ಸಮಾಜದ ಸ್ವಾಸ್ಥ್ಯ ಕೆಡದ ಜೀವನ ಮನುಷ್ಯನಿಂದ ಮಾತ್ರ ಸಾಧ್ಯ

ಬಳ್ಳಾರಿ, ಜ.05: ಒಬ್ಬವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಉಂಟಾಗಬಹುದಾದ ಉಪಟಳವನ್ನು ಹಾನಿಯನ್ನು ತಡೆಯುವುದು ಮತ್ತು ಸೌಹಾರ್ದ ಸಮಾಜ ಪರಸ್ಪರ ಆತ್ಮೀಯ ಸಂಬಂಧದ ನೆಲೆಯಲ್ಲಿ ಮೂಡಿ ಬರುವ ಪ್ರಕೃತಿ ಸಹಜಪ್ರೇಮ, ಸುಖ, ಸಂತೋಷ, ನೆಮ್ಮದಿಯನ್ನು ಅನುಭವಿಸುತ್ತಾ ಸಮಾಜದ ಸ್ವಾಸ್ಥ್ಯ ಕೆಡದಂತೆ ಜೀವನ ಸಾಗಲೆಂದು ಚಿಂತನೆ, ಆಲೋಚನೆ ಮತ್ತು ತಾರ್ಕಿಕತೆ ಮನುಷ್ಯನಿಂದ ಮಾತ್ರ ಸಾದ್ಯ ಎಂದು ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್. ಶಾಂತಾನಾಯ್ಕ್ ಹೇಳಿದರು.

ಡಿ.ಆರ್ ಕೆ ರಂಗಸಿರಿ ಟ್ರಸ್ಟ ಬಳ್ಳಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಸಹಯೋಗದಲ್ಲಿ ಸಾಂಸ್ಕೃತಿಕ ಸಮುಚ್ಛಯ ಬಯಲು ರಂಗಮಂದಿರದಲ್ಲಿ ನಿನ್ನೆ ಸಂಜೆ ಧರ್ಮಾವರಂ ರಾಮಕೃಷ್ಣಮಾಚಾರ್ಯರ ಸ್ಮರಣೋತ್ಸವ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕೃತಿಕವಾಗಿ ರಂಗದಲ್ಲಿ ಕಟ್ಟಿಕೊಂಡು ಅದರ ನೆಲೆಯಲ್ಲಿ ಬದುಕುತ್ತಿರುವ ಪ್ರಕೃತಿಯಲ್ಲಿನ ಏಕೈಕ ಜೀವಿ ಮನುಷ್ಯ ಎಂದರು.

ರಾಘವ ಮೆಮೋರಿಯಲ್ ಅಸೋಷಿಯೇಷನ್ ಅಧ್ಯಕ್ಷ ಕೆ.ಕೋಟೇಶ್ವರರಾವ್ ಮಾತನಾಡಿ, ಜನಪದ ರಂಗಭೂಮಿಯಲ್ಲಿ ಪ್ರೇಕ್ಷಕರ ಮನರಂಜಿಸುವ ಕಲೆಯೆಂದರೆ ಜನಪದರ ಕಲೆಗಳಾದ ಬಯಲಾಟ. ಆಂಧ್ರದ ಕೂಚಿಪೂಡಿ, ತಮಿಳುನಾಡಿನ ಮೇಳತ್ತೂರು ಭಾಗವತಮೇಳ ಮತ್ತು ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಯಕ್ಷಗಾನ ಬಯಲಾಟ. ಅದು ಸಂಗೀತ, ಸಂಭಾಷಣೆ, ಕುಣಿತ, ಅಭಿನಯ, ವೇಷಭೂಷಣಗಳ ಸೊಗಸಾದ ಸಮೀಕರಣವಾಗಿರುವ ಒಂದು ಕಲೆ ಎಂದರು.

ಡಿ.ಮಹೇಂದ್ರನಾಥ ಅಧ್ಯಕ್ಷರು ಡಿ.ಆರ್ ಕೆ.ರಂಗಸಿರಿ ಅಧ್ಯಕ್ಷ ಡಿ. ಮಹೇಂದ್ರನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಸಾಂಬಶಿವ ದಳವಾಯಿ ಉಪಸ್ಥಿತರಿದ್ದರು.

ನಂತರ ಧರ್ಮಾವರಂರಾಮಕೃಷ್ಣಮಾರ್ಚಾಯಲು ಎಂಡೋಮೆಂಟ್ನಿಂದ ಐದು ಜನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಪ್ರತಿ ವರ್ಷದಂತೆ 2018 ನೇ ಸಾಲಿನ ಡಿ.ಆರ್.ಕೆ ರಂಗಸಿರಿ ಪ್ರಶಸ್ತಿಯನ್ನು ಹೂವಿನಹಡಗಲಿಯರಂಗ ಸಂಘಟಕ ದ್ವಾರಕೀಶ್ ರೆಡ್ಡಿ ಅವರಿಗೆ ನೀಡಲಾಯಿತು. ನಂತರ ಎನ್ ರಾಘವೇಂದ್ರಸ್ವಾಮಿ ಗುಡದೂರು ಅವರಿಂದ ಸುಗಮ ಸಂಗೀತ ಹೆಚ್ ಲೋಕರಾಜ್ ಮತ್ತುತಂಡ ಸಮೂಹ ನೃತ್ಯ, ಬಿ ವಿ ಹುಸೇನಪ್ಪ, ಮತ್ತು ತಂಡದವರಿಂದ ವೀರ ಅಭಿಮನ್ಯು ಪೌರಾಣಿಕ ನಾಟಕ, ರಚನೆ ದಿ.ರಾಜಾನಂದ ವಿನ್ಯಾಸ ಮತ್ತು ನಿರ್ದೇಶನ ಅಣ್ಣಾಜಿ ಕೃಷ್ಣಾರೆಡ್ಡಿ ಪ್ರದರ್ಶನ ಮಾಡಲಾಯಿತು.

ವೀಣಾ ಕಾರ್ಯಕ್ರಮ ನಿರೂಪಿಸಿದರು.

Leave a Comment