ ಹಠದಿಂದ ತರಗತಿಗೆ ಹೋಗಿದ್ದೇನೆ. ಅಲ್ಲದೇ ಕನ್ನಡ ಗೊತ್ತಿಲ್ಲಡಾಟ್ ಕಾಮ್‌ನಲ್ಲಿ ಕೆಲವೊಂದು ವಿಚಾರಗಳನ್ನು ಕಲಿತುಕೊಂಡಿದ್ದೇನೆ. ಈ ಊರು.. ಈ ಜನ ಅಷ್ಟೆ ಪ್ರೀತಿಯಿಂದ ನನ್ನನ್ನು ಸ್ವೀಕರಿಸಿದ್ದಾರೆ. ಮುಂದೆ ನಿಮ್ಮ ಹಾರೈಕೆ, ಆಶೀರ್ವಾದ ಮುಂದುವರೆಯಲಿ ಎಂದು ಮನವಿ ಮಾಡುವೆ.

Leave a Comment