ಸಮಾಜದ ಡೊಂಕನ್ನು ತಿದ್ದುವಲ್ಲಿ ವ್ಯಂಗ್ಯಚಿತ್ರಗಳ ಪಾತ್ರ ಪ್ರಮುಖ -ಚಂದ್ರಕಾಂತ ಬೆಲ್ಲದ

ಧಾರವಾಡ ನ.11- ಕರ್ನಾಟಕ ಗಡಿ ಅಭಿವೃದ್ಧಿ ಇಲಾಖೆ ಮಾಜಿ ಅದ್ಯಕ್ಷರಾದ ಹಾಗೂ ಮಾಜಿ ಶಾಸಕರಾದ ಚಂದ್ರಕಾಂತ ಬೆಲ್ಲದ ಅವರು “ಕರ್ನಾಟಕ ವ್ಯಂಗ್ಯಚಿತ್ರ ಸಾಹಿತ್ಯ ಮಾಧ್ಯಮ” ಸಂಸ್ಥೆ ಹಾಗೂ ‘ರಾಜ್ಯಮಟ್ಟದ ವ್ಯಂಗ್ಯಚಿತ್ರ ಪ್ರದರ್ಶನವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ  ಕೆಲವೆ ಗೆರೆಗಳ ಮೂಲಕ ವ್ಯಂಗ್ಯಚಿತ್ರಗಳು ಸಮಾಜದ ಅಂಕು ಡೊಂಕನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ವ್ಯಂಗ್ಯಚಿತ್ರಕಾರರಾದ ಮೇಗರವಳ್ಳಿ ಸುಬ್ರಹ್ಮಣ್ಯ (ಶಿವಮೊಗ್ಗ) ಅವರು ಈ ಸಂಸ್ಥೆಯಿಂದ ರಾಜ್ಯದ ಎಲ್ಲೆಡೆಯೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡಬೇಕು ಎಂದು ಮಾತನಾಡಿದರು.ಸರಕಾರಿ ಕಲಾ ವಿದ್ಯಾಲಯದ ಮುಖ್ಯಸ್ಥರಾದ ಬಸವರಾಜ ಕುರಿಯವರು ಎಲ್ಲ ಕಲೆಗಳ ಪ್ರಕಾರವನ್ನು ಇಂದು ಉಳಿಸಿ ಬೇಳಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಪ್ರಶಾಂತ ನಾಯಕ (ಭಾರತ) ಅವರು ಪ್ರತಿ ವರ್ಷ ‘ಧಾರವಾಡ ವ್ಯಂಗ್ಯಚಿತ್ರ ಹಬ್ಬ’ ಆರಿಸಲಾಗುವುದು.ಹಾಗೂ ಸಂಸ್ಥೆಯಲ್ಲಿ ಸಾಹಿತ್ಯ ಕಲೆಗೂ ಅವಕಾಶವನ್ನು ನೀಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ಭಾಷಣದಲ್ಲಿ ತಮ್ಮ ವ್ಯಂಗ್ಯಚಿತ್ರ ಕ್ಷೇತ್ರದ ಅನುಭವವನ್ನು ಹಂಚಿಕೊಂಡರು.
ರಾಜ್ಯದ 50 ವ್ಯಂಗ್ಯಚಿತ್ರಕಾರರು ಈ ಪ್ರದರ್ಶನದಲ್ಲಿ ಭಗವಹಿಸಿದ್ದು ವಿಶೇಷವಾಗಿತ್ತು. ರಾಜ್ಯದ ವಿವಿದ ಜಿಲ್ಲೆಗಳಿಂದ ವ್ಯಂಗ್ಯಚಿತ್ರಕಾರರು ಆಗಮಿಸಿದ್ದರು. ಕಾವ್ಯ ವಾಚನ ಕಾರ್ಯಕ್ರಮವನ್ನು ವಿಜಯ ಇನಾಮದಾರ, ಬಸವರಾಜ ಸುರಪುರ, ವೆಂಕಟೇಶ ಕಳಸಾಪುರ, ಪ್ರಹ್ಲಾದ ಯಾವಗಲ್, ಪೂರ್ಣಚಂದ್ರ ತೇಜಸ್ವಿ ನಡೆಸಿಕೊಟ್ಟರು.
ವೇದಿಕೆಯ ಗಣ್ಯರಿಗೆ ಅಧ್ಯಕ್ಷರಾದ ಪ್ರಶಾಂತ ನಾಯಕ, ಆರ್ ಜಿ ಕುಲಕರ್ಣಿ, ಶ್ರೀನಿವಾಸ ಹುದ್ದಾರ ಅವರು ಸನ್ಮಾನವನ್ನು ನೇರವೇರಿಸಿಕೊಟ್ಟರು. ಚಂದ್ರಕಾಂತ ಬೆಲ್ಲದ ಅವರಿಂದ ಬಂದಂತಹ ಎಲ್ಲ ವ್ಯಂಗ್ಯಚಿತ್ರಕಾರ, ಹಾಗೂ ಸಾಹಿತಿಗಳಿಗೆ  ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ರಾಜ್ಯದ ಪ್ರಸಿದ್ದ ವ್ಯಂಗ್ಯಚಿತ್ರಕಾರರಾದ ಸುಬ್ರಹಣ್ಯ ಎಂ ಎನ್, ಅಶೋಕ ಜೋಶಿ, ಪ್ರಶಾಂತ ಭಾರತ, ಶರಣು ಚಟ್ಟಿ, ರಂಗನಾಥ ಸಿದ್ಧಾಪುರ, ಆರ್ ಜಿ ಕುಲಕರ್ಣಿ, ವಿಜಯಾನಂದ ಕಾಲವಾಡ, ಮಧುಕರ ಯಕ್ಕೇರಿ, ಪಿ ಜಿ ನಾರಾಯಣ, ಕೆ ಆರ್ ಸ್ವಾಮಿ, ನಿರ್ನಳ್ಳಿ ಗಣಪತಿ, ಗುಜ್ಜಾರಪ್ಪ ಬಿಜಿ, ಬಿ ವಿ ಪಾಂಡುರಂಗರಾವ್, ಜೀವನ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ, ವಿ ಆರ್ ಸಿ ಶೇಖರ, ವಿಶ್ವ ವಿನ್ಯಾಸ, ಗೊರವರ ಯಲ್ಲಪ್ಪ, ವೆಂಕಟ ಭಟ್, ಜೇಮ್ಸ್ ವಾಜ್, ನಾಗನಾಥ ಜಿ ಎಸ್, ಏಕನಾಥ ಬೊಂಗಾಳೆ, ಜಿ ಎಂ ಬೊಮ್ನಳ್ಳಿ, ಬಾಲು ಪಟಗಾರ, ರಘುಪತಿ ಶೃಂಗೇರಿ, ಜಾನ್ ಚಂದ್ರನ್, ಗೋಪಿ ಹಿರೇಬೆಟ್ಟು, ರಾಮಚಂದ್ರ ಕೊಪ್ಪಲು, ಸತೀಶ ಯಲ್ಲಾಪುರ, ಕಿರಣಕುಮಾರ, ಚಂದ್ರ ಗಂಗೊಳ್ಳಿ, ನಂಜುಂಡ ಸ್ವಾಮಿ, ಶೈಲೇಶ ಕುಮಾರ, ವೆಂಕಟೇಶ ಇನಾಮದಾರ, ದತ್ತಾತ್ರಿ ಎಂ ಎನ್, ಅರುಣ ಕುಮಾರ, ನವೀನ ಕುಮಾರ, ಪಿ ಜಿ ನಾರಾಯಣ, ಮಹಾಂತೇಶ ಅಂಗಡಿ, ರಮೇಶ ಚಂಡೆಪ್ಪನವರ, ಬದರಿನಾರಾಯಣ ಪುರೋಹಿತ, ಈರಣ್ಣ ಬೆಂಗಾಲಿ, ಸತೀಷ ಕಾಖಂಡಕಿ, ಆದರ್ಶ ಪೈ, ಶ್ರೀಧರ್ ಕೋಮರವಲ್ಲಿ, ಗಂಗಾಧರ ಅಡ್ಡೇರಿ, ವಿನೋದ ಆಚಾರ್ಯ, ಡಾ. ಗೋವಿಂದರಾಜು, ಕೆ ಎಸ್ ದಯಾನಂದ, ಸುಮುಖ ಶಾನಭೋಗ್, ಪ್ರಕಾಶ ಕುಂಬಾರ ಭಾಗವಹಿಸಿದ್ದರು.
ಒಂದು ದಿನ ನಡೆದ ರಾಜ್ಯಮಟ್ಟದ ವ್ಯಂಗ್ಯಚಿತ್ರ ಪಗರದರ್ಶನವು ಜನಮನ ಸೂರೆಗೊಂಡಿತು. ನೀರುಪಣೆಯನ್ನು ಶ್ರೀನಿವಾಸ ಹುದ್ದಾರ, ವಂದನಾರ್ಪಣೆಯನ್ನು ವಿಜಯ ಇನಾಮದಾರ ನಡೆಸಿಕೊಟ್ಟರು.

Leave a Comment