ಸಮಾಜಮುಖಿ ಸೇವೆ ಹುಟ್ಟುಹಬ್ಬದಲ್ಲಿ ರಮೇಶ್ ಸಾರ್ಥಕತೆ

ಬೆಂಗಳೂರು, ಜ. ೧೪- ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ, ಬೆಂಗಳೂರು ನಗರ ಬಿಜೆಪಿ ವಕ್ತಾರ ಡಾ. ಎನ್.ಆರ್. ರಮೇಶ್ ಅವರು ಯಡಿಯೂರು ವಾರ್ಡ್‌ನಲ್ಲಿಂದು ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ, ಉಚಿತ ಕಣ್ಣಿನ ತಪಾಸಣೆ ಸಮಾಜ ಮುಖಿ ಕಾರ್ಯಕ್ರಮಗಳ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ವಾರ್ಡ್‌ನಲ್ಲಿ ಅವರ ಹುಟ್ಟುಹಬ್ಬದ ಅಂಗವಾಗಿ ನೇತ್ರಾ ತಪಾಸಣೆ ಶಿಬಿರದ ನಂತರ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಗಿದೆ. ಕಬ್ಬಡ್ಡಿ ಮತ್ತು ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿದೆ. ಸುಮಾರು ೨೦೦೦ ಶಾಲಾ ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ಪುಸ್ತಕ ಮತ್ತು ಬ್ಯಾಗ್ ವಿತರಣೆ ಮತ್ತು ಅನಾಥ ಶ್ರಮ ಮಕ್ಕಳಿಗೆ ಸಿಹಿ ವಿತರಿಸಲಾಗಿದೆ.
ಬೆಂಗಳೂರು ನಗರದ ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಡಾ. ಎನ್.ಆರ್. ರಮೇಶ್‌ರವರ ಅಭಿಮಾನಿಗಳು, ಸ್ನೇಹಿತರು, ಬಿಜೆಪಿ ಪಕ್ಷದ ಮುಖಂಡರು, ಅವರ ನಿವಾಸಕ್ಕೆ ಆಗಮಿಸಿ ಅವರಿಗೆ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಯಡಿಯೂರು ವಾರ್ಡ್ ಐತಿಹಾಸಿಕವಾಗಿ ಹೆಸರಾಗಿದೆ. ಪ್ರಜ್ಞಾವಂತ ನಾಗರೀಕರು ನೆಲೆಸಿದ್ದಾರೆ. ಹಲವಾರು ಅಭಿವೃದ್ಧಿ ಕಾರ್ಯಗಳಿಂದ ಯಡಿಯೂರು ವಾರ್ಡ್ ದಕ್ಷಿಣ ಭಾರತದಲ್ಲೇ ಅಭಿವೃದ್ಧಿಯಾದ ಪ್ರಪ್ರಥಮ ವಾರ್ಡ್ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಯಡಿಯೂರು ಕೆರೆ, ರಣಧೀರ ಕಂಠೀರವ ಉದ್ಯಾನವನ, ಕಾಂಪೋಸ್ಟ್ ಗೊಬ್ಬರ ತಯಾರಿಕೆ ಘಟಕ, ವಿದ್ಯುತ್ ಉತ್ಪಾದನೆಯಿಂದ ಪಾಲಿಕೆಗೆ ಲಕ್ಷಾಂತರ ರೂ. ಉಳಿತಾಯ, ಉಚಿತ ಡಯಾಲಿಸೀಸ್ ಕೇಂದ್ರ, ಮಾದರಿ ಪಾದಚಾರಿ ರಸ್ತೆ, ವರನಟ ಡಾ. ರಾಜ್‌ಕುಮಾರ್, ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ರವರ ಪ್ರತಿಮೆಗಳ ನಿರ್ಮಾಣ, ಕರ್ನಾಟಕದಲ್ಲಿ ಮೊದಲನೆಯರಾದ ಅಂಬರ- ಚುಂಬನ ಗಡಿಯಾರ ಗೋಪುರ, ವಾರ್ಡ್‌ನ ಹೆಗ್ಗಳಿಕೆಗೆ ಕಾರಣವಾಗಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿ ಸಾವಿರಾರು ಕೋಟಿ ರೂ. ಹಗರಣಗಳನ್ನು ಬಯಲಿಗೆಳೆದು ಭ್ರಷ್ಟಾಚಾರದಲ್ಲಿ ಭಾಗಿಯಾದ ಮಾಜಿ ಮಂತ್ರಿಗಳ ಮೇಲೆ ಕೇಸು ದಾಖಲಿಸಿ, ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಹೋರಾಟ ನಡೆಸಿದ್ದೇನೆ. ಹೋರಾಟದಲ್ಲಿ ಹೆಗಲು ಕೊಟ್ಟ ಯಡಿಯೂರು ವಾರ್ಡ್‌ನ ನಾಗರಿಕರಿಗೆ ಅವರು ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಯಡಿಯೂರು ವಾರ್ಡ್‌ನ ಪಾಲಿಕೆ ಸದಸ್ಯೆ ಪೂರ್ಣಿಮ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment