ಸನಾತನ ಕಾಲದ ಭಾರತೀಯ ಸಂಸ್ಕೃತಿ ವಿಶ್ವದಲ್ಲಿಯೇ ಉತ್ತಮ

ಪಿರಿಯಾಪಟ್ಟಣ, ಸೆ.11- ಸನಾತನ ಕಾಲದ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಗೆ ವಿಶ್ವದಲ್ಲಿಯೇ ಉತ್ತಮ ಹೆಸರಿದೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಗೊರಳ್ಳಿ ಜಗದೀಶ್ ಹೇಳಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ತಾಲ್ಲೂಕು ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ವತಿಯಿಂದ ನಡೆದ 4 ನೇ ವರ್ಷದ ಮುದ್ದುಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಧರ್ಮವನ್ನು ರಕ್ಷಿಸಿ ಅಧರ್ಮವನ್ನು ಮಣಿಸಲು ವಿವಿಧ ಅವತಾರಗಳನ್ನು ತಾಳಿದ ಶ್ರೀ ಕೃಷ್ಣನಿಗೆ ದ್ವಾಪರ ಯುಗದಲ್ಲಿ ಮಹತ್ವದ ಸ್ಥಾನವಿತ್ತು ಎಂದರು.
ರೋಟರಿ ವಲಯ ಸೇನಾನಿ ಡಾ.ಪ್ರಕಾಶ್‍ಬಾಬುರಾವ್ ಮಾತನಾಡಿ ತಾಲ್ಲೂಕಿನ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಕಳೆದ 4 ವರ್ಷಗಳಿಂದಲೂ ಸ್ಪರ್ಧೆ ಆಯೋಜಿಸುತ್ತಿದ್ದು ಸಮಾಜಮುಖಿ ಕೆಲಸ ಕಾರ್ಯಗಳಿಗೆ ಮುಂದಿನ ದಿನಗಳಲ್ಲೂ ಸಾರ್ವಜನಿಕರ ಬೆಂಬಲ ಹಾಗೂ ಸಹಕಾರ ಬೇಕಿದೆ ಎಂದರು.
ರೋಟರಿ ಮಿಡ್‍ಟೌನ್, ಲಕ್ಷ್ಮೀ ಹೆಲ್ತ್‍ಕೇರ್ ಸೆಂಟರ್, ಕನ್ನಡ ಸಾಹಿತ್ಯ ಪರಿಷತ್, ಸ್ಫೂರ್ತಿ ಸ್ವಾವಲಂಬಿ ಟ್ರಸ್ಟ್, ಶೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಅಳಿಲು ಸೇವಾ ಸಂಸ್ಥೆ, ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ, ಸಂಕಲ್ಪ ನೃತ್ಯ ಶಾಲೆ ಹಾಗೂ ಹೌಸಿಂಗ್‍ಬೋಡ್ ನಿವಾಸಿಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ 1 ವರ್ಷದಿಂದ 10 ವರ್ಷದೊಳಗಿನ ಮಕ್ಕಳು ಧರಿಸಿದ್ದ ಕೃಷ್ಣ, ರಾಧೆ, ರಾಧಕೃಷ್ಣ, ಛದ್ಮವೇಷ ನೆರದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು. ಸುಮಾರು 100ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಪ್ರಥಮ, ದ್ವಿತೀಯ ಹಾಗೂ ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೂ ನೆನಪಿನ ಕಾಣಿಕೆ ಹಾಗೂ ಬಹುಮಾನ ವಿತರಿಸಲಾಯಿತು. ಸಂಕಲ್ಪ ನೃತ್ಯ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಕೆ.ಆರ್.ನಿರೂಪ, ಪುರಸಭಾ ಸದಸ್ಯರಾದ ಹೆಚ್.ಕೆ.ಮಂಜುನಾಥ್, ಜಿ.ನಿರಂಜನ್, ಸಿಡಿಪಿಒ ಶ್ವೇತ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಅಂಬ್ಲಾರೆ ಬಸವೇಗೌಡ, ಆಶಾಮಹದೇವ್‍ರಾವ್, ಧನಂಜಯ್, ಆಲನಹಳ್ಳಿಕೆಂಪರಾಜು, ಸತೀಶ್‍ಆರಾಧ್ಯ, ಸಿ.ಎನ್.ವಿಜಯ್, ಪಿ.ಎನ್.ಸುಬ್ರಮಣ್ಯ, ರಮೇಶ್, ಇಂದಿರಾ, ಆಶಾ ಮತ್ತಿತರಿದ್ದರು.

Leave a Comment