ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು.ಜ.07- ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿಯವರು ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದು, ಕೂಡಲೇ ಅವರು ರಾಜೀನಾಮೆ ನೀಡಬೇಕೆಂದು ಭಾರತೀಯ ಜನತಾ ಪಕ್ಷ ಜಿಲ್ಲಾ ಸಮಿತಿಯು ಆಗ್ರಹಿಸಿದೆ.
ಅವರಿಂದು ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿಮೆ ಮಾಡಿದ್ದರೂ, ರಾಜ್ಯದಲ್ಲಿ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಹೆಚ್ಚಳ ಮಾಡಿ, ಜನ ಸಾಮಾನ್ಯ ಜೇಬಿಗೆ ಹೊರೆಯಾಗಿದೆ. ಕೂಡಲೇ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ನಿಯಂತ್ರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಆರ್.ತಿಮ್ಮಯ್ಯ, ಎನ್.ಶಂಕ್ರಪ್ಪ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಯು.ದೊಡ್ಡ ಮಲ್ಲೇಶಪ್ಪ, ಶರಣಮ್ಮ ಕಾಮಿರೆಡ್ಡಿ, ರಾಜೇಶ್ವರಿ, ನರಸಪ್ಪ ಯಕ್ಲಾಸಪೂರು, ರಮಾನಂದ ಯಾದವ್, ತಿರುಮಲರೆಡ್ಡಿ, ಶ್ರೀನಿವಾಸ ರೆಡ್ಡಿ, ಬಂಡೇಶ ರಾಮನಾಥ, ಪಿ.ಶ್ರೀನಿವಾಸ ರೆಡ್ಡಿ, ಮಹೇಂದ್ರ ರೆಡ್ಡಿ, ಶಶಿರಾಜ, ಯು.ಚಂದ್ರಶೇಖರ, ರಾಮಚಂದ್ರ ಕಡಗೋಳ, ಕಿರಣ್ ಆದೋನಿ, ಗೋಪಿಶೆಟ್ಟಿ ರಾಜೇಶ, ಯು.ಆಂಜಿನೇಯ್ಯ, ನೀಲಕಂಠ ಗೌಡ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment