ಸಪ್ತಪದಿ ತುಳಿದ ೧೭೮ ಜೋಡಿಗಳು

ನಂಜನಗೂಡು. ಜ.೨೨- ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಅಂಗವಾಗಿ ಸುತ್ತೂರು ಕ್ಷೇತ್ರದಲ್ಲಿ ಆಯೋಜಿಸಿದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳದ ಶ್ರೀ ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಈ ಕ್ಷೇತ್ರದಲ್ಲಿ ಮದುವೆಯಾಗುವುದೇ ಪುಣ್ಯ ಯಾವ ಆಡಂಬರ ಮದುವೆಗಿಂತ ಕಮ್ಮಿ ಇಲ್ಲ ತಾಳಿ ಕಟ್ಟುವುದು ಮುಖ್ಯವಲ್ಲ ಜವಾಬ್ದಾರಿಯಿಂದ ನಿನಗೆ ನಾನು ಜವಾಬ್ದಾರಿ ನನಗೆ ನೀನು ಜವಾಬ್ದಾರಿಯೆಂದು ಮಾತನಾಡಿಕೊಂಡು ಬದುಕಬೇಕು. ಈ ರೀತಿ ಸಂಸಾರ ನಡೆದರೆ ಸಮಾಜದಲ್ಲಿ ಗೌರವ ಸಿಗುತ್ತದೆ ಈ ಕ್ಷೇತ್ರ ಬಡವರ ಬದುಕಿನಲ್ಲಿ ಬೆಳಕನ್ನು ತುಂಬುವಕೆಲಸ ಸುತ್ತೂರು ಕ್ಷೇತ್ರದ ನಡೆಸಿಕೊಂಡು ಬರುತ್ತಿದೆ.
ಈ ಕ್ಷೇತ್ರದಲ್ಲಿ ವಿವಾಹವಾದರೂ ಪುಣ್ಯವಂತರು ಶ್ರೀಮಂತಿಕೆಯಿಂದ ಹೆಚ್ಚು ಹೆಚ್ಚು ಹಣ ಖರ್ಚು ಮಾಡಿ ಮದುವೆ ಮಾಡುವುದಕ್ಕಿಂತ ಪುಣ್ಯಕ್ಷೇತ್ರಗಳಲ್ಲಿ ಮದುವೆಯಾಗಿ ಎಲ್ಲರ ಆಶೀರ್ವಾದ ಪಡೆದು ಮದುವೆಯಾಗುವುದೇ ಈ ಕ್ಷೇತ್ರದ ಪುಣ್ಯ ದುಂದುವೆಚ್ಚದ ಮದುವೆ ನಿಲ್ಲಿಸಿ ಸರಳ ಮದುವೆಗೆ ಆದ್ಯತೆ ನೀಡಬೇಕೆಂದು ಈ ಸಂದರ್ಭದಲ್ಲಿ ತಿಳಿಸಿದರು. ಸಾಲದಿಂದ ದೂರವಿರಬೇಕು ಸಾಲ ಬೇಡ ಸರಳ ಮದುವೆ ಬೇಕು ಇತ್ತೀಚಿನ ದಿನಗಳಲ್ಲಿ ಮದುವೆ ಮಾಡುವರು ನಾನೇನು ಹೆಚ್ಚು ಎಂದುಕೊಂಡು ಹೆಚ್ಚೆಚ್ಚು ಹಣ ತಂದು ಮಾಡಿದಿನಗಳಲ್ಲಿ ಮದುವೆ ಮಾಡುವರು ನಾನೇನು ಹೆಚ್ಚು ಎಂದುಕೊಂಡು ಹೆಚ್ಚೆಚ್ಚು ಹಣ ತಂದು ಮದುವೆ ಮಾಡುತ್ತಿದ್ದಾರ ಇದು ನಿಲ್ಲಬೇಕು ಎಂದರು.
ಸುತ್ತೂರು ಕ್ಷೇತ್ರದಲ್ಲಿ ನಡೆದಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಇಂದು ಸಾಮೂಹಿಕವಾಗಿ ಸುಮಾರು ೧೭೮ ಜೋಡಿಗಳು ಸಪ್ತಪದಿ ತುಳಿದರು.
ವಧುವರರಿಗೆ ಸೀರೆ-ಕುಪ್ಪಸ ಪಂಚೆ ಶಲ್ಶ ಮಾಂಗಲ್ಯವನ್ನು ಪ್ರಮಾಣಪತ್ರವನ್ನು ವಿತರಿಸಿದರು.
ಸಾಮೂಹಿಕ ವಿವಾಹದಲ್ಲಿ ಪರಿಶಿಷ್ಟ ಜಾತಿ ೧೦೬ ಜೋಡಿಪರಿಶಿಷ್ಟ ಹಿಂದುಳಿದ ವರ್ಗ ೩೩ ಜೋಡಿ ಅಂತರ್ಜಾತಿ ೧೮ ವಿಡಿಯೋ ವೀರಶೈವ-ಲಿಂಗಾಯತ ಪ್ರಮಾಣಪತ್ರವನ್ನು ವಿತರಿಸಿದರು೧೧ ಪರಿಶಿಷ್ಟ ಪಂಗಡ ೧೦೧೭೮ ರಲ್ಲಿ ವಿಶೇಷತೆಗಳು ತಮಿಳುನಾಡಿನ ಜೋಡಿಗಳು ೨ ಅಂಗವಿಕಲರು ೫ ವಿಧುರ ವಿಧವೆ ೨ ವಿವಾಹವಾದರು.
ನಂತರ ಮಾತಾನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸುತ್ತೂರು ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ ೫೦ವರ್ಷದ ಸಂಬಂಧ ಸುತ್ತೂರು ಕ್ಷೇತ್ರ ವಿಶ್ವಾದ್ಯಂತ ಪ್ರಖ್ಯಾತಿ ಹೊಂದಿದೆ ಯಾವುದೇ ವಿಷಯದಲ್ಲೂ ಹಿಂದೆಬಿದ್ದಿಲ್ಲ ಲಕ್ಷಾಂತರ ಮಕ್ಕಳಿಗೆ ವಿದ್ಯಾಭ್ಯಾಸ ಅನ್ನದಾಸೋಹ ಆರೋಗ್ಯ ತಪಾಸಣೆ ಶಿಕ್ಷಣ ಜಾತಿ ಭೇದವಿಲ್ಲದೆ ಎಲ್ಲ ಜನಾಂಗದವರಿಗೂ ಉಚಿತವಾಗಿ ನೀಡುತ್ತಿದೆ ಓದುವವರಿಗೆ ಮಾಂಗಲ್ಯ ನೀಡುವ ಮೂಲಕ ಆಶೀರ್ವಾದ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳು, ಡಾಕ್ಟರ್ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳು, ಮಾಜಿ ಸಚಿವ ಅಲ್ಲಂ, ವೀರಭದ್ರಪ್ಪ, ವಿಧಾನಪರಿಷತ್ ಸದಸ್ಯ ಜಿ ರಘು ಆಚರ್ ಇನ್ನಿತರರು ಇದ್ದರು.

Leave a Comment