ಸಪ್ತ ಸ್ವರಗಳ ಸಂಗೀತ ಮನಸ್ಸನ್ನು ಹೂವಿನಂತೆ ಅರಳಿಸುತ್ತದೆ ; ಜಿ.ಆರ್ ಚನ್ನಬಸಪ್ಪ

ಚಿತ್ರದುರ್ಗ,ಏ,21 : ಸಪ್ತ ಸ್ವರಗಳ ಸಂಗೀತ ಮನಸ್ಸನ್ನು ಹೂವಿನಂತೆ ಅರಳಿಸುತ್ತದೆ. ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳಿಂದ ಜನರು ರೋಸಿಹೊಗಿದ್ದಾರೆ, ಯಾಂತ್ರಿಕ ಜೀವನದಂತೆ ಜೀವನ ನಡೆಸುತ್ತಿರುವ ಈ ಕಾಲದಲ್ಲಿ ಮನಸ್ಸಿಗೆ ವಿಶ್ರಾಂತಿ ಅವಶ್ಯಕತೆ ಇದೆ, ಮಾತಾ ಪಿತೃ,ಅಣ್ಣ ತಂಗಿ ಭಾಂದ್ಯವ್ಯಗಳು ದೂರಾವಾಗುವ ದಿನಗಳಲ್ಲಿ ನಾವುಗಳು ಜೀವಿಸುತ್ತಿದ್ದೇವೆ, ಸುಮಧುರ ಸಂಗೀತ ಕೇಳುವುದರಿಂದ ಮನಸ್ಸನ್ನು ವಿಶ್ರಾಂತಿಗೊಳಿಸಬಹುದು ಈ ನಿಟ್ಟಿನಲ್ಲಿ ಇಂಚರ ಕಲಾ ಸಂಘ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಇಂಚರ ಸುಗಮ ಸಂಗೀತೋತ್ಸವದಲ್ಲಿ ವಿಶ್ವ ಮಾನವ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಆರ್ ಚನ್ನಬಸಪ್ಪ ಅಧ್ಯಕ್ಷತೆವಹಿಸಿ ಮಾತನಾಡಿದರು.

ಇಂಚರ ಕಲಾ ಸಂಘ ಗಾರೆಹಟ್ಟಿ, ಕನ್ನಡ ಮತ್ತು ಸಂಸ್ಕøತಿ ನಿದೇಶನಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಸಿಬಾರದ ವಿಶ್ವ ಮಾನವ ಸಾಂಸ್ಕøತಿಕ ಮತ್ತು ವಿದ್ಯಾಸಂಸ್ಥೆಯ ಆವರಣದಲ್ಲಿ ಜರುಗಿದ ಇಂಚರ ಸುಗಮ ಸಂಗೀತೋತ್ಸವದಲ್ಲಿ ಕನ್ನಡ ಉಪನ್ಯಾಸಕರಾದ ಎ,ಆರ್ ರಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ಭಾಷೆ ಉಳಿಸಿ ಬೆಳಸುವ ಜವಬ್ದಾರಿ ನಿಮ್ಮಂತಹ ಯುವ ಪೀಳಿಗೆಯಿಂದ ಕೆಲಸವಾಗಬೇಕಿದೆ ಮಾತೃ ಭಾಷೆ ನಮ್ಮುಸಿರು ನಮ್ಮ ಮನೆಗಳನ್ನು ಕಾಳಜಿಯಿಂದ ನೋಡಿಕೊಂಡಂತೆ ನಮ್ಮ ತಾಯ್ನನೆಲದ ಭಾಷೆ ಉಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಜನಪದ ಕಲಾವಿದ ಟಿ,ಚಂದ್ರಪ್ಪ ಮಾತನಾಡಿ ಜನಪದ ಗೀತೆಗಳು ಇಂದು ಸಿನಿಮಾ ಗೀತೆಗಳಾಗಿ ಮಾರ್ಪಡುತ್ತಿದ್ದು ಮೂಲ ಜನಪದ ಗೀತೆಗಳನ್ನು ಕೇಳಿದಾಗ ಅತೀವ ಸಂತಸವಾಗಿತ್ತದೆ.ಈ ಗೀತೆಗಳನ್ನಾಗಲಿ ಜನಪದ ವಾದ್ಯಗಳ ಧ್ವನಿಯನ್ನು ಕೇಳಿದಾಗ ಕುಳಿತ ಪ್ರೇಕ್ಷಕರು ಎದ್ದು ಕುಣ ಯುತ್ತಾರೆ ಎಂದು ತಿಳಿಸಿದರು, ಸಂಗೀತ ಗಾಯಕಿ ತ್ರಿವೇಣ ಹಿರಿಯೂರು,ಕರಿಯಣ್ಣ, ಚಂದ್ರಶೇಖರಶಾಸ್ತ್ರಿ.ಜಯ್ಯಣ್ಣ ಏಕಾಂತಪ್ಪ, ಇವರಿಗೆ ಸನ್ಮಾನಿಸಿದರು. ವಿಶ್ವ ಮಾನವ ಸಾಂಸ್ಕøತಿಕ ಮತ್ತು ವಿದ್ಯಾಸಂಸ್ಥೆಯ ಸದಸ್ಯೆ ಅಬೀದಾಬೇಗಂ, ವಿಶ್ವಮಾನವ ಶಾಲೆಯ ಸಾಂಸ್ಕøತಿಕ ಕಾರ್ಯದರ್ಶಿ ಜಗದೀಶ್, ಇಂಚರ ಕಲಾ ಸಂಘದ ಕಾರ್ಯದರ್ಶಿ ಕೆ,ಇ,ಐಶ್ವರ್ಯ ಮುಂತಾದವರು ವೇದಿಕೆಯಲ್ಲಿದ್ದರು.

ಸಭಾಕಾರ್ಯಕ್ರಮದ ನಂತರ ಏಕಾಂತಪ್ಪ,ಟಿ.ಚಂದ್ರಪ್ಪಕಾಲ್ಕೆರೆ,ತ್ರಿವೇಣ ,ಕರಿಯಣ್ಣ,ಜಯ್ಯಣ್ಣ.ಹೆಚ್,ಚಂದ್ರಶೇಖರಶಾಸ್ತ್ರಿ. ಕೆ.ಇ.ಮನೋರಂಜನ್,  ಕೆ,ಎಸ್.ನವೀನಕುಮಾರ್,ಮುಂತಾದ ಕಲಾವಿದರ  ತಂಡಗಳಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು

Leave a Comment