ದಾಖಲೆ ಇಲ್ಲದ 70 ಆಟೋ ವಶ

ಹುಬ್ಬಳ್ಳಿ,ಜು 13- ಇಂದು ಬೆಳ್ಳಂಬೆಳಿಗ್ಗೆ ತೀವ್ರ ಕಾರ್ಯಾಚರಣೆ ನಡೆಸಿದ ಆರ್.ಟಿ.ಓ ಹಾಗೂ ಪೊಲೀಸರು ದಾಖಲೆ ಇಲ್ಲದ 70 ಕ್ಕೂ ಅಧಿಕ ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಚೆನ್ನಮ್ಮ ವೃತ್ತ ಹಾಗೂ ಕಾರವಾರ ರಸ್ತೆಯಲ್ಲಿ ಆರ್.ಟಿ.ಓ ಹಾಗೂ ಪೊಲೀಸ್ ಅಧಿಕಾರಿಗಳು ಬೆಳಿಗ್ಗೆ ಕಾರ್ಯಾಚರಣೆ ನಡೆಸಿದಾಗ ಸುಮಾರು 70 ಕ್ಕೂ ಹೆಚ್ಚು ಆಟೋಗಳು ದಾಖಲೆ ಇಲ್ಲದೆ ಎಲ್ಲೆಂದರಲ್ಲಿ ನಗರದಲ್ಲಿ ಸಂಚರಿಸುವದು ಬೆಳಕಿದೆ ಬಂದಿದೆ.
ಡ್ರೈವಿಂಗ್ ಲೈಸೆನ್ಸ್ ಪರ್ಮಿಟ್ ಇನ್ನಿತರ ದಾಖಲೆಗಲು ಇಲ್ಲದ ಹಿನ್ನಲೆ ಈ ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಾಳಿ ನಡೆಸಿದ ಅಧಿಕಾರಿಗಳ ಮೂಲಗಳು ಸ್ಪಷ್ಟಪಡಿಸಿವೆ.
ಈಚೆಗೆ ಟ್ರಾಫಿಕ್ ನಿಯಮ ಉಲ್ಲಂಘಿಸಿ ಎಲ್ಲೆಂದರಲ್ಲಿ ಸಂಚರಿಸುತ್ತಿರುವ ಆಟೋಗಳ ಆಟಾಟೋಪವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಿದ ತಂಡ ದಾಖಲೆ ಇಲ್ಲದ 70 ಆಟೋಗಳನ್ನು ವಶಕ್ಕೆ ಪಡೆದಿವೆ.
ಇದಲ್ಲದೆ ದಾಖಲೆ ಹೊಂದಿ ನಿಯಮ ಉಲ್ಲಂಘನೆ ಮಾಡುತ್ತಿರುವ ಆಟೋಗಳಿಗೆ ಕೂಡ ಅಧಿಕಾರಿಗಳು ಸ್ಥಳದಲ್ಲಿಯೇ ದಂಡ ವಿಧಿಸುತ್ತಿದ್ದಾರೆ.
ಈ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Comment