ಸಮಾಜದ ಅಭಿವೃದ್ಧಿಗೆ ಟ್ರಸ್ಟ್‍ಗಳು ಅವಶ್ಯಕ

ಬಳ್ಳಾರಿ, ಡಿ.7: ಸಮಾಜದ ಅಭಿವೃದ್ಧಿಗೆ ಮತ್ತು ಸಾರ್ವಜನಿಕರ ಸೇವೆಗೆ ಟ್ರಸ್ಟ್‍ಗಳ ಅವಶ್ಯಕತೆ ಇದೆ ಎಂದು ಕನ್ನಡ ಮತ್ತು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.

ನಗರದ ಸಿದ್ದಾರ್ಥ ಕಾಲೋನಿಯಲ್ಲಿ ಶ್ರೀ ಸೋಮೇಶ್ವರ ರೂರಲ್ ಮತ್ತು ಅರ್ಬನ್ ಡೆವಲಪ್ ಮೆಂಟ್ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಟ್ರಸ್ಟ್‍ಗಳು ಸಮಾಜಕ್ಕೆ ಒಳಿತಾಗುವಂತರ ಉತ್ತಮ ಸೇವೆಗೆ ಮೊದಲ ಆದ್ಯತೆ ನೀಡಿ ಜನ ಮನ್ನಣೆ ಪಡೆಯಬೇಕು ಎಂದರು.

ಶ್ರೀ ಸೋಮೇಶ್ವರ ರೂರಲ್ ಮತ್ತು ಅರ್ಬನ್ ಡೆವಲಪ್ ಮೆಂಟ್ ಟ್ರಸ್ಟ್ ನ ಅಧ್ಯಕ್ಷ ಬಿ.ಸುಮಾರೆಡ್ಡಿ ಹಾಗೂ ಬಿಎಡ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ವಿ.ಸಿ.ಜಿನಗಾ, ನಿವೃತ್ತ ಶಿಕ್ಷಕ ಎಮ್.ಎಂಕಾಬ್ರಯ್ಯಸ್ವಾಮಿ, ಕುರುಗೋಡಿನ ಸ್ಮೈಲ್ ಸಂಸ್ಥೆಯ ಉಮಾಪತಿಗೌಡ ಸೇರಿದಂತೆ ಮತ್ತಿತರರು ಇದ್ದರು.
ಫೋಟೋ:

Leave a Comment