ಸತತ ಪ್ರಯತ್ನದಿಂದ ಯಶಸ್ವಿ ಸಾಧ್ಯ-ಡಿಸಿ

ಸ್ಪರ್ಧಾತ್ಮಕ ಪರೀಕ್ಷೆ ಪೂರ್ವ ತಯಾರಿ ಕಾರ್ಯಾಗಾರ
ರಾಯಚೂರು.ಫೆ.16- ಸತತ ಪ್ರಯತ್ನದಿಂದ ಯಶಸ್ವಿ ಸಾಧ್ಯವೆಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರು ಹೇಳಿದರು.
ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸೆಂಟರ್ ಆಫ್ ಎಂಪ್ಲಾಯಿಮೆಂಟ್ ಹಾಗೂ ಅಪಾರ್ಚುನಿಟೀಸ್ ಆಂಡ್ ಲರ್ನೀಂಗ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೃಷಿ ವಿಶ್ವವಿದ್ಯಾಲಯ ಪ್ರೇಕ್ಷಾ ಗೃಹದಲ್ಲಿ ಆಯೋಜಿಸಲಾಗಿದ್ದ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಮಾಹಿತಿ ಕಾರ್ಯಗಾರವನ್ನು ಸಸಿ ನೀರು ಹಾಯಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಬದುಕಿನಲ್ಲಿ ಎಸ್ಎಸ್ಎಲ್‌ಸಿ ಮತ್ತು ಪದವಿ ವಿದ್ಯಾರ್ಹತೆಯು ಅತ್ಯಂತ ಮಹತ್ವವಾದದು, ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಕಾಡುವ ಪ್ರಶ್ನೆಯೆಂದರೆ ಮುಂದೇನು? ಮಾಡಬೇಕೆನ್ನುವುದು. ಇದಕ್ಕೆ ಪೋಷಕರು ಮಕ್ಕಳಿಗೆ ಪ್ರೋತ್ಸಾಹನೀಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಮುಂದಾಗುತ್ತಾರೆ.
ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಿ ಸತತ ಪ್ರಯತ್ನದಿಂದ ಯಶಸ್ವಿಸಾಧಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿಭೆ ಮಾತ್ರ ಗುರುತಿಸದೇ ಯೋಚನೆ, ವಿವೇಚನೆಯನ್ನು ಗುರುತಿಸುತ್ತಾರೆ. ಒಂದು ಉದ್ಯೋಗ ಪಡೆಯಬೇಕಾದರೆ ಅದರ ಸಂಪೂರ್ಣ ಮಾಹಿತಿಯನ್ನು ತಿಳಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಯಾವ ಉದ್ಯೋಗವನ್ನು ಪಡೆಯಬೇಕೆಂದು ಯೋಚನೆ ಮಾಡಿರುತ್ತಾರೆ ಅದರಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಉದ್ಯೋಗವನ್ನು ಪಡೆಯಲು ಮುಂದಾಗಬೇಕು.
ಪ್ರತಿದಿನ ಪತ್ರಿಕೆಗಳನ್ನು ಓದಿದರೆ ಯಾವುದೇ ತರಬೇತಿ ಕಾರ್ಯಗಾರಗಳಿಗೆ ಹೋಗಲು ಅವಶ್ಯಕತೆ ಇರುವುದಿಲ್ಲ. ಪತಿಕ್ರೆಗಳಲ್ಲಿ ಪ್ರತಿನಿತ್ಯ ಸಂಭವಿಸುವ ವಿಷಯಗಳನ್ನು ಬರೆದಿರುತ್ತಾರೆ. ಇದರಿಂದ ಜ್ಞಾಪಕ ಶಕ್ತಿಯು ಹೆಚ್ಚು ಬರುತ್ತದೆ ಹಾಗೂ ಬರವಣೆಗೆಯ ತಂತ್ರವು ತಿಳಿಯುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಫ್ರೋಬೆಷನರಿ ಅಧಿಕಾರಿ ಯುಕೇಶ್ ಕುಮಾರ್, ರಾಜುಭಾವಿ ಹಳ್ಳಿ, ಸುಬ್ರಮಣ್ಯ ಆರ್., ಚಿದಾನಂದ, ರಾಜು, ಸಂಪನ್ಮೂಲ ವ್ಯಕ್ತಿಗಳಾದ ನಂಜನಾಯಕ, ಮಲ್ಲಿಕಾರ್ಜುನ, ಮೋಹನ್ ಕುಮಾರ್, ಶಂಕರ್ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಎಂ.ಎಸ್.ಗೋನಾಳ ಸೇರಿದಂತೆ ಇನ್ನಿತರರು ಇದ್ದರು.

Leave a Comment