ಸಚಿವರಿಗೆ ಶಾಸಕ ಆನಂದ್ ಸಿಂಗ್ ಟಾಂಗ್

ಜಿಂದಾಲ್‍ ಕಂಪನಿಗೆ ಭೂಮಿ ನೀಡುವ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿದೆ. ಭೂಮಿ ನೀಡುವ ಸರ್ಕಾರದ ನಿರ್ಧಾರದ ವಿರುದ್ಧ ಬಳ್ಳಾರಿಯಲ್ಲಿ ಹೋರಾಟ ತೀವ್ರಗೊಂಡಿದೆ.

ಬಳ್ಳಾರಿಯ ಕುಡತಿನಿಯಲ್ಲಿ ಈ ಸಂಬಂಧ ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆಯಲ್ಲಿ ಹೊಸಪೇಟೆ ಶಾಸಕ ಆನಂದ್ ಸಿಂಗ್ ಭಾಗವಹಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಜಿಂದಾಲ್‍ಗೆ ಭೂಮಿಯನ್ನು ಕಾನೂನು ಪ್ರಕಾರ ಕೊಡುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ ಹೇಳುತ್ತಿದ್ದಾರೆ. ಹೀಗೇ ಅವರು ಜಿಂದಾಲ್‍ ಕಂಪನಿ ಪರ ಮಾತನಾಡ್ತಿದ್ರೆ, ಸಂಡೂರು ಕ್ಷೇತ್ರದ ಜನ ಐದು ವರ್ಷದ ನಂತರ ಮತ ಕೇಳಲು ಬಂದಾಗ ಇದಕ್ಕೆ ತಕ್ಕ ಉತ್ತರ ಕೊಡ್ತಾರೆ ಅಂತಾ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೇ ಯಾವುದೇ ಕಾರಣಕ್ಕೂ ಜಿಂದಾಲ್‍ಗೆ ಜಮೀನು ಮಾರಾಟ ಮಾಡಬಾರದು. ಜಿಂದಾಲ್ ವಿರುದ್ಧ ಹೋರಾಟಕ್ಕೆ ಪಕ್ಷಾತೀತವಾಗಿ ಜಿಲ್ಲೆಯ ಶಾಸಕರು ಒಂದಾಗಬೇಕೆಂದು ಆನಂದ್‌ ಸಿಂಗ್ ಕರೆ ನೀಡಿದ್ದಾರೆ.

Leave a Comment