ಸಚಿವ ಪ್ರಹ್ಲಾದ್ ಜೋಷಿ ಸೂಚನೆಗೆ ಮೇರೆಗೆ ಅಕ್ರಮ ಮನೆಗಳ ತೆರವು

ಹುಬ್ಬಳ್ಳಿ, ಜೂ 10- ನ್ಯಾಯಾಲಯದ ಆದೇಶ ಹಿನ್ನೆಲೆ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಸಚಿವ ಪ್ರಹ್ಲಾದ್ ಜೋಶಿ ಅವರ ಸೂಚನೆ ಮೇರೆಗೆ ಎರಡು ದಿನಗಳ ಮಟ್ಟಿಗೆ ಮುಂದೂಡಲಾಗಿದೆ.

ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಕೇಶ್ವಾಪೂರ ಪೊಲೀಸರ ನೈತೃತ್ವದಲ್ಲಿ ತೆರವು‌ ಕಾರ್ಯಚರಣೆ ಕೈಗೊಳ್ಳಲಾಗಿತ್ತು. ಈ ವೇಳೆ ಸ್ಥಳೀಯ ನಿವಾಸಿಗಳು, ನಾವು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಲ್ಲ. ಕಾನೂನು ಬದ್ಧವಾಗಿ ಮನೆಗಳನನ್ನು ಕಟ್ಟಿಕೊಂಡು ವಾಸಿಸುತ್ತಿದ್ದೇವೆ ಎಂದು ವಾದಮಂಡಿಸಿ ಕಾರ್ಯಾಚರಣೆಗೆ ಅಡ್ಡಪಡಿಸಿದರು.
ಆದರೆ ಅಧಿಕಾರಿಗಳು ಕೋರ್ಟ್ ಆದೇಶದಂತೆ ತಾವು ಕಾರ್ಯಾಚರಣೆಗೆ ಮುಂದಾಗಿರುವುದಾಗಿ ಸ್ಪಷ್ಟಪಡಿಸಿದರು. ಆಗ ನಿವಾಸಿಗಳು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊರೆ ಹೋದರು. ಬಳಿಕ ಕೇಂದ್ರ ಸಚಿವರ ಸೂಚನೆ‌ ಮೇರೆಗೆ ಎರಡು ದಿನ ಮನೆ ಖಾಲಿ ಮಾಡಲು ಪೊಲೀಸರು ನಿವಾಸಿಗಳಿಗೆ ಅವಕಾಶ ಕಲ್ಪಿಸಿಕೊಟ್ಟರು.

Leave a Comment