ಸಚಿವ ಡಿಕೆಶಿಗೆ ಸಂಕಷ್ಟ

ಬೆಂಗಳೂರು, ಜ ೧೦- ಸಮ್ಮಿಶ್ರ ಸರ್ಕಾರದ ಪ್ರಭಾವಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್‌ಗೆ ಸಂಕಷ್ಟ ಎದುರಾಗಿದೆ.
ಬೇನಾಮಿ ಆಸ್ತಿ ವಿಚಾರ ಕುರಿತಂತೆ ಡಿಕೆಶಿ ಅವರನ್ನು ವಿಚಾರಣೆ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಇನ್ನೊಂದು ವಾರದಲ್ಲಿ ದೆಹಲಿಯಲ್ಲಿರುವ ಟ್ರಿಬ್ಯೂನಲ್‌ಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ಬೇನಾಮಿ ಆಸ್ತಿ ಕುರಿತಂತೆ ಐವರ ಹೇಳಿಕೆಯನ್ನು ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ಚನ್ನೈ ಮೂಲದ ವ್ಯಕ್ತಿಯ ಹೆಸರಿನಲ್ಲಿದ್ದ ಆಸ್ತಿ ಬಗ್ಗೆಯೂ ತನಿಖೆ ಪೂರ್ಣಗೊಳಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಅಂತಿಮವಾಗಿ ಡಿ ಕೆ ಶಿವಕುಮಾರ್ ಮತ್ತು ಅವರ ತಾಯಿ ಗೌರಮ್ಮ ಅವರನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ. ಬೇನಾಮಿ ಆಸ್ತಿಗೆ ಕುರಿತು ತಮ್ಮ ಬಳಿ ಮಾಹಿತಿ ನೀಡಿಲ್ಲ ಎಂದು ಗೌರಮ್ಮ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಐಟಿ ಅಧಿಕಾರಿಗಳು ಸಾಕ್ಷಿ ಸಮೇತ ತನಿಖೆ ನಡೆಸಿ ಈ ದಾಖಲೆಗಳನ್ನು ಟ್ರಿಬ್ಯೂನಲ್ ಮುಂದೆ ಸಲ್ಲಿಸಲು ಆದಾಯ ತೆರಿಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

Leave a Comment