ಸಮಾಜವಾದಿ ಪಾರ್ಟಿ ವಿಧಾನಸಭೆಗೆ ಸ್ಪರ್ಧೆ

ಚಿತ್ರದುರ್ಗ.ಜೂ.19; ಮುಂಬರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೆ ಪಕ್ಷವು ಸ್ಪರ್ಧಿಸಲಿದೆಯೆಂದು ಪಕ್ಷ ರಾಜ್ಯ ಉಪಾಧ್ಯಕ್ಷರು ಹಾಗೂ ಉಸ್ತುವಾರಿಗಳಾದ ಎನ್.ಮಂಜಪ್ಪ ತಿಳಿಸಿದರು. ರಾಷ್ಟ್ರೀಯ ಅಧ್ಯಕ್ಷರಾದ ಅಖಿಲೇಶ ಯಾದವ್ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದಾರೆ. ಅವರನ್ನು ಸಂಪರ್ಕಿಸಿ ಬರಲು ಬಹುಮತ ವ್ಯಕ್ತಪಡಿಸಿದ್ದಾರೆ. ಪಕ್ಷದ ಸದಸ್ಯತ್ವ ನೋಂದಣಿ ಪ್ರಾರಂಭವಾಗಿದ್ದು ಮುಂದಿನ ತಿಂಗಳೊಳಗಾಗಿ ಸುಮಾರು 25 ಸಾವಿರಕ್ಕು ಹೆಚ್ಚಿನ ಸದಸ್ಯರ ನೋಂದಣಿ ಮಾಡುವ ಗುರಿ ಹೊಂದಲಾಗಿದೆಯೆಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಡಿ.ಎಂ ರವೀಂದ್ರನಾಥ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾಸಮಿತಿ ಹಾಗೂ ತಾಲ್ಲೂಕು ಸಮಿತಿ ಪದಾಧಿಕಾರಿಗಳನ್ನು ನೇಮಿಸಿ ಆದೇಶ ನೀಡಲಾಗಿದೆ.

ಆಯ್ಕೆಯಾದ ಪದಾಧಿಕಾರಿಗಳು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರದುರ್ಗ ಸಿ. ಸಂತೋಷ್ ಯಾದವ್, ಆರ್ ತಿಪ್ಪೇಸ್ವಾಮಿ, ದಾಸಪ್ಪ, ಚಳ್ಳಕೆರೆ ತಾಲ್ಲೂಕು ಅಧ್ಯಕ್ಷರು, ಚಿತ್ರದುರ್ಗ ತಾಲ್ಲೂಕು ಅಧ್ಯಕ್ಷರು, ಜಿಲ್ಲೆಯಲ್ಲಿ ಪಕ್ಷವನ್ನು ಬಲಿಷ್ಟವಾಗಿ ಸಂಘಟಿಸಿ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಗುರುತರವಾದಂತ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರುಗಳಿಗೆ ಜಿಲ್ಲಾಧ್ಯಕ್ಷರು ಡಿ.ಎಂ ರವೀಂದ್ರನಾಥ್ ಮನವಿ ಮಾಡಿದ್ದಾರೆ. ಈ ಸಭೆಯಲ್ಲಿ ಎಸ್. ಮಂಜಪ್ಪ, ಡಿ.ಎಂ ರವೀಂದ್ರನಾಥ್, ಸಿ. ಸಂತೋಷ್ ಯಾದವ್, ಆರ್.ತಿಪ್ಪೇಸ್ವಾಮಿ, ದಾಸಪ್ಪ, ಧನಂಜಯ. ಎಸ್, ವೀರಭದ್ರಪ್ಪ (ಗ್ರಾಮ ಪಂಚಾಯಿತಿ ಸದಸ್ಯರು) ಕೃಷ್ಣ, ದುಶ್ಯಾಂತ, ತಿಪ್ಪೇಸ್ವಾಮಿ, ಪ್ರಸನ್ನ ಕುಮಾರ್, ಕುಮಾರ ನಾಯ್ಕ, ಪಿ.ತಿಮ್ಮಪ್ಪ, ರಾಜು ಚಳ್ಳಕೆರೆ ಉಪಸ್ಥಿತರಿದ್ದರು.

Leave a Comment