ಸಮಯ ಪಾಲನೆ, ನೆನಪಿನಶಕ್ತಿ ಇದ್ದರೆ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ

ಹರಪನಹಳ್ಳಿ,ಜ,28 : ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆಯಲು ಗುರಿ, ಆತ್ಮ ವಿಶ್ವಾಸ, ಸಮಯ ಪಾಲನೆ, ನೆನಪಿನಶಕ್ತಿ ಇದ್ದರೆ ಯಶಸ್ಸು ಸಿಗುತ್ತದೆ ಎಂದು ಎಸ್.ಯು.ಜೆ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಅಭಿಪ್ರಾಯ ಪಟ್ಟರು.
ಪಟ್ಟಣದ ಎಸ್.ಯು.ಜೆ.ಎಂ. ಕಾಲೇಜಿನಲ್ಲಿ ನವಜ್ಯೋತಿ ಸಾಂಸ್ಕøತಿಕ ಸೇವಾ ಸಂಸ್ಥೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವುದು ಹೇಗೆ ? ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು ದಿನ ನಿತ್ಯ ಆರು ತಾಸು ಆರು ವಿಷಯಗಳನ್ನು ತಪ್ಪದೆ ಅಭ್ಯಾಸ ಮಾಡಿ,ಏಕಾಗ್ರತೆ, ಆಸಕ್ತಿ, ಸತತ ಅಭ್ಯಾಸದಿಂದ ಸ್ಮರಣ ಶಕ್ತಿ ಹೆಚ್ಚಾಗುತ್ತದೆ, ಅಧ್ಯಯನಕ್ಕೆ ಸೂಕ್ತ ಸಮಯ ಬೆಳಿಗ್ಗೆ 5-9 ಸಂಜೆ 5-10, ಓದಬೇಕು, ಓದಿದ್ದನ್ನು ಒಂದಕ್ಕೊಂದು ಸಂಬಂಧ ಕಲ್ಪಿಸಬೇಕು, ಮರು ಮನನ ಮಾಡಬೇಕು, ಆಮೇಲೆ ಬರೆಯಬೇಕು ನಂತರ ನೆನಪಿಸಿಕೊಳ್ಳಬೇಕು ಈ ರೀತಿ ಅಭ್ಯಾಸ ಮಾಡಿದರೆ ಸುಲಭವಾಗುತ್ತದೆ. ಒಂದೆ ಬಾರಿಗೆ ಹಿಡಿ ಪಾಠವನ್ನು ಓದದೆ ಒಂದೊಂದೆ ಪ್ಯಾರ ಓದಿ ಮನನ ಮಾಡಿಕೊಂಡು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ಬುಧ್ದಿಶಕ್ತಿಯನ್ನು ಹೆಚ್ಚು ಮಾಡುವ ನಿರ್ದಿಷ್ಠ ಆಹಾರ, ಪಾನೀಯ, ಔಷಧಿ ಲಭ್ಯವಿಲ್ಲ. ನಿದ್ರೆ, ಆಹಾರ ಸರಿಯಾಗಿ ಮಾಡಿ, ಸೂಕ್ತವಾದ ನಿಮಗೆ ಅನುಕೂಲವಾದ ವೇಳಾಪಟ್ಟಿ ತಯಾರಿಸಿಕೊಂಡು ಅಭ್ಯಾಸ ಮಾಡಿ ಎಂದು ಪರೀಕ್ಷಾ ತಂತ್ರಗಳನ್ನು ಹೇಳಿದರು.
ಹೆಚ್.ಪಿ.ಎಸ್. ಕಾಲೇಜಿನ ಉಪನ್ಯಾಸಕ ಉಮೇಶ್ ಮಾತನಾಡಿ ನಿಮ್ಮ ಗುರಿ 600 ಅಂಕಗಳು ಆ ಗುರಿಯನ್ನು ತಲುಪಿ, ವಿಷಯವಾರು ಓದಲು ಸಮಯ ನಿಗದಿಪಡಿಸಿಕೊಳ್ಳಿ, ಕ್ಲೀಷ್ಟ ವಿಷಯಗಳನ್ನು ಗುಂಪು ಚರ್ಚೆ ಮಾಡಿ, ಕತೆಯ ರೀತಿ ಪಠ್ಯ ಓದುವುದನ್ನು ರೂಢಿಸಿಕೊಳ್ಳಿ ವಾರಕ್ಕೊಂದು ಮಾದರಿ ಪ್ರಶ್ನೆ ಪತ್ರಿಕೆ ಬಿಡಿಸಿ ಎಂದರು.

Leave a Comment