ಸತ್ಯ ಸುಳ್ಳಿನ ನಡುವೆ..

ಇತ್ತೀಚಿನ ದಿನಗಳಲ್ಲಿ ಪ್ರಯೋಗಾತ್ಮ ಚಿತ್ರಗಳತ್ತ ಗಮನ ಹರಿಸಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್, ಕಮರ್ಷಿಯಲ್ ಚಿತ್ರಗಳತ್ತ ಚಿತ್ತ ಕೇಂದ್ರೀಕರಿಸಿದ್ದಾರೆ. ಚಿತ್ರವನ್ನು ಮನರಂಜನಾತ್ಮಕವಾಗಿ ಹೇಳಲು ಸತ್ಯ ಮತ್ತು ಸುಳ್ಳಿನ ವಿಷಯ ಆಯ್ಕೆ ಮಾಡಿಕೊಂಡು ಅದಕ್ಕೆ ’ಸತ್ಯ ಹರಿಶ್ಚಂದ್ರ ಎಂದು ಹೆಸರಿಟ್ಟಿದ್ದಾರೆ. ಚಿತ್ರ ಪೂರ್ಣಗೊಂಡಿದ್ದು ಈ ತಿಂಗಳಾಂತ್ಯಕ್ಕೆ ತೆರೆಯ ಮೇಲೆ ಬರಲಿದೆ.

ಬದುಕುವುದಕ್ಕೆ ಬರೀ ಸುಳ್ಳುಗಳನ್ನು ಹೇಳಿಕೊಂಡು ತಿರುಗಾಡುವ ನಾಯಕ ನಿಜ ಜೀವನದಲ್ಲಿ ಸತ್ಯ ಹೇಳಲು ಮುಂದಾದಾಗ ಆಗುವ ಘಟನೆಗಳನ್ನು ಮನರಂಜನಾತ್ಮಕವಾಗಿ ತೆರೆಯ ಮೇಲೆ ಕಟ್ಟಿಕೊಡಲು ಮುಂದಾಗಿದ್ದೇವೆ ಅದಕ್ಕಾಗಿ ಸತ್ಯ ಹರಿಶ್ಚಂದ್ರ ಎಂದು ಹೆಸರಿಡಲಾಗಿದೆ. ರಾಜ್‌ಕುಮಾರ್ ಅಭಿನಯದ ಸತ್ಯ ಹರಿಶ್ಚಂದ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಆ ಚಿತ್ರದಲ್ಲಿನ ’ಕುಲದಲ್ಲಿ ಕೀಳ್ಯಾವುದೂ..; ಹಾಡನ್ನು ಮಾತ್ರ ರೀಮಿಕ್ಸ್ ಮಾಡಲಾಗಿದ್ದು ಮನರಂಜನೆ ನೀಡುವುದು ನಮ್ಮ ಉದ್ದೇಶ ಎಂದು ಮಾತಿಗಿಳಿದರು ನಿರ್ದೇಶಕ ದಯಾಳ್ ಪದ್ಮನಾಭನ್.

ನಿರ್ಮಾಪಕ  ಕೆ. ಮಂಜು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.ಅಲ್ಲದೆ ವಿತರಕ ಜಾಕ್ ಮಂಜು ಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ. ಇಬ್ಬರು ಮಂಜು ಸೇರಿರುವುದರಿಂದ ಚಿತ್ರಕ್ಕೆ ಮತ್ತಷ್ಟು ಆನೆ ಬಲಬಂದಿದೆ. ಚಿತ್ರ ಚೆನ್ನಾಗಿ ಮೂಡಿಬಂದಿದ್ದು ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

ನಿರ್ಮಾಪಕ ಕೆ. ಮಂಜು, ಕಳೆದ ವರ್ಷ ಇದೇ ಸಮಯದಲ್ಲಿ ’ಸಂತು ಸ್ಟ್ರೈಟ್ ಫಾರ್ವಡ್ ಚಿತ್ರ ಬಿಡುಗಡೆ ಮಾಡಿದ್ದೆ. ಈಗ ಸತ್ಯ ಹರಿಶ್ಚಂದ್ರ ಚಿತ್ರ ಬಿಡುಗಡೆಯಾಗುತ್ತಿದೆ. ಇದೊಂದು ಕಾಕತಾಳಿಯ. ಚಿತ್ರ ಚೆನ್ನಾಗಿ ಬಂದಿದೆ. ಎಲ್ಲರ ಸಹಕಾರ ಬೇಕು ಎಂದರು. ನಾಯಕ ಶರಣ್, ಪರೀಕ್ಷೆ ಬರೆದಿದ್ದೇನೆ ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ.

ಚಿತ್ರದಲ್ಲಿ ಎಲ್ಲವೂ ಹೊಸತನದಿಂದ ಕೂಡಿದೆ ಚಿತ್ರ ಇಷ್ಟವಾಗಲಿದೆ ಎಂದು ಹೇಳಿಕೊಂಡರೆ ನಾಯಕಿ ಸಂಚಿತಾ ಪಡುಕೋಣೆ, ಚಿತ್ರದಲ್ಲಿ ನನ್ನದು ಎನ್‌ಐಆರ್ ಪಾತ್ರ. ಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಾಗ ನಾಯಕ ಸಹಾಯಕ್ಕೆ ಬರುತ್ತಾರೆ ಅದು ಹೇಗೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು. ಎಲ್ಲರಿಗೂ ಚಿತ್ರ ಇಡಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೊಬ್ಬ ನಾಯಕಿ ಭಾವನಾ ರಾವ್, ಚಿತ್ರ ಚೆನ್ನಾಗಿ ಬಂದಿದೆ. ಪ್ರೋತ್ಸಾಹ ಮತ್ತು ಸಹಕಾರವಿರಲಿ ಎಂದು ಕೇಳಿಕೊಂಡರು.  ವಿತರಕ ಜಾಕ್ ಮಂಜು, ಚಿತ್ರವನ್ನು ರಾಜ್ಯಾದ್ಯಂತ ೨೦೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಒಳ್ಳೆಯ ಚಿತ್ರವಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿದರು.

Leave a Comment