ಸಪ್ತಪದಿ ತುಳಿದ ಕೆಜಿಎಫ್ ವಿಲನ್

ಬೆಂಗಳೂರು, ಏ ೧೬- ಚಂದನವನದಲ್ಲಿ ಹೊಸ ದಾಖಲೆ ಬರೆದ ಕೆಜಿಎಫ್ ಚಿತ್ರದಲ್ಲಿ ಖಳನಟನಾಗಿ ಅಬ್ಬರಿಸಿದ್ದ ಜಾನ್ ಕೊಕೇನ್ ಅವರು ಕೇರಳ ಮೂಲದ ಪ್ರಿಯಾ ರಾಮಚಂದ್ರನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೆಜಿಎಫ್ ಚಿತ್ರದಲ್ಲಿ ಜಾನ್ ಎನ್ನುವ ಖಳನಟನ ಪಾತ್ರದಲ್ಲಿ ಕೊಕೇನ್ ನಟಿಸಿ ಗಮನ ಸೆಳೆದಿದ್ದರು. ಕೋಕೇನ್ ಮೂಲತಃ ಮಲಯಾಳಿ ನಟನಾಗಿದ್ದರೂ ಕನ್ನಡದ ಕೆಜಿಎಫ್ ಸಾಕಷ್ಟು ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕೇರಳದ ವಿಶು ಹಬ್ಬದ ಸಂಭ್ರಮದಂದೇ ಇವರ ವಿವಾಹ ಜರುಗಿದೆ. ಹೊಸ ಜೀವನದ ಹೊಸ್ತಿಲಲ್ಲಿರೋ ಜೋಡಿ, ಮದುವೆ ಸಂಭ್ರಮದಲ್ಲಿ ಸಿಂಪಲ್ ಕಾಟನ್ ಕಾಸ್ಟ್ಯೂಮ್‌ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಜಾನ್-ಪ್ರಿಯಾ ದಂಪತಿಗೆ ಚಿತ್ರರಂಗದಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಮೂಲತಃ ಮಲಯಾಳಿಯಾಗಿರೋ ಜಾನ್, ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದರು. ನಂತರ ಸ್ಯಾಂಡಲ್‌ವುಡ್‌ಗೆ ಜೇಕಬ್ ವರ್ಗಿಸ್ ನಿರ್ದೇಶನದ ಪುನೀತ್ ರಾಜ್‌ಕುಮಾರ್ ನಟನೆಯ ಪೃಥ್ವಿ ಸಿನಿಮಾದ ಮೂಲಕ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದಿದ್ದರು. ಮುಂದೆ ದರ್ಶನ್ ಅಭಿನಯದ ಶೌರ್ಯ, ಶಿವಣ್ಣ ಜೊತೆಗೆ ಮೈಲಾರಿ, ಸೂರಿ ನಿರ್ದೇಶನದ ಅಣ್ಣಾಬಾಂಡ್ ಹೀಗೆ ಹಲವು ಸಿನಿಮಾಗಳಲ್ಲಿ ತಮ್ಮ ನಟನೆ ಮೂಲಕ ಹೆಸ್ರು ಮಾಡಿದ್ದಾರೆ. ಸದ್ಯ ಯುವರತ್ನ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಈ ವಿಲನ್‌ಗೆ ಸಖತ್ ಬೇಡಿಕೆಯಿದೆ.

Leave a Comment