ಸಮಸ್ಯೆಗೆ ಪರಿಹಾರ ಡ್ರ್ಯಾಗನ್ ಫ್ರೂಟ್

ಕೂದಲು ಮತ್ತು ಚರ್ಮದ ಆರೋಗ್ಯ ಹೆಚ್ಚಿಸಲು ಡ್ರ್ಯಾಗನ್ ಫ್ರೂಟ್‌ನ್ನು ಬೇರೆಬೇರೆ ವಿಧದಲ್ಲಿ ಬಳಕೆ ಮಾಡಬಹುದಾಗಿದೆ. ನೇರವಾಗಿ ಕೂಡ  ಬಳಕೆ  ಮಾಡಬಹುದು ಅಥವಾ ಇತರೆ ಆರೋಗ್ಯಕಾರಿ ಪದಾರ್ಥಗಳೊಂದಿಗೆ ಬೆರೆಸಿ ಚರ್ಮಕ್ಕೆ ಮತ್ತು ಕೂದಲಿಗೆ ಮಾಸ್ಕ್‌ನಂತೆ ಕೂಡ ಬಳಕೆ ಮಾಡಬಹುದು.

ಡ್ರ್ಯಾಗನ್ ಫ್ರೂಟ್‌ನಲ್ಲಿ ವಿಟಮಿನ್ ಬಿ೩ ಅಂಶವು ಅಧಿಕವಾಗಿದೆ ಮತ್ತು ಇದು ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮದ ಮೇಲಾಗುವ ಹಾನಿಯನ್ನು ತಪ್ಪಿಸಿ ಚರ್ಮವನ್ನು ಮೊದಲಿನ ಸ್ಥಿತಿಗೆ ಅಂದರೆ ಸಹಜ ಸ್ಥಿತಿಗೆ ಮರುಕಳಿಸುವ ಸಾಮರ್ಥ್ಯವನ್ನು ಹೊಂದಿದೆ.

ಸೂರ್ಯನ ಕಿರಣಗಳಿಂದ ಚರ್ಮ ಸುಟ್ಟಂತಾಗಿ, ಉರಿಯೂತ ಸಮಸ್ಯೆ ಕಂಡುಬಂದಿದ್ದಲ್ಲಿ ಡ್ರ್ಯಾಗನ್ ಫ್ರೂಟನ್ನು ಬಳಕೆ ಮಾಡಿ. ಇದು ನಿಮಗೆ ಸೂರ್ಯನ ಕಿರಣಗಳಿಂದಾದ ಯಾವುದೇ ರೀತಿಯ ಸಮಸ್ಯೆಯನ್ನೂ ಕೂಡ ನಿವಾರಿಸುವ ಸಾಮರ್ಥ್ಯ ಹೊಂದಿದೆ.

d1

ಹಲವಾರು ವಿಚಾರಗಳಿಂದಾಗಿ ಉದಾಹರಣೆಗೆ ಸೂರ್ಯನ ಶಾಖದಿಂದ, ಫ್ರೀ ರ್ಯಾಡಿಕಲ್‌ಗಳ ಡ್ಯಾಮೇಜ್, ಅತಿಯಾದ ಚರ್ಮದ ಕಾಳಜಿ ಇತ್ಯಾದಿ ಗಳಿಂದಾಗಿ ನಿಮ್ಮ ಚರ್ಮವು ಬೇಗನೆ ವಯಸ್ಸಾಗಿರುವಂತೆ ಗೋಚರಿಸುತ್ತಿರಬಹುದು. ಅಂದರೆ ವಯಸ್ಸಲ್ಲದ ವಯಸ್ಸಿಗೆ ಚರ್ಮದಲ್ಲಿ ಸುಕ್ಕುಗಳು ಕಾಣಿಸಿಕೊಂಡಿರಬಹುದು, ಗೆರೆಗಳು ಮೂಡಿರಬಹುದು. ಒಂದು ವೇಳೆ ಹೀಗಾಗಿದ್ದಲ್ಲಿ ಕೂಡಲೇ ಡ್ರ್ಯಾಗನ್ ಫ್ರೂಟ್ ಬಳಕೆ ಮಾಡಿ.

ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಈ ಸಮಸ್ಯೆಯ ವಿರುದ್ಧ ಸೆಣಸಾಡಿ ನಿಮ್ಮ ತ್ವಚೆಯನ್ನು ಯಂಗ್ ಆಗಿ ಮತ್ತು ಉತ್ತಮವಾಗಿ ಕಾಣುವಂತೆ ಮಾಡುತ್ತದೆ.

images-1aಚರ್ಮದಲ್ಲಿ ಆಕ್ನೆಯಿಂದಾಗಿ ನೀವು ಬಳಲುತ್ತಿದ್ದರೆ ಖಡಿತ ಈ ಉಷ್ಣವಲಯದ ಹಣ್ಣನ್ನು ಬಳಕೆ ಮಾಡಲೇಬೇಕು. ಈಗಂತೂ ಎಲ್ಲಾ ಮಾರುಕಟ್ಟೆಗಳಲ್ಲೂ ಈ ಹಣ್ಣು ಲಭ್ಯವಿದೆ. ಇದರಲ್ಲಿ ಹೇರಳವಾದ ವಿಟಮಿನ್ ಸಿ ಅಂಶವಿರುವುದರಿಂದಾಗಿ ಆಕ್ನೆಯ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ ಮತ್ತು ಚರ್ಮವು ಪದೇ ಪದೇ ಹಾಳಾಗುವುದನ್ನು ಇದು ತಡೆಯುತ್ತದೆ. ಚರ್ಮಕ್ಕೆ ಹೊಳಪು ನೀಡುತ್ತೆ ಡ್ರ್ಯಾಗನ್ ಫ್ರೂಟ್‌ನಲ್ಲಿರುವ ವಿಟಮಿನ್ ಸಿ ಅಂಶವು ಚರ್ಮದ ಕಳೆಗುಂದುವಿಕೆಯ ವಿರುದ್ಧ ಸೆಣಸುತ್ತೆ ಮತ್ತು ನಿಮ್ಮ ಚರ್ಮವು ತಾಜಾವಾಗಿ ಮತ್ತು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಡ್ಯಾಮೇಜ್ ಆಗಿರುವ ಕೂದಲನ್ನು ಸರಿಪಡಿಸುತ್ತದೆ ಹಲವಾರು ವಿಚಾರಗಳಿಂದಾಗಿ ಅಂದರೆ ಅತಿಯಾದ ಕೆಮಿಕಲ್ ಪದಾರ್ಥಗಳನ್ನು ಕೂದಲಿಗೆ ಬಳಕೆ ಮಾಡುವುದು, ಕೂದಲನ್ನು ಬಿಸಿಗೊಳಿಸಿ ಸೆಟ್ ಮಾಡುವ ಹೇರ್ ಸ್ಟೈಲ್ ಟೂಲ್ ಗಳ ಬಳಕೆ, ಕೆಟ್ಟ ಜೀವನಶೈಲಿ ಇತ್ಯಾದಿಗಳ ಕಾರಣದಿಂದಾಗಿ ನೈಸರ್ಗಿಕವಾಗಿರುವ ಉತ್ತಮ ಕೂದಲು ಕಳೆದುಹೋಗಿ ಹಾಳಾಗಿರುವ ಕಳೆಗುಂದಿದ ಕೂದಲು ನಿಮ್ಮದಾಗಿರಬಹುದು. ಆದರೆ ಅದನ್ನು ಸರಿಪಡಿಸಲು ಸಾಧ್ಯವಿದೆ. ಡ್ರ್ಯಾಗನ್ ಫ್ರೂಟನಲ್ಲಿರುವ ಪೋಷಕಾಂಶಗಳು ಈ ಎಲ್ಲಾ ಕಾರಣಗಳಿಂದಾಗಿ ನಿಮ್ಮ ಕೂದಲು ಕಳಾಹೀನವಾಗಿದ್ದರೆ ಅದನ್ನು ಸರಿಪಡಿಸುವ ತಾಕತ್ತನ್ನು ಹೊಂದಿದೆ.

ಡ್ರ್ಯಾಗನ್ ಹಣ್ಣಿನಲ್ಲಿರುವ ಅಧಿಕ ಮಟ್ಟದ ವಿಟಮಿನ್ ಸಿ ಅಂಶದಿಂದಾಗಿ ಕೂದಲಿಗೆ ಹೊಳಪು ಇದು ಸೇರಿಸುತ್ತದೆ.ಅಷ್ಟೇ ಅಲ್ಲ,ಈ ಡ್ರ್ಯಾಗನ್ ಫ್ರೂಟ್ ನಲ್ಲಿ ಎಝೈಮ್ಸ್ ಗಳು ಇರುವುದರಿಂದಾಗಿ ಒರಟಾದ ಕೂದಲಿನ ನಿವಾರಣೆಗೆ ಇದೊಂದು ಅಧ್ಬುತ ಪದಾರ್ಥವಾಗಿ ಗುರುತಿಸಿಕೊಂಡಿದೆ. ಯಾರಿಗೆ ಒರಟಾದ ಮತ್ತು ಕಳೆಗುಂದಿದ ಕೂದಲು ಇದಿಯೋ ಅಂತವರು ಆಗಾಗ ಡ್ರ್ಯಾಗನ್ ಫ್ರೂಟ್ ಬಳಕೆ ಮಾಡಿ ತಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಕೂದಲಿನ ಫಾಲಿಕಲ್ಸ್ ಗಳನ್ನು ಬಲಿಷ್ಟಗೊಳಿಸಲು ಈ ಅಧ್ಬುತ ಹಣ್ಣನ್ನು ಬಳಕೆ ಮಾಡಬಹುದು. ಯಾವಾಗ ಕೂದಲಿನ ಫಾಲಿಕಲ್ ಗಳು ಬಲಿಷ್ಟವಾಗಿರುತ್ತವೋ ಆಗ ಕೂದಲು ತುಂಡಾಗುವಿಕೆ ನಿಯಂತ್ರಣದಲ್ಲಿರುತ್ತದೆ. ಡ್ರ್ಯಾಗನ್ ಫ್ರೂಟನ್ನು ನಿರಂತರವಾಗಿ ನಿಮ್ಮ ಕೂದಲಿಗೆ ಬಳಕೆ ಮಾಡುವುದರಿಂದಾಗಿ ಕೂದಲುದುರುವಿಕೆ ಸಮಸ್ಯೆಯಿಂದ ಪರಿಹಾರ ಕಾಣಬಹುದಾಗಿದೆ.

red-dragon-fruit-3d-model_0

ಸ್ಪ್ಲಿಟ್ ಎಂಡ್ಸ್ ಗಳು ಸಾಮಾನ್ಯವಾಗಿ ಫ್ರೀ ರ್ಯಾಡಿಕಲ್ ಗಳಿಂದಾಗಿ ಆಗುತ್ತದೆ ಮತ್ತು ಇದು ವಿಶ್ವದಾದ್ಯಂತ ಮಹಿಳೆಯರು ಎದುರಿಸುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದೆನಿಸಿದೆ. ಆದರೆ ಒಂದು ಒಳ್ಳೆಯ ಸುದ್ದಿ ಏನೆಂದರೆ ಡ್ರ್ಯಾಗನ್ ಫ್ರೂಟ್ ನ ಸಹಾಯದಿಂದ ಸ್ಪ್ಲಿಟ್ ಎಂಡ್ಸ್ ಆಗದಂತೆ ತಡೆಯಲು ಸಾಧ್ಯವಿದೆ. ಇದು ಯಾಕೆಂದರೆ ಡ್ರ್ಯಾಗನ್ ಫ್ರೂಟ್ ನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಅಂಶವಿದೆ ಮತ್ತು ಇದು ಕೂದಲಿನಲ್ಲಿ ಫ್ರೀ ರ್ಯಾಡಿಕಲ್ಸ್‌ಗಳಿಂದ ಆಗುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಸಹಾಯ ಮಾಡುತ್ತದೆ.

ಈಗ ನೀವು ಡ್ರ್ಯಾಗನ್ ಫ್ರೂಟ್ ಹತ್ತು ಹಲವು ಪ್ರಯೋಜನಗಳನ್ನು ತಿಳಿದಿದ್ದೀರಿ ಮತ್ತು ಅದು ಚರ್ಮ, ಕೂದಲಿಗೆ ಹೇಗೆ ಉಪಯೋಗಕಾರಿ ಎಂಬ ಸಂಪೂರ್ಣ ವಿವರವನ್ನು ಪಡೆದಿದ್ದೀರಿ. ಹಾಗಾಗಿ ಇನ್ನು ಬಾಕಿ ಉಳಿದಿರುವುದು ನೀವು ಇದರ ಪ್ರಯತ್ನ ನಡೆಸುವುದಷ್ಟೇ. ಆದರೆ ಚರ್ಮಕ್ಕೆ ಪ್ರಯೋಗ ಮಾಡುವ ಮುನ್ನ ಇದು ನಿಮ್ಮ ಚರ್ಮದ ವಿಧಕ್ಕೆ ಹೊಂದಿಕೆಯಾಗುತ್ತದೆಯಾ ಎಂಬುದನ್ನು ಒಮ್ಮೆ ಖಾತ್ರಿ ಮಾಡಿಕೊಳ್ಳಿ.

Leave a Comment