ಸಡಗರದಿಂದ ಜರುಗಿದ ಫಕ್ಕೀರೇಶ್ವರ ರಥೋತ್ಸವ

ಕುಂದಗೋಳ ಎ21-  ತಾಲೂಕಿನ ಸಂಶಿ ಗ್ರಾಮದಲ್ಲಿ ಗುರುವಾರ ಸಂಜೆ ಶ್ರೀಫಕ್ಕೀರೇಶ್ವರ ರಥೋತ್ಸವವು ಸಡಗರ-ಸಂಭ್ರಮದಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಅಂದು ಬೆಳಿಗ್ಗೆ ದೇವರ ಗದ್ದುಗೆಗೆ ಕುಂಕುಮಾರ್ಚನೆ, ಅಭಿಷೇಕ, ಬಿಲ್ವಾರ್ಚನೆ ಹಾಗೂ ಮಂತ್ರಘೋಷಗಳು ಮೊಳಗಿದವು. ಅನೇಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿ ತಮ್ಮ ಇಷ್ಟಾರ್ಥವನ್ನು ಬೇಡಿಕೊಂಡರು. ನಂತರ ಮದ್ಯಾಹ್ನ ಶ್ರೀಫಕ್ಕೀರ ಸಿದ್ಧರಾಮ ಮಹಾಸ್ವಾಮಿಗಳು ಪಲ್ಲಕ್ಕಿ ಉತ್ಸವವು ಸಕಲ ವಾದ್ಯ-ವೈಭವಗಳೊಂದಿಗೆ ಪಟ್ಟಣ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಭಕ್ತರ ಭಕ್ತಿಭಾವ ಸ್ವೀಕರಿಸಲಾಯಿತು.
ಸಂಜೆ ಮಹಾರಥೋತ್ಸವವು ಡೊಳ್ಳು-ಭಜನೆ-ಕರಡಿ ಮಜಲುಗಳೊಂದಿಗೆ ಪೇಟೆ ಬೀದಯಲ್ಲಿ ಚಲಿಸಿ ನಂತರ ಶ್ರೀಮಠಕ್ಕೆ ಆಗಮಿಸಿತು. ಭಕ್ತರು ರಥಕ್ಕೆ ಹಣ್ಣು-ಉತ್ತತ್ತಿ-ಕೊಬ್ಬರಿ-ಬೆಲ್ಲ ಅರ್ಪಿಸಿ ಕೃತಾರ್ಥರಾದರು. ಈ ಮದ್ಯ ಹರಹರ ಮಹಾದೇವ, ಶ್ರೀಫಕ್ಕೀರೇಶ್ವರರಿಗೆ ಜಯವಾಗಲಿ ಎಂಬ ಜಯಘೋಷಗಳು ಕೇಳಿಬಂದವು.

Leave a Comment