ಸನ್‌ಟ್ಯಾನ್ ಗೆ ಮನೆಮದ್ದು

ಬಿಸಿಲಿಗೆ ಮೈಯೊಡ್ಡಿದರೆ ಅಥವಾ ಬಿರು ಬಿಸಿಲಿಗೆ ಹೊರಗಡೆ ಹೋದರೆ ಆಗ ಮುಖದ ಚರ್ಮದ ಕಾಂತಿಯು ಕುಂದುವುದು ಮತ್ತು ಕಪ್ಪು ಕಲೆಯು ಕಾಣಿಸಿಕೊಳ್ಳುವುದು. ಅದರಲ್ಲೂ ಬೇಸಿಗೆ ಕಾಲದಲ್ಲಿ ಬಿಸಿಲು ಅತಿಯಾಗಿ ಇರುವ ಕಾರಣದಿಂದಾಗಿ ಚರ್ಮದ ಬಣ್ಣ ಕುಂದುವುದು ಸಹಜ. ಹೀಗಾಗಿ ಮನೆಯಿಂದ ಹೊರಗಡೆ ಹೋಗಬೇಕಾದರೆ ಸನ್ ಸ್ಕ್ರೀನ್ ಹಾಕಿಕೊಂಡು ಹೋಗಬೇಕು ಎಂದು ಹೇಳಲಾಗುತ್ತದೆ. ಸನ್ ಸ್ಕ್ರೀನ್ ಹಾಕಿಕೊಂಡರೆ ಅದು ಬಿಸಿಲಿನಿಂದ ಚರ್ಮಕ್ಕೆ ಆಗುವಂತಹ ಹಾನಿ ತಪ್ಪಿಸುವುದು.

  • ಬಿಸಿಲಿನ ಕಲೆ ನಿವಾರಣೆಗೆ ಇತರ ವಿಧಾನಗಳು
  • ಮನೆಯಿಂದ ಹೊರಗಡೆ ಹೋಗುವ ಮೊದಲು ಸನ್ ಸ್ಕ್ರೀನ್ ಹಚ್ಚಿಕೊಳ್ಳಿ.
  • ಬಿಸಿಲಿಗೆ ಹೋಗುವ ವೇಳೆ ನೀವು ಸಂಪೂರ್ಣವಾಗಿ ಬಟ್ಟೆಯಿಂದ ಮುಖ ಮುಚ್ಚಿಕೊಳ್ಳಿ.
  • ಯಾವಾಗಲೂ ಬಿಸಿಲಿಗೆ ಹೋಗುವ ವೇಳೆ ಛತ್ರಿ ಬಳಸಿಕೊಳ್ಳಿ.
  • ಬೇಸಗೆಯಲ್ಲಿ ನೀವು ಮುಖ್ಯವಾಗಿ ಸನ್ ಗ್ಲಾಸ್ ಮತ್ತು ಸ್ಕ್ರಾಪ್ ಬಳಸಲು ಮರೆಯಬೇಡಿ.

ಆದರೆ ಬಿಸಿಲಿನಿಂದ ಆಗಿರುವಂತಹ ಕಲೆ ಮತ್ತು ಚರ್ಮವು ಕಲೆಗುಂದುವುದನ್ನು ತಡೆಯಲು ಏನು ಮಾಡಬೇಕು ಎನ್ನುವ ಪ್ರಶ್ನೆಯು ಮೂಡುವುದು. ಇದಕ್ಕಾಗಿ ಹಲವಾರು ಮಂದಿ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಹಾಗೂ ಲೋಷನ್ ಗಳನ್ನು ಬಳಕೆ ಮಾಡಿಕೊಳ್ಳುವರು. ಇನ್ನು ಕೆಲವರು ಪಾರ್ಲರ್ ಗೆ ಹೋಗಿ ಮುಖದ ಮೇಲೆ ಕಲೆ ನಿವಾರಣೆ ಮಾಡಲು ಪ್ರಯತ್ನಿಸುವರು.

ಆದರೆ ಮನೆಯಲ್ಲೇ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಮುಖದ ಮೇಲೆ ಬಿಸಿಲಿನಿಂದ ಆಗಿರುವಂತಹ ಕಲೆ ನಿವಾರಣೆ ಮಾಡಬಹುದು. ಮನೆಯಲ್ಲೇ ಬಿಸಿಲಿನ ಕಲೆ ನಿವಾರಣೆಗೆ ಸ್ಕ್ರಬ್ ಅಥವಾ ಪ್ಯಾಕ್ ಮಾಡಿಕೊಳ್ಳಬಹುದು. ನೈಸರ್ಗಿಕದತ್ತವಾದ ಸಾಮಗ್ರಿಗಳನ್ನು ಬಳಸಿಕೊಂಡು ತಯಾರಿಸಿಕೊಳ್ಳುವ ಈ ಪ್ಯಾಕ್ ಅಥವಾ ಫೇಸ್ ಪ್ಯಾಕ್ ನಿಂದ ತ್ವಚೆಗೆ ಮತ್ತೆ ಕಾಂತಿ ತರಬಹುದು.

ಲಿಂಬೆ ರಸ, ಸೌತೆಕಾಯಿ ಮತ್ತು ರೋಸ್ ವಾಟರ್

ತ್ವಚೆಯಲ್ಲಿ ಬಿಸಿಲಿನಿಂದಾಗಿ ಮೂಡಿರುವಂತಹ ಕಲೆ ನಿವಾರಣೆ ಮಾಡಲು ಲಿಂಬೆರಸ, ಸೌತೆಕಾಯಿ ಮತ್ತು ರೋಸ್ ವಾಟರ್ ಬಳಕೆ ಮಾಡಬಹುದು. ಈ ಮೂರು ಸಾಮಗ್ರಿಗಳು ಅದ್ಭುತವಾಗಿ ಕೆಲಸ ಮಾಡಲಿದೆ. ಲಿಂಬೆರಸವು ಚರ್ಮವನ್ನು ಬಿಳಿಗೊಳಿಸಿ ಕಲೆ ನಿವಾರಣೆ ಮಾಡುವುದು. ಸೌತೆಕಾಯಿಯು ಚರ್ಮಕ್ಕೆ ತಂಪನ್ನು ನೀಡುವುದು, ಅದೇ ರೋಸ್ ವಾಟರ್ ಚರ್ಮಕ್ಕೆ ಹಲವಾರು ವಿಧದಲ್ಲಿ ಸುಧಾರಣೆ ಮಾಡುವುದು. ಇದಕ್ಕಾಗಿ ನೀವು ಸ್ವಲ್ಪ ಸೌತೆಕಾಯಿ ತಿರುಳು ತೆಗೆದುಕೊಳ್ಳಿ ಮತ್ತು ಇದಕ್ಕೆ ಒಂದು ಚಮಚ ಲಿಂಬೆರಸ ಹಾಕಿ ಮತ್ತು ಒಂದು ಚಮಚ ರೋಸ್ ವಾಟರ್. ಎಲ್ಲವನನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳೀ ಮತ್ತು ಈ ಮಿಶ್ರಣವನ್ನು ಬಾಧಿತ ಜಾಗಕ್ಕೆ ಸರಿಯಾಗಿ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ೧೫ ನಿಮಿಷ ಕಾಲ ಹಾಗೆ ಬಿಡಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ. ಪ್ರತಿನಿತ್ಯವು ಈ ಪ್ಯಾಕ್ ನ್ನು ಬಳಸಿಕೊಳ್ಳಿ. ಇದು ಚರ್ಮಕ್ಕೆ ಹಲವಾರು ರೀತಿಯಲ್ಲಿ ಲಾಭಗಳನ್ನು ನೀಡುವುದು.

ಬಿಸಿಲಿನಿಂದ ಆದ ಕಲೆ ನಿವಾರಣೆಗೆ ಅರಿಶಿನ

ಅರಿಶಿನದಿಂದ ಸಿಗುವಂತಹ ಆರೋಗ್ಯ ಲಾಭಗಳ ಬಗ್ಗೆ ನಮಗೆ ಈಗಾಗಲೇ ತಿಳಿದೇ ಇದೆ. ಅದೇ ರೀತಿಯಲ್ಲಿ ಅರಶಿನವು ಸೌಂದರ್ಯವರ್ಧಕವಾಗಿಯೂ ಹಲವಾರು ಉತ್ಪನ್ನಗಳಲ್ಲಿ ಬಳಸಿಕೊಳ್ಳಲಾಗುತ್ತದೆ. ಇದರಿಂದ ತ್ವಚೆಗೆ ತುಂಬಾ ಲಾಭಗಳು ಇವೆ. ಇದು ಬಿಸಿಲಿನಿಂದ ಆಗಿರುವ ಕಲೆ ತೆಗೆದುಹಾಕುವುದು.

ಇದಕ್ಕಾಗಿ ನೀವು ನೈಸರ್ಗಿಕವಾದ ಕೆಲವೊಂದು ಫೇಸ್ ಪ್ಯಾಕ್ ಬಳಸಿಕೊಳ್ಳಬಹುದು. ಅರ್ಧ ಚಮಚ ಅರಶಿನ ತೆಗೆದುಕೊಳ್ಳಿ ಮತ್ತು ಇದಕ್ಕೆ ಲಿಂಬೆರಸ ಈಗ ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು ಈ ಮಿಶ್ರಣವು ಸರಿಯಾಗಿ ಒಣಗಲಿ. ಇದರ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ. ನೈಸರ್ಗಿಕ ಅರಿಶಿನ ಹುಡಿ ಬಳಕೆ ಮಾಡಿದರೆ ಆಗ ಇದು ಅತ್ಯುತ್ತಮವಾದ ಫಲಿತಾಂಶ ನೀಡುವುದು.

ಕಡಲೆಹಿಟ್ಟು, ಟೊಮೆಟೋ ಜ್ಯೂಸ್ ಮತ್ತು ಅಲೋವೆರಾ ಬಳಸಿ ಬಿಸಿಲಿನ ಕಲೆ ನಿವಾರಣೆ

ಕಡಲೆಹಿಟ್ಟನ್ನು ಸತ್ತ ಚರ್ಮ ಕಿತ್ತು ಹಾಕಲು ಪ್ರಮುಖ ಸಾಮಗ್ರಿಯಾಗಿ ಬಳಕೆ ಮಾಡಲಾಗುತ್ತದೆ. ಇದು ಚರ್ಮದಲ್ಲಿ ಇರುವಂತಹ ಸತ್ತ ಚರ್ಮ ಮತ್ತು ಕಲ್ಮಶವನ್ನು ತೆಗೆದು ಹಾಕುವುದು. ಚರ್ಮದ ರಂಧ್ರಗಳಲ್ಲಿ ಜಮೆಯಾಗಿರುವಂತಹ ಕೊಳೆಯನ್ನು ಇದು ತೆಗೆಯುವುದು. ಟೊಮೆಟೋ ಜ್ಯೂಸ್ ನಲ್ಲಿ ಚರ್ಮವನ್ನು ಬಿಳಿಗೊಳಿಸುವ ಗುಣಗಳು ಇದೆ. ಇದು ಚರ್ಮವನ್ನು ನಯವಾಗಿಸುವುದು.

ಇದು ಚರ್ಮಕ್ಕೆ ನೈಸರ್ಗಿಕ ಕಾಂತಿ ನೀಡುವುದು. ಇನ್ನೊಂದು ಕಡೆ ಅಲೋವೆರಾದಲ್ಲಿ ಚರ್ಮದ ಆರೋಗ್ಯಕ್ಕೆ ಬೇಕಾಗಿರುವಂತಹ ಹಲವಾರು ಲಾಭಗಳು ಇವೆ. ಎರಡು ಚಮಚ ಕಡಲೆಹಿಟ್ಟು, ಒಂದು ಚಮಚ ಅಲೋವೆರಾ ಮತ್ತು ಟೊಮೆಟೋ ಜ್ಯೂಸ್ ಒಂದು ಚಮಚ ತೆಗೆದುಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಚರ್ಮಕ್ಕೆ ಹಚ್ಚಿಕೊಳ್ಳಿ ಮತ್ತು ೧೦-೧೫ ನಿಮಿಷ ಕಾಲ ಇದು ಹಾಗೆ ಇರಲಿ. ಹತ್ತು ನಿಮಿಷ ಬಿಟ್ಟು ಇದನ್ನು ತೆಗೆಯುವ ಮೊದಲು ಸರಿಯಾಗಿ ಸ್ಕ್ರಬ್ ಮಾಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ಎರಡು ದಿನಕ್ಕೊಮ್ಮೆ ಈ ಫೇಸ್ ಪ್ಯಾಕ್ ಬಳಸಿ. ಮುಖ ತೊಳೆದುಕೊಂಡ ಬಳಿಕ ಮೊಶ್ಚಿರೈಸರ್ ಹಚ್ಚಿಕೊಳ್ಳಿ.

ಲಿಂಬೆ ಮತ್ತು ಸಕ್ಕರೆ ಸ್ಕ್ರಬ್

ತ್ವಚೆಯು ಕಾಂತಿಯುತವಾಗಿ ಹೊಳೆಯಲು ಸುಲಭವಾಗಿ ತಯಾರಿಸಬಹುದಾದ ಈ ಸ್ಕ್ರಬ್ ನ್ನು ಬಳಸಿಕೊಳ್ಳಿ. ಈ ಸರಳ ಸಾಮಗ್ರಿಗಳು ಬಿಸಿಲಿನಿಂದ ಆಗಿರುವ ಕಲೆ ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ಸಕ್ಕರೆ ತೆಗೆದುಕೊಳ್ಳಿ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವು ಇದರ ಪ್ರಮಾಣವನ್ನು ಹೆಚ್ಚು ಮಾಡಿಕೊಳ್ಳ ಬಹುದು. ಇದನ್ನು ಮುಖಕ್ಕೆ ಎರಡು ನಿಮಿಷ ಕಾಲ ಸರಿಯಾಗಿ ಸ್ಕ್ರಬ್ ಮಾಡಿಕೊಂಡು ಚರ್ಮವನ್ನು ಸ್ವಚ್ಛ ಮಾಡಿಕೊಳ್ಳಿ. ಸ್ವಲ್ಪ ಸಮಯ ಮುಖದಲ್ಲಿ ಹಾಗೆ ಬಿಟ್ಟು ಬಳಿಕ ತಾಜಾ ನೀರಿನಿಂದ ಮುಖ ತೊಳೆಯಿರಿ.

Leave a Comment