ಸಧೃಡ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಪಾತ್ರ ಮಹತ್ವದ್ದು: ನ್ಯಾ. ಹಂದ್ರಾಳ್

ಬಳ್ಳಾರಿ, ಸೆ.14: ಸ್ವಸ್ಥ ಮತ್ತು ಸಧೃಡ ಸಮಾಜ ನಿರ್ಮಾಣದಲ್ಲಿ ಶಿಕ್ಷಣ ಪಾತ್ರ ಅತ್ಯಂತ ಮಹತ್ವದ್ದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ. ಹಂದ್ರಾಳ್ ಅವರು ಹೇಳಿದರು.

ಅವರು ಹಡಗಲಿ ಪಟ್ಟಣದ ಕಾರ್ಮೆಲ್ ಸೇವಾ ಸದನದಲ್ಲಿ ಬಾಲ್ಯಾವಸ್ಥೆ ಹಾಗೂ ಕಿಶೋರಾವ್ಯಸ್ಥೆ ಕಾರ್ಮಿಕ ಪದ್ದತಿ ನಿರ್ಮೂಲನೆ ಕಾಯ್ದೆ ಕುರಿತು ಆಶಾ ಕಾರ್ಯಕರ್ತೆಯರಿಗೆ ಇತ್ತೀಚೆಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಶಿಕ್ಷಣ ಪಡೆಯುವುದು ಪ್ರತಿ ಮಗುವಿನ ಹಕ್ಕು ಮತ್ತು ಪೋಷಕರು ಮಕ್ಕಳನ್ನು ಶಾಲೆಯನ್ನು ಬಿಡಿಸಿ ಬಾಲಕಾರ್ಮಿಕನ್ನಾಗಿ ಮಾಡದೇ ಶಿಕ್ಷಣವಂತರಾನ್ನಾಗಿ ಮಾಡಬೇಕೆಂದು ಹೇಳಿದ ನ್ಯಾ.ಹಂದ್ರಾಳ್ ಅವರು, ಎಷ್ಟೇ ಕಷ್ಟವಿದ್ದರೂ ಮಕ್ಕಳಿಗೆ ಶಿಕ್ಷಣದ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಿಂದೆ ಸರಿಯದಂತೆ ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.

ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ್ ಬಾಲಕಾರ್ಮಿಕ ಹಾಗೂ ಕಿಶೋರಾ ಕಾರ್ಮಿಕ ನಿರ್ಮೂಲನೆ ಕಾಯ್ದೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಗೇಡ್-2 ತಹಶೀಲ್ದಾರರಾದ ಪ್ರಭಾಕರ ಅವರು ಅಧ್ಯಕ್ಷತೆ ವಹಿಸಿದ ಮಾತನಾಡಿದರು. ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಕ್ಷೇತ್ರಾಧಿಕಾರಿ ಪಿ.ಎಂ. ಈಶ್ವರಯ್ಯ ನಿರೂಪಿಸಿದರು. ಹಡಗಲಿಯ ಕಾಮೇಲ್ ಜ್ಯೋತಿ ಬಾಲಕಾರ್ಮಿಕರ ವಿಶೇಷ ತರಬೇತಿ ಕೇಂದ್ರದ ಶಿಕ್ಷಕ ರಮೇಶ್ ವಂದಿಸಿದರು.

ಹಡಗಲಿಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ರಾಮಕೃಷ್ಣ, ಚನ್ನಬಸಪ್ಪ ಪಾಟೇಲ್, ಹೆನ್ರಿಮಾರೇಸ್, ಶಿವಕುಮಾರ್ ಹಾಗೂ ಹಡಗಲಿಯ ಸಿ.ಆರ್.ಪಿ ಚನ್ನಪ್ಪಗೌಡ ಸೇರಿದಂತೆ ಆಶಾ ಕಾರ್ಯಕತೆಯರು ಇದ್ದರು,

Leave a Comment