ಸಡಗರ ಸಂಭ್ರಮದಿಂದ ಜರುಗಿದ ಕೊಟ್ಟೂರೇಶನ ನೂತನ ರಥೋತ್ಸವ

ಕೊಟ್ಟೂರು, ಫೆ.12: ರಾಜ್ಯದ ಪ್ರಸಿದ್ದ ಜಾಥ್ರೆಗಳಲ್ಲಿ ಒಂದಾಗಿರುವ ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ನಿನ್ನೆ ಶ್ರದ್ದಾ ಭಕ್ತಿಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರದಿಂದ ನಡೆಯಿತು. ಕಳೆದ ವರ್ಷ ರಥವನ್ನು ಎಳೆಯುವಾಘಲೇ ಅಚ್ಚು ಮುರಿದು ಬಿದ್ದಿದ್ದರಿಂದ ಈ ವರ್ಷ ನೂತನ ತೇರು ನಿರ್ಮಾಣ ಮಾಡಿತ್ತು.

ಪ್ರತಿವರ್ಷದ ಸಂಪ್ರದಾಯದಂತೆ ದೇವಸ್ಥಾನದಿಂದ ನಂದಿಕೋಲು ಮತ್ತಿತರ ವಾದ್ಯಗಳ ನಿನಾದದೊಂದಿಗೆ ಕೊಟ್ಟೂರೇಶನ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತರುವಾಗ ಗಾಂಧಿ ವೃತ್ತದ ಬಳಿ 5 ದಿನಗಳ ಕಾಲ ಶ್ರೀಸ್ವಾಮಿಗೆ ಹರಕೆ ಹೊತ್ತು ಉಪವಾಸ ವ್ರತ ನಡೆಸಿದ ದಲಿತ ಮಹಿಳೆ ದುರುಗಮ್ಮ ಸ್ವಾಮಿಗೆ ಕಳಸದಾರತಿ ಬೆಳಗಿದಳು. ನಂತರ ಪಲ್ಲಕ್ಕಿ ಉತ್ಸವ ತೇರು ಬಜಾರ್ ಮೂಲಕ ಸಂಚರಿಸಿ ತೇರು ಬಯಲು ತಲುಪಿ ರಥದ ಸುತ್ತ ಧರ್ಮಕರ್ತರ ಬಳಗ 5 ಸುತ್ತು ಪ್ರದಕ್ಷಣೆ ಹಾಕಿ ನಂತರ ರಥದ ಒಳಗೆ ಸ್ವಾಮಿಯನ್ನು ಅನಾವರಣ ಮಾಡಲಾಯಿತು.

ವಿವಿಧ ಬಗೆಯ ಫಲ ಪುಷ್ಪಗಳೊಂದಿಗೆ ಅಲಂಕೃತಗೊಂಡಿದ್ದ ರಥಕ್ಕೆ ಮತ್ತೊಂದಡೆ ಧಾರ್ಮಿಕ ವಿಧಿ ವಿಧಾನಗಳಿಂದ ಹಿರೇಮಠದಿಂದ ಮೂಲಮೂರ್ತಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಸ್ಥಾಪಿಸಿಕೊಂಡು ರಥೋತ್ಸವದ ಮೂರು ಸುತ್ತು ಪ್ರದರ್ಶನ ಮಾಡಿ ರಥದಲ್ಲಿ ಪ್ರತಿಷ್ಟಾಪಿಸಲಾಯಿತು. ಆಗ ನೆರೆದಿದ್ದ ಭಕ್ತ ಸಮೂಹ “ಕೊಟ್ಟೂರೇಶ್ವರ ದೊರೆಯೇ, ನಿನಗಾರು ಸರಿಯೇ, ಸರಿ ಸರಿ ಎಂದವರ ಹಲ್ಲು ಮುರಿಯೇ ಬಹುಪರಾಕ್” ಎಂಬ ಘೋಷಣೆಯೊಂದಿಗೆ ನೈತನ ರಥ ಮುಂದೆ ಸಾಗಿತು. ಜಾಥ್ರೆಗೆ ಬಂದ ಲಕ್ಷಾಂತರ ಭಕ್ತರು ರಥದ ಮಿಣಿಯನ್ನು ಹಿಡಿದು ಎಳೆದು ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಭವ್ಯ ರಥ ಮುಂದೆ ಸಾಗುತ್ತಿದ್ದಂತೆಯೇ ಲಕ್ಷಾಂತರ ಭಕ್ತರು ರಥವನ್ನು ವೀಕ್ಷಿಸಿ ಪುಳಕಿತರಾದರು. ಸ್ವಾಮಿಯ ದಿವ್ಯ ದರ್ಶನ ಪಡೆದರು.ಈ ರಥೋತ್ಸವಕ್ಕೆ ಪಾದಯಾತ್ರೆಯ ಮುಖಾಂತರ ರಾಜ್ಯದ ವಿವಿಧಡೆಯಿಂದ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಪಾದಯಾಥ್ರೆಯ ಮೂಲಕವೇ ಆಗಮಿಸಿದ್ದು ವಿಶೇಷವಾಗಿತ್ತು.
ರಥವು ಪಾದಗಟ್ಟೆಗೆ ತೆರಳಿ ಸನ್ನಿಧಿಗೆ ಸರಾಗವಾಗಿ ಬಂದು ತಲುಪಿತು ರಥೋತ್ಸವದ ಮಿಣಿ (ಹಗ್ಗ) ಎಳೆಯಲು ನೆರೆದಿದ್ದ ಜನಸಾಗರ ಮುಗಿ ಬಿದ್ದು ಬಾರಿ ಪ್ರಮಾಣದ ನೂಕು ನುಗ್ಗಲು ಉಂಟಾಗಿತಾದರು ಯಾವುದೇ ಬಗೆಯ ಗದ್ದಲ ಗಲಾಟೆಗಳು ನಡೆಯಲಿಲ್ಲ.

ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಕ್ರಿಯಾಮೂರ್ತಿ ಮ.ನಿ.ಪ್ರ.ಶಂಕರ ಸ್ವಾಮಿಜಿ, ಚಾನುಕೋಟಿ ಮಠಾಧ್ಯಕ್ಷ ಡಾ.ಸಿದ್ದಲಿಂಗಶಿವಾಚಾರ್ಯ ಸ್ವಾಮಿಜಿ, ನಂದಿಪುರ ಮಹೇಶ್ವರ ಸ್ವಾಮಿಜಿ, ಶಾಸಕ ಎಸ್.ಭೀಮಾನಾಯ್ಕ, ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾತ್ ಮನೋಹರ್, ಎಸ್.ಪಿ.ಆರ್.ಚೇತನ್, ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅನಿಲ್ ಹೊಸಮನಿ, ಸದಸ್ಯರಾದ ಬಿ.ಎಸ್.ವೀರೇಶ್, ಕರಡಿ ಕೊಟ್ರಯ್ಯ, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.

ಒಂದು ವಾರ ಕಾಳ ಜಾತ್ರೆಯ ಪರಸೆ ನಡೆಯಲಿದ್ದು ನಾಡಕ ಕಂಪನಿಗಳಿಂದ ನಾಟಕಗಳ ಪ್ರದರ್ಶನ ಪಳಾರ, ತಿಂಡಿ ತಿನಿಸು, ಬೆಂಡು ಬೆಟಾಸ್‍ಗಳ ಮಾರಾಟ, ಜೊತೆಗೆ ದಿನ ಬಳಕೆ ವಸ್ತುಗಳ ಅಲಂಕೃತ ಗರಹ ಉಪಯೋಗಿ ವಸ್ತುಗಳ ಮಾರಾಟವೂ ಜಾಥ್ರೆಯಲ್ಲಿ ಭರಾಟೆಯಿಂದ ನಡೆದಿದೆ.

Leave a Comment