ಸದ್ಗುಣಗಳನ್ನು ಬೆಳೆಸಿಕೊಳ್ಳಿ : ಬಸವನಾಗಿದೇವ ಸ್ವಾಮೀಜಿ

ಹಿರಿಯೂರು.ಡಿ.6- ಸಮುದಾಯಗಳನ್ನು ಮಠ ಪೀಠಗಳು ಜಾಗೃತಿ ಗೊಳಿಸುವ ಕೆಲಸ ಮಾಡಬೇಕು ಎಂದು ಚಿತ್ರದುರ್ಗ ಚಲುವಾದಿ ಮಹಾಸಂಸ್ಥಾನದ ಶ್ರೀ ಬಸವನಾಗಿ ದೇವ ಸ್ವಾಮೀಜಿ ಹೇಳಿದರು. ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಮಹಾ ಶಿವಶರಣ ಹರಳಯ್ಯ ಗುರು ಪೀಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಜ್ಞಾನದ ಬೆಳಕು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ಮನುಜ ದುರ್ಗುಣಗಳ್ನ ತ್ಯಜಿಸಿ ಸದ್ಗುಣದ ಮಾರ್ಗದಲ್ಲಿ ನಡೆಯ ಬೇಕು, ಪ್ರಕೃತಿಯಲ್ಲಿ ಗುಣ ಸ್ವಭಾವವಿರುವ ಜ್ಞಾನಿ, ಶರಣ ಎನಿಸಿಕೊಂಡವರ ಮಾರ್ಗದರ್ಶನದಲ್ಲಿ ಸಾಥ್ವಿಕರಾಗಿ ಬಾಳಿ, ಮಾನವೀಯ ಮೌಲ್ಯಗಳನ್ನು ಹೊಂದಬೇಕು, ನಿಸ್ವಾರ್ಥತೆ ಇದಲ್ಲಿ ಮಾತ್ರ ಪ್ರಮಾಣ ಕತೆ ಬರಲು ಸಾಧ್ಯ, ನಮ್ಮಲ್ಲಿ ಅಂಟಿಕೊಂಡಿರುವ ಕೆಟ್ಟ ಗುಣಗಳನ್ನು ಬಿಟ್ಟು ಸಮಾಜದಲ್ಲಿ ಉತ್ತಮವಾದ ಕೆಲಸ ಮಾಡಿ ಅವಿದ್ಯೆ, ಅಸ್ಮಿತೆ ಬಿಟ್ಟು ಭಗವಂತನಲ್ಲಿ ಸೇವಕನಾಗಿ ಕೆಲಸ ಮಾಡಿ. ಈ ಮಠ ಈ ಭಾಗದಲ್ಲಿರುವ ಎಲ್ಲಾ ಸಮುದಾಯದವರಿಗೆ ಜ್ಞಾನದ ಬೆಳಕು ಮೂಡಿಸಿ ಆದರ್ಶ ಕಾರಿ ಕೆಲಸಗಳನ್ನು ಮಾಡಲಿ ಎಂದು ಹೇಳಿದರು. ಮುಖ್ಯ ಅಥಿತಿಯಾಗಿ ಅಸಿನರಾಗಿದ್ದ ಸಾಹಿತಿ ನಾಗರಾಜ್‍ಸಂಗಂ ಮಾತನಾಡಿ ದೃಶ್ಯ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯನಿರ್ವಹಿಸಬೇಕು ಎಂದರು, ತಂದೆ ತಾಯಿಗಳು ಮಕ್ಕಳಿಗೆ ಒಳ್ಳೆಯ ಗುಣ ಸಂಸ್ಕಾರಗಳನ್ನು ಕಲಿಸಬೇಕೆಂದರು, ಶ್ರೀ ಮಹಾ ಶಿವಶರಣ ಹರಳಯ್ಯ ಗುರು ಪೀಠದ ಪೀಠಾಧ್ಯಕ್ಷ ಶೀ ಬಸವ ಹರಳಯ್ಯಸ್ವಾಮಿ ಮಾತನಾಡಿ ಎಷ್ಟು ಕಾಲ ಕಲ್ಲು ನೀರಿನೊಳಗಿದ್ದರೇನು ನೆನೆದು ಮೃದುವಾಗಬಲ್ಲದೇ, ಹಾಗೆಯೇ ಭಕ್ತಿ ಜ್ಞಾನ ವೈರಾಗ್ಯ ಯಾರ ಬದುಕಲ್ಲಿ ನೆಲೆ ನಿಲ್ಲುವುದಿಲ್ಲವೋ ಅವರಲ್ಲಿ ಎಷ್ಟೇ ಸಂಪತ್ತು, ವಿದ್ಯೆ, ಜ್ಞಾನ ಇದ್ದರು ನೀರಿನೊಳಗಿನ ಕಲ್ಲಿನಂತೆಯೇ ಇರುತ್ತದೇ ಎಂದರು. ಕಾರ್ಯಕ್ರಮದಲ್ಲಿ ಲಲಿತಾಕೃಷ್ಣಮೂರ್ತಿ, ಎನ್.ನಾಗರಾಜು, ಭರಂಪುರ ರಂಗಸ್ವಾಮಿ, ಶಶಿಕಲಾ, ದೇವೆಂದ್ರಪ್ಪ, ಮೂರ್ಕಣಪ್ಪ, ಮತ್ತಿತರರು ಪಾಲ್ಗೊಂಡಿದ್ದರು.

Leave a Comment