ಸಭೆಗೆಗೈರು : ಕ್ಷೇತ್ರ ಶಿಕ್ಷಣಾಧಿಕಾರಿಗೆ ನೋಟಿಸ್‍ಜಾರಿ

ಹರಪನಹಳ್ಳಿ.ಆ.14;  ತಾಲೂಕುಕ್ಷೇತ್ರ ಶಿಕ್ಷಣಾಧಿಕಾರಿ (ಬಿ.ಇ.ಒ) ಮಂಜುನಾಥಸ್ವಾಮಿಅವರಿಗೆ ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿಯಿಂದ ಆಗಸ್ಟ್ 11 ರಂದು ನೋಟಿಸ್‍ಜಾರಿ ಮಾಡಿದೆ.
ಪಟ್ಟಣದ ಮಿನಿ ವಿಧಾನಸೌಧದಲ್ಲಿಆಗಸ್ಟ್ 10ರಂದು ನಡೆದ ನೆರ ಹಾವಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾಕ್ರಮ ಕೈಗೊಳ್ಳುವ ಸಭೆಗೆ ಹಾಜರಾಗುವ ಕುರಿತುಪತ್ರದಲ್ಲಿ ಸೂಚಿಸಲಾಗಿತ್ತು ಆದರೆ ಮಂಜುನಾಥಸ್ವಾಮಿ(ಬಿ.ಇ.ಒ) ಅವರು ಸಭೆಗೆಹಾಜರಾಗದಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ. ಒಬ್ಬ ಸರ್ಕಾರಿ ನೌಕರರಾಗಿ ಸಭೆಗೆ ಹಾಜರಾಗದೆ ಮೇಲಾಧಿಕಾರಿಗಳ ಆದೇಶವನ್ನುಉಲ್ಲಂಘನೆ ಮಾಡಿರುವುದುತಮ್ಮ ಬೇಜಾವಬ್ದಾರಿತನವೇಕಾರಣಎಂದುಮೇಲ್ನೋಟಕ್ಕೆಕಂಡುಬಂದ ಹಿನ್ನೆಲೆ ನಿಮ್ಮ ಮೇಲೆ ಶಿಸ್ತು ಕ್ರಮಜರುಗಿಸಲು ಈ ನೋಟಿಸ್ ನೀಡಲಾಗಿದೆ.ನೋಟಿಸ್‍ತಲುಪಿ 2 ಗಂಟೆಯೋಳಗೆ ಲಿಖಿತ ಸಮಜಾಯಿಷಿಯನ್ನು ಜಿಲ್ಲಾಧಿಕಾರಿಗಳ ಕಾರ್ಯಲಯಕ್ಕೆ ಸಲ್ಲಿಸಬೇಕುತಪ್ಪಿದ್ದಲ್ಲಿತಾವು ಹೆಳುವುದು ಏನು ಇಲ್ಲವೆಂದು ಭಾವಿಸಿ ನಿಯಮಾನುಸಾರ ಶಿಸ್ತು ಕ್ರಮಜರುಗಿಸಲಾಗುವುದುಎಂದು ತಿಳಿದು ಬಂದಿದೆ.

Leave a Comment