ಸಮಯಕ್ಕೂ ಮುನ್ನವೇ ಇಂದಿರಾ ಕ್ಯಾಂಟಿನ್ ನಲ್ಲಿ ತಿಂಡಿ ಖಾಲಿ

ಮೈಸೂರು, ಜ.13- ನಿನ್ನೆಯಷ್ಟೇ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟಿನ್ ನಲ್ಲಿ ಇಂದು ಬೆಳಿಗ್ಗೆ ಸಮಯಕ್ಕೂ ಮುನ್ನವೆ ತಿಂಡಿ ಖಾಲಿಯಾದ ಪರಿಣಾಮ ಗ್ರಾಹಕರು ಪರದಾಡುವಂತಾಯಿತು.
ನಗರದ ಕೆ.ಆರ್ ಆಸ್ಪತ್ರೆ ಆವರಣದಲ್ಲಿ ಸ್ಥಾಪನೆಗೊಂಡಿದ್ದ ಇಂದಿರಾ ಕ್ಯಾಂಟಿನ್ ನಲ್ಲಿ ಇಂದು ಬೆಳಿಗ್ಗೆ 9.30 ಗಂಟೆಯೊಳಗೆ ಮಾಡಿದ್ದ ಎಲ್ಲಾ ತಿಂಡಿ ಖಾಲಿಯಾಗಿದ್ದ ಪರಿಣಾಮ ರೋಗಿಗಳು, ಅವರನ್ನು ನೋಡಲು ಬಂದಿದ್ದ ಬಂದುಗಳಿಗೆ ತಿಂಡಿ ಸಿಗದೆ ಪರದಾಡಿದರು. ಇಷ್ಟು ಬೇಗ ತಿಂಡಿ ಖಾಲಿಯಾದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ತಿಂಡಿ ನೀಡುವ ಅವಧಿಯನ್ನು ವಿಸ್ತರಿಸುವಂತೆ ಹಾಗೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಿಂಡಿಯನ್ನು ಸಿದ್ಧಪಡಿಸುವಂತೆ ಕ್ಯಾಂಟಿನ್ ವ್ಯವಸ್ಥಾಪಕರಲ್ಲಿ ಮನವಿ ಮಾಡಿದರು.

Leave a Comment