ಸದನದಲ್ಲಿ ಗದ್ದಲ -ಡೌನ್ ಡೌನ್ ಬಿಜೆಪಿ ಎಂದು ದಿಕ್ಕಾರ ಕೂಗಿದ ಕೈ ನಾಯಕರು

ಬೆಂಗಳೂರು : ಕಳೆದ ನಿನ್ನೆ ರಾತ್ರೋರಾತ್ರಿ ಹೋಟೆಲ್ ನಿಂದ ಎಸ್ಕೇಪ್ ಆಗಿದ್ದ ಶ್ರೀಮಂತ ಪಾಟೀಲ್ ಅವರನ್ನು ಲಕ್ಷ್ಮಣ್ ಸವದಿ ಅವರು ಏರ್ಪೋರ್ಟ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸುತ್ತಿರುವ ಪೋಟೋಗಳನ್ನು ಸದನದಲ್ಲಿ ಹಂಚಿಕೊಂಡ ದೋಸ್ತಿಯ ನಾಯಕರು, ಸ್ಪೀಕರ್ ಮುಂದೆ ಹೊಸ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದರು. ಡೌನ್ ಡೌನ್ ಬಿಜೆಪಿ ಎನ್ನುವ ಮೂಲಕ ಇದಕ್ಕೆ ಉತ್ತರಿಸುವಂತೆ ಸದನದಲ್ಲಿ ಗದ್ದಲ ಕೋಲಾಹಲವನ್ನು ಎದ್ದೇಳಿಸಿದರು.

ಇಂದು ವಿಧಾನಮಂಡಲದ ಮಧ್ಯಾಹ್ನದ ಸದನ ಆರಂಭವಾಗುತ್ತಿದ್ದಂತೆ, ರಾಜ್ಯಪಾಲರ ಸಂದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನ ಹೆಚ್ ಕೆ ಪಾಟೀಲ್ ಇದು ಸರಿಯಲ್ಲ. ಅವರು ಗೌರವಯುತವಾಗಿ ನಡೆದುಕೊಳ್ಳುವಂತೆ ಕೈ ಮುಗಿದು ಬೇಡಿಕೊಂಡರು.

ಈ ಮಧ್ಯೆ ಅಡ್ವಕೇಟ್ ಜನರಲ್ ಅವರನ್ನು ಸ್ಪೀಕರ್ ರಮೇಶ್ ಕುಮಾರ್ ಭೇಟಿ ಮಾಡಲು ತೆರಳುತ್ತಿದ್ದಂತೆ, ಉಪಸಭಾಪತಿಯವರು ಕಲಾಪವನ್ನು ಮುಂದುವರೆಸಿದರು. ಈ ವೇಳೆ ಕಳೆದ ನಿನ್ನೆ ರಾತ್ರೋ ರಾತ್ರಿ ಎಸ್ಕೇಪ್ ಆಗಿರುವ ಶ್ರೀಮಂತ ಪಾಟೀಲ್ ಅವರು ಏರ್ಪೋರ್ಟ್ ಮೂಲಕ ತೆರಳುತ್ತಿರುವಾಗ ಲಕ್ಷ್ಮಣ್ ಸವದಿಯವರು ಭೇಟಿಯಾಗಿ ಕರೆದೊಯ್ಯುತ್ತಿರುವ ಪೋಟೋ ಉಪಸಭಾಪತಿಗೆ ತೋರಿಸಿದ ಪ್ರೀಯಾಂಕ್ ಖರ್ಗೆ, ಇದಕ್ಕೆ ಏನ್ ಉತ್ತರಿಸ್ತೀರಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಸದನದ ಭಾವಿಗೆ ಇಳಿದ ಕಾಂಗ್ರೆಸ್ ನಾಯಕರು, ಶಾಸಕರನ್ನು ಕಿಡ್ನಾಪ್ ಮಾಡುತ್ತಿರುವ ಬಿಜೆಪಿಗೆ ಧಿಕ್ಕಾರ ಧಿಕ್ಕಾರ ಎಂದು ಘೋಷಣೆ ಕೂಗಿ, ಧಿಕ್ಕಾರ ಎಂದು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಎದ್ದ ಕಾರಣ, ಉಪಸಭಾಪತಿಗಳು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.

Leave a Comment